ಮದುವೆ ಸಂದರ್ಭದಲ್ಲಿ ಪ್ರೇಯಸಿಯ ಮನೆಯವರನ್ನು ಕಂಡು ಓಡಿ ಹೋದ ಯುವಕ

0
408
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:27 ಪ್ರೀತಿಸಿ ಮದುವೆ ಮಾಡಿಕೊಳ್ಳಲು ವಿವಾಹ ನೋಂದಣಿ ಕಚೇರಿಗೆ ಆಗಮಿಸಿದ ಪ್ರೇಮಿಗಳಿಬ್ಬರು ತಂದೆ ತಾಯಿಗಳನ್ನು ಕಂಡ ಕೂಡಲೇ ಓಡಿ ಹೋದ ಘಟನೆ ಶನಿವಾರ ನಡೆದಿದೆ.
ಮಹಾದ್ವಾರ ನಗರದ ರಹವಾಸಿಯಾದ ಶುಭಂ ವಿಜಯ ಲೋಹರ ಎಂಬುವನ್ನು ಯುವತಿಯೊರ್ವಳನ್ನು ಪ್ರೀತಿ ಮಾಡಿ ವಿವಾಹ ವಾಗುತ್ತಿದ್ದ ಸಂದರ್ಭದಲ್ಲಿ ಯುವತಿಯ ತಾಯಿ ಹಾಗೂ ತಂದೆ ಸೇರಿಕೊಂಡು ಯುವತಿಯೊಂದಿಗೆ ವಿವಾಹ ನೋಂದಣಿ ಕಚೇರಿ ಎದುರು ಜಗಳವಾಡುತ್ತಿದ್ದ ಸಂದರ್ಭದಲ್ಲಿ ಮಾರ್ಕೇಟ್ ಪೊಲೀಸರು ಮಧ್ಯಸ್ಥಿಕೆ ವಹಿಸಿ ಸಮಾದಾನ ಪಡೆಸಿ ಠಾಣೆಗೆ ಕರೆದೊಯ್ದಿದ್ದಾರೆ.
ಶುಕ್ರವಾರ ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಶನಿವಾರ ವಿವಾಹ ನೋಂದಣಿ ಕಚೇರಿಯಲ್ಲಿ ಯುವಕನೊಂದಿಗೆ ಮದುವೆಯಾಗಲು ಬಂದ ಮಗಳನ್ನು ಕಂಡು ಜಗಳವಾಡಿದ್ದಾರೆ. ಮದುವೆಯನ್ನು ತಡೆಯುವಲ್ಲಿ ಯುವತಿಯ ಪೋಷಕರು ಯಶಸ್ವಿಯಾಗಿದ್ದಾರೆ. ಆದರೆ ಯುವಕ ಮಾತ್ರ ಪೊಲೀಸರನ್ನು ಕಂಡು ಪರಾರಿಯಾಗಿದ್ದಾನೆ. ಸಾಕ್ಷಿಗಾಗಿ ಬಂದವರು ಮಾರ್ಕೇಟ್ ಪೊಲೀಸರ ವಶದಲ್ಲಿದ್ದಾರೆ.
loading...