loading...

ನ್ಯೂಯಾರ್ಕ್: ಭಾರತೀಯ ಮೂಲದ ವಿದ್ಯಾರ್ಥಿಯೋರ್ವ ಅಮೆರಿಕದಲ್ಲಿ ಶವವಾಗಿ ಪತ್ತೆಯಾಗಿದ್ದು, ಮೃತನನ್ನು ಕಾರ್ನೆಲ್ ವಿವಿ ವಿದ್ಯಾರ್ಥಿ ಆಲಾಪ್ ನರಸೀಪುರ ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳು ತಿಳಿಸಿರುವಂತೆ ಕಾರ್ನೆಲ್ ವಿವಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ವಿದ್ಯಾರ್ಥಿಯಾಗಿದ್ದ ಆಲಾಪ್ ನರಸೀಪುರ ಶವ ಇಥಾಕ ಸಮೀಪದ ಫಾಲ್ ಕ್ರೀಕ್ ಬಳಿ ಪತ್ತೆಯಾಗಿತ್ತು. ಶವವನ್ನು ವಶಕ್ಕೆ ಪಡೆದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಆತ ಕಾರ್ನೆಲ್ ವಿವಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಆಲಾಪ್ ಮೇ 17ರಿಂದ ನಾಪತ್ತೆಯಾಗಿದ್ದೆ. ಕೊನೆಯ ಬಾರಿಗೆ ಮೇ 17ರ ಬೆಳಗ್ಗೆ ಆಲಾಪ್ ವಿವಿ ಆವರಣದಲ್ಲಿ ಕಾಣಿಸಿಕೊಂಡಿದ್ದ ಎಂದು ಅವರ ಸಹಪಾಠಿಗಳು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕಾರ್ನೆಲ್ ವಿವಿ ಪೊಲೀಸರು ತನಿಖೆ ನಡೆಸುತ್ತಿದ್ದು, ಆಲಾಪ್ ನರಸೀಪುರ ವಿವಿಯ ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷನಾಗಿದ್ದ ಎಂದು ತಿಳಿದುಬಂದಿದೆ. ಆಲಾಪ್ ನಿಧನಕ್ಕೆ ಸಹಪಾಠಿಗಳು ತೀವ್ರ ದುಃಖ ವ್ಯಕ್ತಪಡಿಸಿದ್ದು, ಆತ ಮಹತ್ವಾಕಾಂಕ್ಷೆಯ ವಿದ್ಯಾರ್ಥಿಯಾಗಿದ್ದ ಎಂದು ಹೇಳಿದ್ದಾರೆ.

loading...