ಮೇ.31ರಂದು ಹೈಟೆಕ್ ಬಸ್ ನಿಲ್ದಾಣಗಳಿಗೆ ಅಡಿಗಲ್ಲು: ಸಂಸದ ಪ್ರಕಾಶ ಹುಕ್ಕೇರಿ

0
141
loading...

ಕನ್ನಡಮ್ಮ ಸುದ್ದಿ

ಚಿಕ್ಕೋಡಿ 27: ತಮ್ಮ ಸ್ವಂತ ಪ್ರಯತ್ನದಿಂದ ಮಂಜೂರಾಗಿರುವ ಹುಕ್ಕೇರಿ, ಕಾಗವಾಡ, ಅಥಣಿ ಹೈಟೆಕ್ ಬಸ್ ನಿಲ್ದಾಣ ಹಾಗೂ ಮಾಜಿ ಸಚಿವ ಉಮೇಶ ಕತ್ತಿ ಪ್ರಯತ್ನದಿಂದ ಮಂಜೂರಾಗಿರುವ ಸಂಕೇಶ್ವರ ಹೈಟೆಕ್ ಬಸ್ ನಿಲ್ದಾಣಗಳಿಗೆ ಮೇ 31ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ಚಿಕ್ಕೋಡಿ ಲೋಕಸಭಾ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ಅವರು ಸ್ಥಳೀಯ ಬಸ್ ನಿಲ್ದಾಣದ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಸಾರಿಗೆ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಸರಕಾರ ಬಸ್ ನಿಲ್ದಾಣಗಳಿಗೆ ಕಾಯಕಲ್ಪ ನೀಡಲು ಮುಂದಾಗಿದ್ದು, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಅಥಣಿ ಬಸ್ ನಿಲ್ದಾಣಕ್ಕೆ 3.81 ಹುಕ್ಕೇರಿ ಬಸ್ ನಿಲ್ದಾಣಕ್ಕೆ 3.78 ಕೋಟಿ ಹಾಗೂ ಕಾಗವಾಡ ಬಸ್ ನಿಲ್ದಾಣಕ್ಕೆ 2.52 ಕೋಟಿ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಾರಿಗೆ ಸಚಿವರು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಅಡಿಗಲ್ಲು ನೆರವೇರಿಸಲಿದ್ದಾರೆಂದರು.
ಮೇ.31ರಂದು ಮುಂಜಾನೆ 9.00 ಗಂಟೆಗೆ ಹುಕ್ಕೇರಿಯಲ್ಲಿ, 12 ಗಂಟೆಗೆ ಅಥಣಿಯಲ್ಲಿ, 1 ಗಂಟೆಗೆ ಕಾಗವಾಡದಲ್ಲಿ ಹಾಗೂ 3 ಗಂಟೆಗೆ ಸಂಕೇಶ್ವರದಲ್ಲಿ ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸಂಸದೀಯ ಕಾರ್ಯದಶರ್ಿ ಗಣೇಶ ಹುಕ್ಕೇರಿ, ಸರಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಉಪಸ್ಥಿತರಿದ್ದಾರೆ ಎಂದರು.
ಸಂಕೇಶ್ವರ ಬಸ್ ನಿಲ್ದಾಣಕ್ಕೆ ಶಾಸಕರ ಪ್ರಯತ್ನ:
