ಕನ್ನಡಮ್ಮ ಸುದ್ದಿ-ರಾಮದುರ್ಗಃ ಯುವಜನತೆ ತಂಬಾಕು ಸೇವೆನೆಯಿಂದ, ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಯುವಕರು ಇಂಥಹ ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಯವ ಜನತೆ ಸರಿಯಾದ ಮಾರ್ಗದಲ್ಲಿ ಸಾಗುವುದು ತುಂಬಾ ಅವಶ್ಯಕತೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅಂಬಲಿ ಹೇಳಿದರು.
ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನೆ ಇಲಾಖೆ ಹಾಗೂ ಆರೋಗ್ಯ ಇಲಾಖೆ ರಾಮದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಂಬಾಕು ಸೇವನೆ ವ್ಯಾಪಕವಾಗಿ ಹರಡುತ್ತಿದ್ದು, ಸರಕಾರವು ತಂಬಾಕಿನ ನಿಷೇಧದ ಮೇಲೆ ಸೂಕ್ತವನ್ನು ಕ್ರಮ ಕೈಗೊಳ್ಳಬೇಕು, ಹಾಗೂ ಯುವ ಜನತೆ ತಂಬಾಕಿನ ಸೇವನೆಯ ಅಪಾಯವನ್ನು ಮನಗಂಡು ಅದರಿಂದ ದೂರ ಉಳಿದು ಒಳ್ಳೆಯದು ಎಂದು ಕರೆ ನೀಡಿದರು.   ದಿವಾಣಿ ನ್ಯಾಯಾಧೀಶರಾದ ಶಿವಕುಮಾರ ದೇಶಮುಖ ಅವರು ಮಾತನಾಡಿ ತಂಬಾಕು ಹಾಗೂ ಗುಟ್ಕಾ ಸೇವನೆ ಮಾಡಿ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿ ಸದರಿ ಸ್ಥಳಗಳನ್ನು ಗಲಿಜು ಮಾಡುವುದನ್ನು ಜನತೆ ಬಿಡಬೇಕು ಹಾಗೂ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಮುಕ್ತ ವಾತಾವರಣವನ್ನು ನಿರ್ಮಾನ ಮಾಡಿ ಜನರು ಜಾಗೃತರಾದಾಗ ಮಾತ್ರ ಇಂಥ ಪಿಡುಗುಗಳಿಂದ ರಕ್ಷಿಸಲು ಸಾಧ್ಯ ಎಂದು ಹೇಳಿದರು.  ತಾಲೂಕಾ ವೈದ್ಯಾಧಿಕಾರಿಗಳಾದ ಡಾ. ಪ್ರವೀಣ ಆನಗೌಡ್ರ ಇವರು ತಂಬಾಕು ಸೇವೆನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ನ್ಯಾಯವಾದಿಗಳಾದ ಶ್ರೀಮತಿ ಎಸ್.ಎಸ್. ಜವಳಿ ಸರ್ಕಾರಿ ಅಭಿಯೋಜಕರಾದ ಎಂ.ಬಿ. ಬಾಡಗಂಡಿ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿಗಳಾದ ಸಿ.ಎಮ್. ಜಾಮದಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಿರಿಂiÀ ನ್ಯಾಯವಾದಿಗಳಾದ ಬಿ.ಎನ್. ಹೊಸಪೇಠ, ವ್ಹಿ.ಬಿ.ಸಿದ್ದಾಟಗಿಮಠ, ಎಸ್.ಎ. ಜಾಮದಾರ, ಆರ್.ಎಂ. ಚಚಡಿ, ಬೀಳಗಿ, ಮುಂತಾದವರು ಉಪಸ್ಥಿತರಿದ್ದರು. ಶ್ರೀ ಜಿ.ಪಿ. ಕೊಳ್ಳಿ ನಿರೂಪಿಸಿ, ವಂದಿಸಿದರು.  31ಆರ್‍ಎಂಡಿ3 ಪೋಟೋ ಶೀರ್ಷಿಕೆ3 ಯುವಜನತೆ ತಂಬಾಕು ಸೇವೆನೆಯಿಂದ, ತಮ್ಮ ಅಮೂಲ್ಯವಾದ ಜೀವನವನ್ನು ಇಂತ ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಯವ ಜನತೆ ಸರಿಯಾದ ಮಾರ್ಗದಲ್ಲಿ ಸಾಗುವುದು ತುಂಬಾ ಅವಶ್ಯಕತೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅಂಬಲಿ ಹೇಳಿದರು.
loading...