loading...

ನಾಲ್ಕು ದಿನಗಳಲ್ಲಿ 24 ಲಕ್ಷ ಹಣ್ಣುಗಳ ಮಾರಾಟ
ಸುಧಾ ಪಾಟೀಲ
ಬೆಳಗಾವಿ: ಮಾವಿನ ಹಣ್ಣುಗಳು ಸೀಜನ್ ಮುಗಿಯಿತು ಎನ್ನುವಷ್ಟರಲ್ಲಿ ಕುಂದಾನಗರಿಯಲ್ಲಿ ಮಾವು ಮೇಳವನ್ನು ಆಯೋಜಿಸಿಲಾಗಿತ್ತು. ಆದರೆ, ಇದಕ್ಕೆ ಜನರು ಕೂಡ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂಬುವುದಕ್ಕೆ ನಾಲ್ಕು ದಿನಗಳಲ್ಲಿ 55 ಟನ್‍ಗಳಷ್ಟು ಹಣ್ಣುಗಳ ಮಾರಟವಾಗಿವೆ.
ನಗರದಲ್ಲಿ ಹ್ಯೂಮ್ ಪಾರ್ಕ್‍ನಲ್ಲಿ ಆಯೋಜಿಸಲಾದ ಮಾವು ಮೇಳಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ದಿನಕ್ಕೆ ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಮೇಳದಲ್ಲಿ ಉಪ್ಪನಕಾಯಿ ವ್ಯಾಪಾರವು ಜೋರಾಗಿದೆ.
ಹೊರ ಜಿಲ್ಲೆಯಿಂದ ಬರುತ್ತಿರುವ ರೈತರು:
ಬೆಳಗಾವಿಯಲ್ಲಿ ನಡೆದ ಮಾವು ಮೇಳದಲ್ಲಿ ರೈತರಿಗೆ ಉತ್ತಮ ಲಾಭವಾಗುತ್ತಿದೆ ಎಂಬುವುದನ್ನು ತಿಳಿದ ಪಕ್ಕದ ಜಿಲ್ಲೆಗಳಿಂದ ರೈತರು ತಮ್ಮ ಹಣ್ಣಗಳನ್ನು ತಂದು ಮಾರುತ್ತಿದ್ದಾರೆ. ಅವರಿಗೆ ಕೂಡ ಲಾಭವಾಗುತ್ತಿದೆ ಎಂಬುವುದು ಇಲ್ಲಿಯ ರೈತರ ಅನಿಸಿಕೆಯಾಗಿದೆ.
ವಿವಿಧ ತಳಿಯ ಮಾವಿಗೆ ಜನರು ಫಿದಾ:
ಮಾರುಕಟ್ಟೆಯಲ್ಲಿ ಮೂರು ನಾಲ್ಕು ತಳಿಗಳ ಮಾವಿನ ಹಣ್ಣುಗಳನ್ನು ಕಂಡ ಜನರು ಮಾವು ಮೇಳದಲ್ಲಿ 150ಕ್ಕೂ ಹೆಚ್ಚು ತಳಿಗಳ ಹಣ್ಣುಗಳನ್ನು ಕಂಡು ಜನರು ಫಿದಾ ಆಗಿದ್ದಾರೆ. ಎಲ್ಲ ಹಣ್ಣುಗಳ ಮಾರಾಟವಾಗುತಿದ್ದರೆ. ಅದರಲ್ಲೆ ಹೆಚ್ಚು ಆಲ್ಪಾನ್ಸೋ ಮವಿನ ಹಣ್ಣಿಗೆ ಹೆಚ್ಚಿದ ಬೇಡಿಕೆ. ಉತ್ತರ ಕರ್ನಾಟಕದ ತನ್ನದೇ ಸ್ಥಾನವನ್ನು ಪಡೆದಿರುವ ಆಲ್ಪಾನ್ಸೋ ಮಾವಿಗೆ ಎಲ್ಲಿಲ್ಲದ ಬೇಡಿಕೆಯಾಗಿದೆ.
ನಿಗದಿತ ಬೆಲೆಯಲ್ಲೆ ಮಾವು ಮಾರಾಟ:
ತೋಟಗಾರಿಕೆಯ ಅಧಿಕಾರಿಗಳು ನಿಗದಿ ಪಡೆಸಿದ ಬೆಲೆಯಲ್ಲಿ ಮಾವುಗಳನ್ನು ಮಾರಬೇಕು ಎಂಬುವುದಕ್ಕೆ ಬದ್ಧವಾಗಿ ರೈತರು ಗ್ರಾಹಕರಿಗೆ ಹಣ್ಣುಗಳನ್ನು ಮಾರಟಮಾಡುತಿದ್ದಾರೆ. ಚೌಕಾಶಿಗೆ ಇಲ್ಲ ಅವಕಾಶ. ಮಾರುಕಟ್ಟೆಯಲ್ಲಿ ಗ್ರಾಹಕರು ಮಾರುವವರ ಜೊತೆ ಚೌಕಾಶಿ ಮಾಡುವುದರ ಮೂಲಕ ಹಣ್ಣುಗಳನ್ನು ತೆಗೆದುಕೊಳ್ಳುತ್ತಿರುವುದು ಸಾಮಾನ್ಯ ಚಿತ್ರವಾಗಿತ್ತು.
