ಭಾರತೀಯ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ

0
27
loading...

ಸಿಡ್ನಿ: ಭಾರತೀ ಪ್ರಜೆಗಳು ವಿದೇಶದಲ್ಲಿ ವಾಸವಾಗಿದ್ದು ಅವರ ಮೇಲೆ ನಡೆಯುತ್ತಿರುವ ಹಲ್ಲೆಗಳು ಮಾತ್ರ ನಿಂತಿಲ್ಲ. ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾದಲ್ಲಿ ಭಾರತೀಯ ಕ್ಯಾಬ್ ಡ್ರೈವರ್ ಮೇಲೆ ದುಷ್ಕರ್ಮಿಗಳು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿ ಡ್ರೈವರ್ ದಂಪತಿಯನ್ನು ಕ್ಯಾಬ್‍ನಲ್ಲಿ ಕರೆದುಕೊಂಡು ಮ್ಯಾಕ್‍ಡೊನಾಲ್ಡ್‍ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಹಿಳೆ ಕಾರಿನ ಬಾಗಿಲು ತೆಗೆದು ಬೇರೆ ಕಾರುಗಳ ಬಗ್ಗೆ ಕಮೆಂಟ್ ಮಾಡಲು ಮುಂದಾಗಿದ್ದಾಳೆ. ಆ ವೇಳೆ ಡ್ರೈವರ್ ಆಕೆಗೆ ಎಚ್ಚರಿಕೆ ನೀಡಲು ಮುಂದಾಗಲು ಹೋದಾಗ ದಂಪತಿ ವಾಹನಕ್ಕೆ ಹಾನಿ ಮಾಡಿದ್ದಾರೆ. ಜತೆಗೆ ಆತನ ಮೇಲೆ ಹಲ್ಲೆ ಮಾಡಿ, ನಿಂದಿಸಿದ್ದಾರೆ.
ರಸ್ತೆಯಲ್ಲಿ ಆತನ ಮೇಲೆ ಹಲ್ಲೆ ಮಾಡಿ ಡ್ರೈವರ್‍ಗೆ ಗಾಯಗೊಳಿಸಿದ್ದಾರೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಡ್ರೈವರ್ ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಡ್ರೈವರ್ ಪರವಾಗಿ ವ್ಯಕ್ತಿಯೋರ್ವ ಸಾಕ್ಷಿ ಹೇಳಲು ಮುಂದಾಗಿದ್ದಾನೆ.

loading...