ಮದುವೆ ಯಾಗುವುದಾಗಿ ಯುವತಿಯ ಜೊತೆ ದೈಹಿಕ ಸಂಬಂಧ : ವ್ಯಕ್ತಿಯ ಬಂಧನ

0
110
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಮದುವೆಯಾಗುತ್ತೆನೆಂದು ನಂಭಿಸಿ ಸತತ 8 ವರ್ಷಗಳಿದ ಯುವತಿಯ ಜೊತೆ ದೈಹಿಕ ಸಂಬಂಧವಿಟ್ಟುಕೊಂಡು ಧೀಡಿರನೆ ಬೇರೆ ಯುವತಿಯ ಮದುವೆ ಯಾಗಲು ಹೊರಟಿದ್ದ ಯುವಕನನ್ನು ರಾಮದುರ್ಗ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ಶನಿವಾರ ನಡೆದಿದೆ.
ಆರೋಪಿಯು ರಾಮದುರ್ಗ ತಾಲೂಕಿನ ನಾಗನೂರು ಗ್ರಾಮದ ಸದಾಶಿವ ರಾಮಣ್ಣ ಕಬಾಡದ (30) ಎಂಬುವವನು ಮಿಲ್ಟ್ರೀಯಲ್ಲಿ ಕಾರ್ಯನಿರ್ವಹಿಸುತಿದ್ದು 8 ವರ್ಷಗಳ ಹಿಂದೆ ಹೆಸರೂರು ಗ್ರಾಮದ ಸಂಗೀತಾ (ಹೆಸರು, ಊರು ಬದಲಿಸಲಾಗಿದೆ) ಎಂಬುವವಳನ್ನು ಮದುವೆಯಾಗುವುದಾಗಿ ನಂಭಿಸಿ ಅವಳ ಜೊತೆ ದೈಹಿಕ ಸಂಬಂಧ ನಡೆಸಿ ಈಗ ಅವಳನ್ನು ಬಿಟ್ಟು ಭಾನುವಾರ ಇನ್ನೋರ್ವ ಯುವತಿಯ ಜೊತೆ ಮದುವೆಯಾಗಲು ಹೋರಟಿದ್ದ. ಈ ಸುದ್ದಿ ತಿಳಿಯುತ್ತಿದ್ದಲೇ ಯುವತಿ ಯುವಕನನ್ನು ಮದುವೆಯಾಗಲು ಕೇಳಿಕೊಂಡಿದ್ದಾಳೆ ಇದಕ್ಕೆ ಮಣ್ಣನೆ ಸೂಚಿಸದೆ ಇದ್ದಾಗ ರಾಮದುರ್ಗ ಪೊಲೀಸ್ ಠಾಣೆಗೆ ದೂರು ನಿಡಿದ್ದಾಳೆ. ಇದರನ್ವಯ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ಚಾಲ್ತಿಯಲ್ಲಿದೆ.

loading...