ಮಕ್ರಮ ಮರಳು, ಮದ್ಯ ಮಾರಾಟ ಮಾಡುತ್ತಿದ್ದ 11 ಜನರ ಸೆರೆ

0
25
loading...

ಕನ್ನಡಮ್ಮ ಸುದ್ದಿ-ಬೆಳಗಾವಿ:
ಜಿಲ್ಲೆಯಾದ್ಯಂತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಅಕ್ರಮ ಮರಳು, ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 11 ಜನರನ್ನು ಬಂಧಿಸಿ 35,634 ರೂ. ಮೌಲ್ಯದ ಮದ್ಯ ಹಾಗೂ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ, ಎಂಟು ಜನರನ್ನು ಬಂಧಿಸಿ, ಎರಡು ಲಾರಿ ಹಾಗೂ 32 ಸಾವಿರ ರೂ. ಮೌಲ್ಯದ ಮರಳುನ್ನು ಜಪ್ತಿ ಮಾಡಿದ್ದಾರೆ.
ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮೂರು ಜನರನ್ನು ಬಂಧಿಸಿ, 3,634 ರೂ. ಮೌಲ್ಯದ ಮದ್ಯ ಬಾಟಲಿಗಳನ್ನು ವಶಪಡಿಸಿಕೊಂಡು ಮೂರು ಪ್ರಕರಣವನ್ನು ದಾಖಲಿಸಿದ್ದಾರೆ.

loading...