ಹೇಳಿಕೆ-1
ನಾವು ಮಾರುಕಟ್ಟೆಯಲ್ಲಿ ಮಾರುವುದಕ್ಕಿಂತಲ್ಲೂ ಇಲ್ಲಿ ಉತ್ತಮವಾಗಿ ಮಾವಿನ ಹಣ್ಣುಗಳು ಮಾರಟವಾಗುತ್ತಿವೆ. ದಿನದಿಂದ ದಿನಕ್ಕೆ ಮಾವಿನ ಹಣ್ಣುಗಳನ್ನು ತಗೆದುಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ನಾಲ್ಕುದಿನಗಳಲ್ಲಿ ನಮ್ಮ ವ್ಯಾಪಾರ 70 ಸಾವಿರಕ್ಕಿಂತಲೂ ಜಾಸ್ತಿಯಗಿದೆ. ನಾವು ಬೆಳೆದ ಬೆಳೆಗೆ ಸರಿಯಾಗಿ ಬೆಲೆಗಳು ಸಧ್ಯಕ್ಕೆ ಬರುತ್ತಿರುವುದು ತುಂಬ ಖುಷಿಯಾಗಿದೆ ನೋಡ್ರಿ. ಇಂತಹ ಮೇಳಗಳು ನಡೆಯಬೇಕು ಅಂದ್ರೆ ನಾವು ಬೆಳೆದ ಬೆಳೆಗೆ ನ್ಯಾಯ ಬರುತ್ತದೆ.
ಸಾವಿತ್ರಿ
ಮಾವು ವ್ಯಾಪಾರಸ್ಥ ಮಹಿಳೆ
ಹೇಳಿಕೆ-2
ಇಲ್ಲಿ ವಿವಿಧ ತಳಿಗಳ ಮಾವು ಬಂದಿರುವುದು ತುಂಬ ಖುಷಿಯಾಗಿದೆ. ಬೆಳಗಾವಿ ನಗರದಲ್ಲಿ ಮೊದಲ ಬಾರಿಗೆ ಮಾವು ಮೇಳವಾದರೂ ಇಷ್ಟು ವಿಧಗಳ ಮಾವಿನಹಣ್ಣುಗಳು ಬಂದಿರುವುದು ಸ್ವಾಗತಾರ್ಹವಾಗಿದೆ. ಅಷ್ಟೇ ಅಲ್ಲದೇ ಇಲ್ಲಿ ರೈತರಿಂದ ನೇರವಾಗಿ ನಮ್ಮ ಕೈಗೆ ಸಿಗುತ್ತಿವೆ ಹಾಗೂ ರಾಸಾಯಾನಿಕ ಮುಕ್ತ ಹಣ್ಣುಗಳು ಇರುವುದರಿಂದ ಕೊಂಡುಕೊಳ್ಳಲು ಮುಂದಾಗಿದ್ದೆವೆ.
ಡಾ.ಉಮೇಶ ಶಾಗೋಸಿ
ಶಿಕ್ಷಕರು ಜೆಎಸ್‍ಎಸ್ ಕಾಲೇಜ್ ಗೋಕಾಕ
ಹೇಳಿಕೆ-3
ಮಾವು ಮೇಳವನ್ನು ತರಾತುರಿಯಲ್ಲಿ ಆಯೋಜಿಸಲಾಯಿತ್ತು. ಆದರೂ ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ನಾಲ್ಕು ದಿನಗಳಲ್ಲಿ ನಮ್ಮ ಊಹೆಗಿಂತಲು ಹೆಚ್ಚು ವ್ಯಾಪಾರವಾಗುತ್ತಿದೆ. ಮುಂದಿನ ವರ್ಷ ಏಪ್ರೀಲ್ ಕೊನೆಯ ಅಥವಾ ಮೇ ಮೊದಲ ವಾರದಲ್ಲಿ ಮಾವು ಜೊತೆ ಹಲಸು ಹಣ್ಣುಗಳ ಮೇಳ ಮಾಡಬೇಕೆಂಬ ವಿಚಾರವಿದೆ ಅಧಿಕಾರಿಗಳ ಜೊತೆ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳುತ್ತೆವೆ.
ಕಿರಣಕುಮಾರ ಉಪಳೆ
ಉಪನಿರ್ದೇಶಕರು ತೋಟಗಾರಿಕೆ ಇಲಾಖೆ ಬೆಳಗಾವಿ.

loading...