loading...

ಲಂಡನ್: ಮ್ಯಾಂಚೆಸ್ಟರ್ ಬಾಂಬ್ ದಾಳಿಯಲ್ಲಿ ಗಾಯಗೊಂಡವರನ್ನು ಉಳಿಸಲು ಹಲವು ಘಂಟೆಗಳವರೆಗೆ ದಣಿವಿಲ್ಲದೆ ದುಡಿದ ಪಾಕಿಸ್ತಾನಿ ಮೂಲದ ಎನ್ ಎಚ್ ಎಸ್ ಸರ್ಜನ್ ಒಬ್ಬರಿಗೆ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆ ಮಾಡಿರುವ ಘಟನೆ ಜರುಗಿದೆ.
೨೦೦೫ರ ನಂತರ ನಡೆದ ಅತಿ ಭೀಕರ ದಾಳಿಯ ಸಂತ್ರಸ್ತರನ್ನು ಉಳಿಸಲು ನಾವೇದ್ ಯಾಸಿನ್ ಸಾಲ್ಫೋರ್ಡ್ ರಾಯಲ್ ಆಸ್ಪತ್ರೆಗೆ ತೆರಳುವಾಗ ನಿಂದನೆಗೆ ಗುರಿಯಾಗಬೇಕಾಯಿತು ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.
ನಾನು ನನ್ನ ವಾಹನ ಓಡಿಸುವಾಗ, “ಬಿಳಿಯ, ಮಧ್ಯ ವಯಸ್ಕ ವ್ಯಾನ್ ಚಾಲಕನೊಬ್ಬ ಪಕ್ಕಕ್ಕೆ ಬಂದು, ಜೋರಾಗಿ ಹಾರ್ನ್ ಮಾಡಿ, ನೀನು ಕಂದು ಬಣ್ಣದವನೇ, ಪಾಕಿಸ್ತಾನಿ ಬಾಸ್ಟರ್ಡ್. ನಿನ್ನ ದೇಶಕ್ಕೆ ಹಿಂದಿರುಗು. ನೀನು ಭಯೋತ್ಪಾದಕ. ನಮ್ಮ ದೇಶಕ್ಕೆ ನಿಮ್ಮ ಜನ ಬೇಕಾಗಿಲ್ಲ” ಎಂದು ನಿಂದಿಸಿದ್ದಾಗಿ ಆರ್ಥೋಪೆಡಿಕ್ ಸರ್ಜನ್ ತಿಳಿಸಿದ್ದಾರೆ.
೧೯೬೦ ರಲ್ಲಿ ಯಾಸಿನ್ ಪೂರ್ವಜರು ಪಾಕಿಸ್ತಾನದಿಂದ ಇಂಗ್ಲೆಂಡಿಗೆ ವಲಸೆ ಬಂದವರು. ಇಂಗ್ಲೆಂಡಿನಲ್ಲಿಯೇ ಹುಟ್ಟಿ ಬೆಳೆದ ಯಾಸಿನ್ ಈಗ ತಮ್ಮ ಪತ್ನಿ ಮತ್ತು ಇಬ್ಬರು ಪತ್ನಿಯರೊಂದುಗೆ ಮ್ಯಾಂಚೆಸ್ಟರ್ ನಲ್ಲಿ ವಾಸಿಸುತ್ತಾರೆ.
ಮೇ ೨೨ ರಂದು ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ೨೨ ಜನ ಮೃತಪಟ್ಟು ೧೦೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ದಾಳಿಯ ನಂತರ ಜನಾಂಗೀಯ ನಿಂದನೆಯ ಪ್ರಕರಣಗಳು ಹೆಚ್ಚಿರುವುದಾಗಿ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಹೇಳಿದ್ದಾರೆ.

loading...