ಮಲ್ಚಿಂಗ್ ವಿಧಾನದಿಂದ ತರಕಾರಿ ಬೆಳೆಯಲ್ಲಿ  ಹೆಚ್ಚು  ಇಳುವರಿ

0
62
loading...

ಭೂಮಿಯಲ್ಲಿ ಕಳೆ ಮುಕ್ತ | ಫಲವತ್ತತೆಯ ಜೊತೆಗೆ, ಅಧಿಕ ಲಾಭ
ಕೆ ಎಮ್ ಪಾಟೀಲ.
ಬೆಳಗಾವಿ: ಜಿಲ್ಲೆಯಲ್ಲಿ ಕೆಲವು ತಾಲೂಕಿನಲ್ಲಿ ತರಕಾರಿ ತೋಟಗಳಲ್ಲಿ ಮಲ್ಚಿಂಗ್ ವಿಧಾನದಿಂದ ರೈತರು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಡರಾಗಿದ್ದಲ್ಲದೇ ಭೂಮಿಯ ಫಲವತ್ತತೆಯನ್ನು ಕಾಪಾಡುವುದರ ಜೊತೆಗೆ ಕಡಿಮೆ ನೀರನ್ನು ಬಳಸುವುದರ ಮೂಲಕ ಉತ್ತಮ ಬೆಳೆಗಳನ್ನು ಬೆಳೆದಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ರೈತರು ತಮ್ಮ ತೋಟಗಳಲ್ಲಿ ಬೆಳೆಯುವಂತ ಕೆಲವು ತರಕಾರಿಗಳಿಗೆ ಮಲ್ಚಿಂಗ್ ವಿಧಾನ ಬಳಸಿ ತರಕಾರಿಗಳನ್ನು ಬೆಳೆಯಲಿ ಎಂಬ ಉದ್ದೇಶದಿಂದ ಕಳೆದ ವರ್ಷ ಸುಮಾರು 65 ಹೇಕ್ಟರ್ ಕ್ಷೇತ್ರಕ್ಕೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷಿನ್, ಸಮಗ್ರ ತೋಟಗಾರಿಕೆ ಯೋಜನೆ ಅಡಿ ಅರ್ಹ ರೈತರಿಗೆ ರೀಯಾಯ್ತಿ ದರದಲ್ಲಿ ಮಲ್ಚಿಂಗ್ ವಿಧಾನಕ್ಕೆ ಪ್ರೋತ್ಸಾಹಧನವನ್ನು ನೀಡುತ್ತಿದ್ದಾರೆ.
ಇದರ ಸಹಾಯ ಪಡೆದು ವರ್ಷದಿಂದ ವರ್ಷಕ್ಕೆ ರೈತರು ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ತರಕಾರಿಯನ್ನು ಅತೀಯಾಗಿ ಮಲ್ಚಿಂಗ್ ವಿಧಾನದಿಂದ ಬೆಳೆಯುತ್ತಾರೆ. ಈ ವಿಧಾನ ಬಳಸಿ ಕೃಷಿ ಮಾಡುವುದರಿಂದ ಕೃಷಿಯಲ್ಲಿ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಎಮ್ ಎಸ್. ಹಿಂಡಿವಳಿ ಕನ್ನಡಮ್ಮಗೆ ತಿಳಿಸಿದರು.
ಮಲ್ಚಿಂಗ್ ವಿಧಾನದಿಂದ ಏನೇನು ಲಾಭ: ಮಲ್ಚಿಂಗ್ ವಿಧಾನದಿಂದ ಭೂಮಿಯಲ್ಲಿ ಕಳೆಯನ್ನು ನಿಂಯತ್ರಣ ವಾಗುತ್ತದೆ. ಅದರ ಜೊತೆಗೆ ತರಕಾರಿಗೆ ಡ್ರಿಪಿಂಗ್ ಮೂಲಕ ನಿರನ್ನು ಹಾಯಿಸುವುದರಿಂದ ನೀರನ್ನು ಮಿತವಾಗಿ ಉಪಯೋಗಿಸಿ ಹೆಚ್ಚು ಇಳುವರಿಯನ್ನು ಪಡೆಯಬಹುದು. ಹಾಗೇಯೆ ಭೂಮಿಯ ಫಲವತ್ತತೆ ಸದಾ ಕಾಪಾಡಿಕೊಳ್ಳಲು ಸಹಾಯಕವಾಗಿದೆ.