ಹುಕ್ಕೇರಿ, ಅಥಣಿ, ಕಾಗವಾಡ ಬಸ್ ನಿಲ್ದಾಣಗಳಿಗೆ ತಾವು ಪ್ರಸ್ತಾವಣೆ ಸಲ್ಲಿಸಿದ್ದು ನಿಜ ಆದರೆ ಸಂಕೇಶ್ವರ ಬಸ್ ನಿಲ್ದಾಣಕ್ಕೆ ಸ್ಥಳೀಯ ಶಾಸಕ ಉಮೇಶ ಕತ್ತಿ ಅವರು ತಮ್ಮ ಸ್ವಂತ ಪ್ರಯತ್ನದ ಮೂಲಕ ಮಂಜೂರಿ ಪಡೆದುಕೊಂಡಿದ್ದಾರೆ. ತಾವು ಮಾಡದ ಕಾರ್ಯವನ್ನು ನಾವು ಮಾಡಿದ್ದೇವೆ ಎಂದು ಸುಳ್ಳು ಹೇಳುವುದು ಸರಿಯಲ್ಲ ಎಂದರು.
ಕೇಂದ್ರೀಯ ವಿದ್ಯಾಲಯಕ್ಕೆ 14 ಕೋಟಿ:
ಚಿಕ್ಕೋಡಿಯಲ್ಲಿ ಈಗಾಗಲೇ 2 ಎರಡು ಕೇಂದ್ರಿಯ ವಿದ್ಯಾಲಯಗಳನ್ನು ಪ್ರಾರಂಭಿಸಲಾಗಿದ್ದು, ಕಳೆದ ಎರಡ್ಮೂರು ವರ್ಷಗಳಿಂದ ಶಾಲಾ ವಿದ್ಯಾಥರ್ಿಗಳು ಕೊಠಡಿಗಳ ಕೊರತೆ ಎದುರಿಸುತ್ತಿದೆ. ಕೇಂದ್ರ ಸರಕಾರದಿಂದ ಶಾಲಾ ಕಟ್ಟಡ ಹಾಗೂ ಸಿಬ್ಬಂದಿ ಕೊಠಡಿಗಳನ್ನು ನಿಮರ್ಿಸಲು 14.14 ಕೋಟಿ ಮಂಜೂರಾಗಿದ್ದು, ಇದಕ್ಕಾಗಿ 10 ಎಕರೆ ಜಾಗ ಮೀಸಲಾಗಿದ್ದು, ಟೆಂಡರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದರು.
2 ಕೋಟಿ ವೆಚ್ಚದಲ್ಲಿ ಭವನ:
ಪಟ್ಟಣದಲ್ಲಿ ನಿಷ್ಕ್ರಿಯವಾಗಿರುವ ಉಪವಿಭಾಗಾಧಿಕಾರಿ ಹಳೆ ಕಛೇರಿ ತೆರವುಗೊಳಿಸಿ ಆ ಜಾಗದಲ್ಲಿ ಸಭಾಭವನ ನಿಮರ್ಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 2 ಕೋಟಿ ಅನುದಾನ ಮಂಜೂರಾಗಿದ್ದು, ಈ ಸಭಾಭವನ ನಿಮರ್ಾಣದಿಂದ ಉಪವಿಭಾಗ ಹಾಗೂ ತಾಲೂಕಾಮಟ್ಟದ ಸಭೆ ಸಮಾರಂಭಗಳು ಜರುಗಲು ಅನುಕೂಲವಾಗಲಿದೆ ಎಂದರು.
ಕಾಗಮರಿ ಪ್ರಗತಿಯತ್ತ:
ಪಟ್ಟಣದಲ್ಲಿ ನಿಮರ್ಾಣ ಹಂತದಲ್ಲಿರುವ ಪುರಸಭೆ ನೂತನ ಕಛೇರಿ ಕಟ್ಟಡ ಕಾಮಗಾರಿ ಹಾಗೂ ಮರಾಠಾ ಸಮುದಾಯದವರಿಗಾಗಿ ನಿಮರ್ಿಸಲಾಗುತ್ತಿರುವ 2.5 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಂಸದೀಯ ಕಾರ್ಯದಶರ್ಿ ಗಣೇಶ ಹುಕ್ಕೇರಿ, ಪುರಸಭೆ ಮಾಜಿ ಅಧ್ಯಕ್ಷ ಪಿ.ಐ. ಕೋರೆ, ರಾಮಾ ಮಾನೆ, ನರೇಂದ್ರ ನೇಲರ್ಿಕರ, ಗುಲಾಬಹುಸೇನ ಭಾಗವಾನ, ಸಾರಿಗೆ ನಿಗಮದ ನಿದರ್ೆಶಕ ಅಜಯ ಸೂರ್ಯವಂಶಿ, ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್. ಚಂದ್ರಶೇಖರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...