ಬೆಳಗಾವಿಯ ಸಿಸಿಎಫ್‍ಆಗಿ ಕೆ ಡಿ. ಉದುಕುಡಿ ಅಧಿಕಾರ ಸ್ವೀಕಾರ

0
78
loading...


ಕನ್ನಡಮ್ಮ ಸುದ್ದಿ ಬೆಳಗಾವಿ:
ಬೆಳಗಾವಿ ಸಿಸಿಎಫ್‍ಆಗಿ ಅಧಿಕಾರ ಸ್ವೀಖರಿಸಿದ ಕೆ. ಡಿ ಉದುಕುಡಿ ಅವರನ್ನು ಡಿಎಫ್‍ಒ ಬಸವರಾಜ ಪಾಟೀಲ ಹೂಗುಚ್ಚ ನೀಡಿ ಸ್ವಾಗತಿಸಿದರು.
ಉದುಕುಡಿ ಅವರು ಧಾರವಾಡ ಸಿಸಿಎಫ್‍ಆಗಿ ಕಾರ್ಯ ನಿರ್ವಹಿಸುತ್ತಿದ್ದರು ರಾಜ್ಯ ಸರ್ಕಾರದ ಆದೇಶದ ಮೆರೆಗೆ ಶನಿವಾರ ಇವರನ್ನು ಬೆಳಗಾವಿಯ ಸಿಸಿಎಫ್‍ಆಗಿ ವರ್ಗಾವಣೆ ಮಾಡಿದ ಹಿನ್ನಲೆಯಲ್ಲಿ ಇಂದು ಅಧಿಕಾರ ಸ್ವೀಕಾರಮಾಡಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಹಿಂದೆ ಬೆಳಗಾವಿಯ ಸಿಸಿಎಫ್‍ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಜಯ ಮೋಹನರಾಜ್ ಅವರು ಚಿಕ್ಕಮಂಗಳೂರಿನ ಸಿಸಿಎಫ್‍ಆಗಿ ವರ್ಗಾವಣೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಾಮಜಿಕ ಅರಣ್ಯ ವಿಭಾಗದ ಡಿಎಫ್‍ಒ ಮೊರಪ್ಪ, ಬಾಗಲಕೋಟ ಡಿಎಫ್‍ಒ ಎನ್ ಡಿ ಸುದರ್ಶನ, ಗೋಕಾಕ್ ಡಿಎಫ್‍ಒ ದೇವರಾಜ ಸೇರಿದಂತೆ ಇತರ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು

loading...