loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ಪಟ್ಟಣವೂ ಸೇರಿದಂತೆ ತಾಲೂಕಿನ ಸುತ್ತ ಮುತ ಗ್ರಾಮಗಳಲ್ಲಿ ಬುಧವಾರ ಸಂಜೆ ಭಾರಿ ಗಾಳಿ ಸಮೇತ ಮಳೆ ಸುರಿಯಿತು ಭಾರಿ ಗಾಳಿಗೆ ಪಟ್ಟಣದ ಸುಮಾರು ಮನೆಗಳ ಮೇಲ್ಚಾವಣಿಗಳು ಹಾರಿ ಹೋಗಿದೆ, ಹಾಗೂ ವಿದ್ಯುತ ಕಂಬ, ಮತ್ತು ಮರಗಳೂ ನೆಲಕ್ಕೆರುಳಿ ಬಿದ್ದು ಅಪಾರ ಹಾನಿಯಾಗಿದೆ.
ಬುಧವಾರ ಸಂಜೆ ತಾಲೂಕಿನ ಕರಗಿನ ಕೊಪ್ಪ, ಕುಂದರ್ಗಿ,ಗ್ರಾಮಗಳಲ್ಲಿ ಮತ್ತು ಪಟ್ಟಣದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಪಟ್ಟಣದ ಇಂದಿರಾ ನಗರದ ಮಾಬೂಲಿ ಶೇಖ, ಸಬೀಯಾ ಅತ್ತಾರ, ಸೇರಿದಂತೆ ಹಲವು ಮನೆಗಳ ಮೇಲ್ಚಾವಣಿಗೆ ಹಾಕಿದ ತಗಡುಗಳು ಸಂಪೂರ್ಣ ಹಾರಿ ಹೋಗಿ ನುಜ್ಜು ಗುಜ್ಜಾಗಿ ಬಿದ್ದಿವೆ. ಇದರಲ್ಲಿ ಒಂದು ಮನೆಯ ಸಂಪೂರ್ಣ ಮೇಲ್ಚಾವಣಿಯೂ ಹಾರಿ ಚಂದ್ರಪ್ಪ.ಲ.ತಳವಾg,À ಮನೆಯ ಮೇಲೆ ಬಿದ್ದು ಅಪಾರ ನಷ್ಟವಾಗಿದೆ. ಅದೃಷ್ಟವಶಾತ್ ಮನೆಯಲ್ಲಿನ ಯಾರಿಗೂ ಯಾವುದೇ ಪ್ರಾಣಹಾನಿಯಾಗಿಲ್ಲ. ಅಲ್ಲದೆ ಗಾಳಿಯ ರಭಸಕ್ಕೆ ಮಾಬೂಲಿ ಶೇಖ ಮನೆಯ ಸಂಪೂರ್ಣ ಶೀಟ್ ಹಾರಿ ಶ್ರೀ ಲಕ್ಷ್ಮಿ ದೇವಸ್ಥಾನದ ಮುಂದೆ ಹೋಗಿ ಬಿದ್ದಿವೆ. ಭಾರಿ ಗಾಳಿಗೆ ಸಿಲುಕಿ ಅನೇಕ ಕಡೆಗಳಲ್ಲಿ ಹಂಚು, ಶೀಟ್‍ಗಳು ಹಾರಿಹೋಗಿವೆ. ಪಟ್ಟಣ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಗಾಳಿಯ ರಭಸಕ್ಕೆ ಸಾಕಷ್ಟು ಮರಗಳು,ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದಿª.É ಇದರಿಂದ ಸುಮಾರು 5ಗಂಟೆ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು. ಒಟ್ಟಿನಲ್ಲಿ ಬುಧವಾರ ಸಂಜೆ ಭಾರಿ ಗಾಳಿಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದುಬಂದಿದೆ

loading...