ಮತ್ತೇ ಖ್ಯಾತೆ ತೆಗೆದ ಎಂಇಎಸ್

0
203
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:5 ಜಿಲ್ಲೆಯ ಗಡಿ ಭಾಗದಲ್ಲಿ ಮರಾಠಿ ಭಾಷೀಕರು ಹೆಚ್ಚಿರುವುದರಿಂದ ಸರಕಾರಿ‌ ಖಾಗದ ಪತ್ರವನ್ನು‌ ಮರಾಠಿಯಲ್ಲಿ‌ ನೀಡುವಂತೆ ಆಗ್ರಹಿಸಿ‌ ಶುಕ್ರವಾರ ಎಂಇಎಸ್ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗಡಿ ಭಾಗದ ಅಂಚಿನಲ್ಲಿ ಸಾಕಷ್ಟು ಜನರು ಮರಾಠಿ‌ ಭಾಷಿಕರು ಹೆಚ್ಚಿರುವುದರಿಂದ ಸುಮಾರು ವಷ೯ಗಳಿಂದ ಬೇಡಿಕೆ ಇದೆ. ಸರಕಾರಿ ಕಾಗದ ಪತ್ರವನ್ನು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬೆಳಗಾವಿ ನಗರದಲ್ಲಿ ನಡೆದ ತೆರವು ಕಾಯಾ೯ಚರಣೆಯಲ್ಲಿ ನಿವೇಶನಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಪಾಲಿಕೆಯಿಂದ ತೆರಿಗೆ ಹೆಚ್ಚಳ ಮಾಡುತ್ತಿದ್ದಾರೆ ಅಲ್ಲದೆ ಹಲಗಾ ಗ್ರಾಮದಲ್ಲಿ ರೈತರ ಜಮೀನನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಮನೋಹರ ಕಿಲ್ಲೇಕರ, ಸರಸ್ವತಿ ಪಾಟೀಲ, ನಾಗೇಶ ಸಾತೇರಿ, ಮದನ ಬಾಮನೆ, ಮಾಲೋಜಿ ಅಷ್ಟೇಕರ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...