ಚಿಕ್ಕೋಡಿ ತಾಲೂಕಿನ ಹಿರೇಕುಡಿ ಗ್ರಾಮದ ಧರ್ಮೇಂದ್ರ ಮಹಾವೀರ ಬಾಳಿಕಾಯಿ ಎಂಬ ರೈತನು ಮಲ್ಚಿಂಗ್ ವಿಧಾನ ಬಳಸಿ 1 ಎಕರೆ ಭೂಮಿಯಲ್ಲಿ ಟೊಮೊಟೊ ಬೆಳೆದು ಸುಮಾರು 3 ಲಕ್ಷ ಲಾಭವನ್ನು ಗಳಿಸಿದ್ದಾರೆ. ಇವರು ಹೇಳುವ ಪ್ರಕಾರ ತರಕಾರಿಯನ್ನು ಮಲ್ಚಿಂಗ್ ವಿಧಾನದಿಂದ ತರಕಾರಿ ಬೆಳೆದರೆ ಅತೀಯಾಗಿ ಇಳುವರಿಯು ಬರುವುದರ ಜೊತೆಗೆ ಹೆಚ್ಚು ಲಾಭವನ್ನು ಪಡೆದಿದ್ದರಿಂದ ಸುತ್ತಮುತ್ತಲಿನ ರೈತರು ಈ ವಿಧಾನಕ್ಕೆ ಮೊರೆಹೋಗುತ್ತಿದ್ದಾರೆ ಎಂದು ತಿಳಿಸಿದರು.
ಒಂದು ಎಕರೆಗೆ ಮಲ್ಚಿಂಗ್ ವಿಧಾನದಿಂದ ಖರ್ಚು: ಒಂದು ಎಕರೆಯಲ್ಲಿ ಟೊಮೊಟೊ ಬೆಳೆಯಬೇಕೆಂದರೆ ಮಲ್ಚಿಂಗ್ ಹಾಳಿಗೆ 13 ರಿಂದ 15 ಸಾವಿರ ಖರ್ಚು ಬರುತ್ತದೆ. ಇದನ್ನು ಎರಡು ಬಾರಿ ಉಪಯೋಗಿಸಬಹುದು. ಈ ವಿಧಾನಕ್ಕೆ ಕಡ್ಡಾಯವಾಗಿ ಡ್ರಿಪಿಂಗ್ ಮೂಲಕ ನೀರನ್ನು ಬಿಡಬೇಕು. ಹಾಗಾಗಿ ಇದರಿಂದ ಕೆಲವೊಬ್ಬರ ತೊಟದಲ್ಲಿ ನೀರಿನ ಕಡಿಮೆ ಪ್ರಮಾಣ ಇದ್ದವರಿಗೂ ಇದೊಂದು ಉತ್ತಮ ವಿಧಾನವಾಗಿದೆ.
ಮಲ್ಚಿಂಗ್ ಯಾವುದಕ್ಕೆ ಬಳಕೆ ಮಾಡಬಹುದು: ಹೆಚ್ಚಾಗಿ ತರಕಾರಿಗಳಿಗೆ ಉಪಯೋಗಿಸಬಹುದು. ಮುಖ್ಯವಾಗಿ ಟೊಮೊಟೊ, ಡೊಣ್ಣ ಮೆಣಸಿನಕಾಯಿ, ಮೆಣಸಿನಕಾಯಿ, ಕಲ್ಲಂಗಡಿ, ಕರಬುಜ, ಸೌತೆ, ಬದನೆ, ಹಿರೆ, ಹಾಗಲಕಾಯಿ, ಸೇರಿದಂತೆ ಎಲ್ಲ ತರಕಾರಿಗಳಿಗೆ ಬಳಕೆ ಮಾಡಬಹುದು.
ಬಾಕ್ಸ್
ರೈತರು ತಮ್ಮ ಭೂಮಿಯಲ್ಲಿ ತರಕಾರಿಯನ್ನು ಬೆಳೆಯಲು ಮಲ್ಚಿಂಗ್ ವಿಧಾನವನ್ನು ಉಪಯೋಗಿಸಿದರೆ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯ. ಅಲ್ಲದೇ ಭೂಮಿಯಲ್ಲಿ ಕಳೆ ನಿಯಂತ್ರಣವಾಗಿ ಕಾರ್ಮಿಕರ ಖರ್ಚು ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನ ರೈತರು ಮಲ್ಚಿಂಗ್ ಕೃಷಿ ಪದ್ಧತಿಗೆ ಮೊರೆ ಹೋಗುತ್ತಿದ್ದಾರೆ.
-ಎಮ್ ಎಸ್ ಹಿಂಡಿವಳಿ ತೋಟಗಾರಿಕೆ ಸಹಾಯಕ ನಿರ್ದೇಶಕರು, ಚಿಕ್ಕೋಡಿ.
ಬಾಕ್ಸ್
ಮಲ್ಚಿಂಗ್ ವಿಧಾನ ಬಳಸಿ ಕೃಷಿ ಮಾಡುವುದರಿಂದ ಸಾಕಷ್ಟು ಉಪಯೋಗವಾಗಿದೆ. ಅಲ್ಲದೇ ಹೆಚ್ಚು ಇಳುವರಿ ತೆಗೆಯಲು ಸಾಧ್ಯವಾಗಿದೆ ಒಂದು ಎಕರೆ ಭೂಮಿಯಲ್ಲಿ 25 ಟನ್ನ ಟೊಮೊಟೊವನ್ನು ಬೆಳೆದಿದ್ದೇನೆ. ಹಾಗಾಗಿ ಪ್ರತಿ ಬೆಳೆಗೂ ಇದೇ ವಿಧಾನವನ್ನು ಅಳವಡಿಸಿಕೊಂಡಿದ್ದೆನೆ ಈ ವಿಧಾನದಿಂದ ಭೂಮಿಯು ಕಳೆ ಮುಕ್ತವಾಗಿದೆ.
-ಧರ್ಮೇಂದ್ರ ಮಹಾವೀರ ಬಾಳಿಕಾಯಿ, ಹಿರೇಕುಡಿ ಗ್ರಾಮದ ರೈತ

loading...