ಬೀಜೋಪಚಾರ ಮಾಡಿ ಬಿತ್ತನೆ ಮಾಡಿ: ಅಧಿಕಾರಿ ವಿಶ್ವಕರ್ಮ

0
44
loading...

ಕನ್ನಡಮ್ಮ ಸುದ್ದಿ-ಕೋಹಳ್ಳಿ : ಪ್ರತಿಯೊಬ್ಬ ರೈತರು ಬೀಜಗಳನ್ನು ಬಿತ್ತನೆ ಮಾಡುವಾಗ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕೆಂದು ಕೃಷಿ ಅಧಿಕಾರಿ ಡಿ ಕೆ ವಿಶ್ವಕರ್ಮ ಹೇಳಿದರು.
ಅವರು ಸಮೀಪದ ಅಡಹಳ್ಳಟ್ಟಿ ಗ್ರಾಮದಲ್ಲಿ ಶನಿವಾರ ಮುಂಗಾರು ಹಂಗಾಮಿನ ಬೀಜ ಕೇಂದ್ರವನ್ನು ಪ್ರಾರಂಭಿಸಿ ಮಾತನಾಡಿ, ತಾಲೂಕಿನಲ್ಲಿ ಪ್ರಥಮ ಬಾರಿಗೆ ಅಡಹಳ್ಳಟ್ಟಿ ಗ್ರಾಮದಲ್ಲಿ ಬೀಜ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಇಲ್ಲಿ ಸೋಯಾಬೀನ್ ಬೀಜವನ್ನು ವಿತರಿಸಲಾಗುತ್ತಿದ್ದು, ಮಳೆಯಾದ ತಕ್ಷಣ ರೈತರು ಬಿತ್ತನೆ ಮಾಡಬೇಕೆಂದು ಹೇಳಿದರು.
ತಾಪಂ ಸದಸ್ಯ ಶಿವು ಗುಡ್ಡಾಪೂರ ಮಾತನಾಡಿ, ರೈತರಿಗೆ ಅಲೇದಾಟವನ್ನು ತಪ್ಪಿಸಲು ಗ್ರಾಮದಲ್ಲಿಯೇ ಬೀಜಗಳನ್ನು ವಿತರಿಸುತ್ತಿದ್ದು. ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಪಿಎಮ್‍ಸಿ ಸದಸ್ಯ ಘಟಿವಾಳಪ್ಪ ಗುಡ್ಡಾಪೂರ, ನಿಂಗಯ್ಯಾ ಮಠಪತಿ, ಮುತ್ತಪ್ಪ ಗುಡದಿನ್ನಿ, ಬಸವಂತ ಗುಡ್ಡಾಪೂರ, ಕೃಷಿ ಸಹಾಯಕ ಬಿ ಎನ್ ಇಂಡಿ, ಪಿ ಎನ್ ವಾಲಿ, ನಾರಾಯಣ ದೊಡಮನಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

loading...