ಯು.ಪಿ.ಎ ಕಾರ್ಯಕ್ರಮಗಳನ್ನು ದಾಖಲೆ ಸಹಿತ ಹೇಳಿದರು ಮತ್ತೇ ಅದೇ ಹಾಡು

0
29
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ಸಂಸದ ಜೋಶಿ ಅವರು 2015 ರಲ್ಲಿ ಯು.ಪಿ.ಎ ಯಿಂದ ಮುಂಜೂರಾದ ಯೋಜನೆಗಳನ್ನು ಎನ್.ಡಿ.ಎ ಸರಕಾರದ ಸಾಧನೆಗಳೆಂದು ಹೇಳಿದ್ದಕ್ಕೆ ಅಂದು ಪತ್ರಿಕಾ ಗೋಷ್ಠಿ ಕರೆದು ಅಂದಿನ ಯು.ಪಿ.ಎ ಇಂದ 150 ಕೋಟಿ ಮಂಜೂರಾದ ಬಗ್ಗೆ ಬಿ.ಆರ್.ಟಿ.ಎಸ್ ಗೆ ಬಸ್ಸ್ ಖರೀದಿ ಬಗ್ಗೆ ಅಷ್ಟೇ ಅಲ್ಲ, ರಾಜ್ಯದ ಎಲ್ಲ ಜಿಲ್ಲೆಗಳಿಗೆ ಯು.ಪಿ.ಎ ಸರ್ಕಾರದಿಂದ ಬಸ್ಸ್ ಖರೀದಿಗೆ ನೀಡಿದ ಅನುದಾನವನ್ನು ದಾಖಲೆ ಸಹಿತ ಬಿಡುಗಡೆಗೊಳಿಸಿದ್ದೇವೆ. ಅದೇ ವೇಳೆ ಇ.ಎಸ್.ಐ ಆಸ್ಪತ್ರೆಗೆ ಯು.ಪಿ.ಎ ಸರ್ಕಾರ ಕೈಗೊಂಡ ನೆರವನ್ನು ಹೇಳಲಾಗಿದೆ. ಹೀಗಿದ್ದು, ಇತ್ತೀಚಿಗೆ ಕೀಮ್ಸ್‍ಗೆ ಭೇಟಿ ನೀಡಿದ್ದ ಕೆಂದ್ರ ಆರೋಗ್ಯ ಸಚಿವ ನಡ್ದಾರವರು ಕೇಂದ್ರದಿಂದ ಕೀಮ್ಸ್‍ಗೆ ನೇರವು ನೀಡಿದ್ದೇವೆ ಎಂದು ಹೇಳಿದ್ದು, ಹಾಸ್ಯಸ್ಪದ. ಸಂಸದ ಜೋಶಿಯವರಿಗೆ ಎನ್.ಡಿ.ಎ ಸರ್ಕಾರ 8 ಪ್ರಾಥಮಿಕ ಶಾಲೆಗಳಿಗೆ ಶೌಚಾಲಯಕ್ಕೆ ನೀಡಿದ ಅನುದಾನವನ್ನು ಹೇಳಿದ್ದಲ್ಲದೇ, ಹಿಂದಿನ ಯು.ಪಿ.ಎ ಸರ್ಕಾರದ ಯೋಜನೆಗಳನ್ನು ತಮ್ಮದೇ ಎಂದು ಹೇಳಿದ್ದನ್ನು, ಸಾಕಷ್ಟು ಸಾರಿ ಮಾಧ್ಯಮಗಳ ಮೂಲಕ ಖಂಡಿಸಲಾಗಿದೆ. ರಾಜ್ಯದಲ್ಲಿ ಬಿ.ಜೆ.ಪಿ ಸರ್ಕಾರವಿದ್ದಾಗ ಪಾಲಿಕೆಗೆ ಚತುಸಷ್ಪದ ರಸ್ತಗೆ ಬಿಡುಗಡೆ ಮಾಡಿದ ಯು.ಪಿ.ಎ ಸರ್ಕಾರದ ಅನುದಾನವನ್ನು ರಾಜ್ಯ ಸರ್ಕಾರದ ಅನುದಾನವೆಂದೇ ಪ್ರಚಾರ ಪಡೆದಿದ್ದರು. ಆದರೆ ಈಗ ಪ್ರತಿ ಬಾರಿ ಮಹಾನಗರಕ್ಕೆ ಕೇಂದ್ರ ಸರ್ಕಾರ ರಸ್ತೆ ಅಭಿವೃದ್ಧಿಗೆ ಹಣ ನೀಡಿದೆ. ಎಂದು ಭಾರಿ ಪ್ರಚಾರ ಪಡೆಯುತ್ತಿದ್ದಾರೆ. ಕೇಂದ್ರದಲ್ಲಿ ಯಾವುದೇ ಸರ್ಕಾರ ವಿದ್ದರೂ, ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರಕಾರ ಹಣ ನೀಡಿಯೇ ನೀಡುತ್ತದೆ. ಆದರೆ ಅದನ್ನೆ ಸಂಸದ ಜೋಶಿಯವರು ಮೋದಿಯವರ ಸಾಧನೆ ಎಂದು ಹೇಳಿಕೊಳ್ಳುತ್ತಾರೆ. ಯಾವುದೇ ಸಭೆಗಳಿರಲಿ ಶೆಟ್ಟರ್ ಜೋಶಿಯವರಿಗೆ ಕಾರಣವಿರಲಿ ಇಲ್ಲದೆಯೋ ಮೋದಿಯವರ ಹೆಸರು ಹೇಳೆಯೇ ತೀರುತ್ತಾರೆ. ಆದರೆ ಅದೇ ಮಹಾದಾಯಿ ವಿಷಯಕ್ಕೆ ಮೌನ ವಹಿಸುತ್ತಾರೆ.

ಇದೀಗ ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಂಸದರ ವರ್ತನೆ ಅತಿರೋಕಗಳಿಂದ ರೋಶಿ ಜೋಶಿಯವರನ್ನು ತರಾಟೆ ತೆಗೆದುಕೊಂಡಿದ್ದನ್ನು ಸಹಿಸದ ಬಿಜೆಪಿಯವರು ಉಸ್ತುವಾರಿ ಸಚಿವರಿಗೆ ಅಧಿಕಾರಿಗಳನ್ನು ಹದ್ದು ಬಸ್ತಿನಲ್ಲಿಡಲು. ಆಡಳಿತದ ಬಗ್ಗೆ ಉಪದೇಶ ಮಾಡಿದ್ದು ಹಾಸ್ಯಸ್ಪದ ಸಂಸದರನ್ನು ಯಾವ ವಿಷಯಕ್ಕೆ ಸಚಿವರು ಟಿಕಿಸಿದ್ದರೋ ಅದರ ಬಗ್ಗೆ ಚಕಾರ ಎತ್ತದೆ ಇನ್ನೇನೋ ಹೇಳಿಕೆ ನೀಡಿದ್ದು, ಬಿಜೆಪಿಯದು ಪಲಾಯನವಾದವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರು ವೇದವ್ಯಾಸ ಕೌಲಗಿಯವರು ಸಂಸದ ಜೋಶಿಯವರು ಇನ್ನು ಮುಂದಾದರೂ ಯು.ಪಿ.ಎ ಯೋಜನೆಗಳನ್ನು ಎನ್.ಡಿ.ಎ ಯೋಜನೆಗಳೆಂದು ಜನರ ದಾರಿ ತಪ್ಪಿಸುವುದÀನ್ನು ಬಿಡಲಿ ಎಂದು ಹೇಳಿದ್ದಾರೆ.

loading...