ಭ್ರಷ್ಟ ಅಧಿಕಾರಿ ವಿರುದ್ಧ ಬಂಡೆದ್ದ ಗ್ರಾಮಸ್ಥರು

0
224
loading...

ಕನ್ನಡಮ್ಮ ಸುದ್ದಿ

ಚಿಕ್ಕೋಡಿ 11 :  ಗ್ರಾಮ ಲೆಕ್ಕಾಧಿಕಾರಿ ಪ್ರತಿ ಕೆಲಸ ಕಾರ್ಯಕ್ಕೆ  ರೈತರಿಂದ ಸಾವಿರ-ಸಾವಿರ ಹಣವನ್ನು ಲಂಚದ ರೂಪದಲ್ಲಿ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ಗ್ರಾ ಪಂ ಅಧ್ಯಕ್ಷರ ನೇತೃತ್ವದಲ್ಲಿ  ಗ್ರಾಮಸ್ಥರು ಅಧಿಕಾರಿಯನ್ನು ಲಂಚ ಪಡೆಯುವಾಗ ಹಿಡಿದು ಕಚೇರಿಯಿಂದ  ಹೊರಹಾಕಿ ಬೀಗ ಜಡಿದ ಘಟನೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಕಲ್ಲೋಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ .ಜಿ.ಎಸ್. ಸಸಾಲಟ್ಟಿ ಕಳೆದ ಮೂರು ವರ್ಷಗಳಿಂದ ಜನರನ್ನು ಕಾಡಿಸಿ-ಪೀಡಿಸಿ ಹಣ ವಸೂಲಿ ಮಾಡುತ್ತಿದ್ದರು. ಆದರೂ ಸಹ ಸುಮ್ಮನಿದ್ದ ಜನ ಇತ್ತೀಚಿಗೆ ಮತ್ತಷ್ಟು ಲಂಚಗುಳಿತನ ಹೆಚ್ಚಾಗಿದ್ದರಿಂದ ಬೇಸತ್ತಿದ್ದರು. ಈ ಕುರಿತು ಹಲವಾರು ಬಾರಿ ಗ್ರಾಮ ಪಂಚಾಯತ ಸದಸ್ಯ ಮಂಡಳಿ ಅವರಿಗೆ ತಾಕೀತು ಮಾಡಿತ್ತು. ಆದರೂ ಸಹ ತನ್ನದೇ ಚಾಳಿ ಮುಂದುವರೆಸಿದ್ದ ಸಸಾಲಟ್ಟಿ ಅವರಿಗೆ ಇಂದು ಜನ ಶಾಕ್ ನೀಡಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮ ಲೆಕ್ಕಾಧಿಕಾರಿ ಸರಿಯಾಗಿ ಕಛೇರಿಗೆ ಬರುತ್ತಿರಲಿಲ್ಲ ಎಂಬ ಅರೋಪ ಇದರ ಜೊತೆ ಸೇರಿದಂತೆ
ಅಲ್ಲದೇ ಈ ಲಂಚಕೋರ ಅಧಿಕಾರಿ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ತ್ವರಿತ ಕ್ರಮ ಕೈಕೊಳ್ಳಬೇಕೆಂಬುದು ಜನರ ಆಗ್ರಹವಾಗಿದೆ.
loading...