loading...

ಕನ್ನಡಮ್ಮ ಸುದ್ದಿ-ಬೆಟಗೇರಿ : ಸಮೀಪದ ಗೋಸಬಾಳ ಗ್ರಾಮದ ಶ್ರೀ ಮಾರುತಿ ದೇವರ ಓಕುಳಿ ಇದೇ ಶನಿವಾರ ಮೇ 6ರಿಂದ ಸೋಮವಾರ ಮೇ 8 ರವರೆಗೆ ವಿಜೃಂಭನೆಯಿಂದ ಜರುಗಿತು.
ಶನಿವಾರ ಮೇ.6 ರಂದು ಮುಂಜಾನೆ 7ಗಂ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ಮತ್ತು ಕುಂಕುಮ ಪೂಜೆ ಕಾರ್ಯಕ್ರಮ ನಡೆದು, ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡ ಪೂಜೆ, ರವಿವಾರ ಮೇ7 ರಂದು ಮುಂಜಾನೆ 7ಗಂ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ನಂತರ ಸಾಯಂಕಾಲ 5 ಗಂಟೆಗೆ ನಡುಓಕುಳಿ ಸಡಗರದಿಂದ ನಡೆಯಿತು.
ಸೋಮವಾರ ಮೇ8 ರಂದು ಮುಂಜಾನೆ 6ಗಂ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ನಂತರ ವಿವಿಧ ಗ್ರಾಮಗಳಿಂದ ಶ್ರೀ ಪಲ್ಲಕ್ಕಿಗಳ ಆಗಮನ, ಪುರಜನರಿಂದ ಪೂಜೆ-ಪುನಸ್ಕಾರ, ನೈವೈದ್ಯ ಅರ್ಪಣೆ ಸಾಯಂಕಾಲ 5 ಗಂಟೆಗೆ ಓಕಳಿ ಕೊಂಡಕ್ಕೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ದೇವರುಗಳ ಪಲ್ಲಕ್ಕಿ ಪ್ರದಕ್ಷೀಣೆ, ನಂತರ ಕಡೆಓಕಳಿ ನಡೆದು. ಅದೇ ದಿನ ರಾತ್ರಿ 10-30 ಕ್ಕೆ ಸ್ಥಳೀಯ ಜೈ ಶ್ರೀ ರಾಮ ಯುವ ನಾಟ್ಯ ಸಂಘದವರಿಂದ ‘ದೇಸಾಯಿ ದರ್ಪಕ್ಕೆ ಅಂತ್ಯ ಹಾಡಿದ ಸಹೋದರರು’ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಇಲ್ಲಿಯ ಶ್ರೀ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಶಿವಾನಂದ ಬುಳ್ಳಿ, ಸತ್ತ್ಯಪ್ಪ ಹೊಸಟ್ಟಿ, ರಾಮಯ್ಯ ಮಠದ, ಅಡಿವೆಪ್ಪ ಬುಳ್ಳಿ, ಬಾಳಪ್ಪ ಬುಳ್ಳಿ, ರಮೇಶ ದಳವಾಯಿ, ಪವಾಡೆಪ್ಪ ಹೊಸಟ್ಟಿ ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿಯ ಶ್ರೀ ಮಾರುತಿ ದೇವರ ಸಾವಿರಾರು ಜನ ಭಕ್ತರು, ಆಚರಣಾ ಸಮಿತಿ ಸದಸ್ಯರು ಈ ಓಕುಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

loading...