ಕನ್ನಡಮ್ಮ ಸುದ್ದಿ-ಗೋಕಾಕ: ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ ಪೂರಕವಾಗಿದ್ದು ಈ ನಿಟ್ಟಿನಲ್ಲಿ ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಧ್ಯಾನ ಮಾಡುವುದರಿಂದ ಮನುಷ್ಯ ರೋಗಮುಕ್ತನಾಗಿ ಆರೋಗ್ಯ ಪೂರ್ಣ ಮನಸ್ಸನ್ನು ಹೊಂದಬಹುದು. ಎಂದು ಪತಂಜಲಿ ಯೋಗಪೀಠದ ರಾಜ್ಯ ಪ್ರಭಾರಿ ಭವರಲಾಲಜಿ ಆರ್ಯ ಅಭಿಪ್ರಾಯಪಟ್ಟರು.
     ಅವರು ರವಿವಾರ ನಗರದ ಮಯೂರ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡ ಐದು ದಿನಗಳ ಉಚಿತ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.
     ಪತಂಜಲಿ ಮಹರ್ಷಿಗಳು ವಿಶ್ವಕ್ಕೆ ನೀಡಿದ  ವೈಜ್ಞಾನಿಕ ವಿದ್ಯೆ ಇದಾಗಿದ್ದು ಇಂದು ಇಡೀ ವಿಶ್ವವೇ ಇದನ್ನು ಅನುಸರಿಸುತ್ತಿದೆ. ಯೋಗ ಬಲ್ಲವನಿಗೆ ರೋಗವಿಲ್ಲ ಎಂದು ಹೇಳಿದರಲ್ಲದೇ ಸೂರ್ಯನಮಸ್ಕಾರ, ಲಘುವ್ಯಾಯಾಮದ ಮಹತ್ವವನ್ನು ಪ್ರಾತ್ಯಕ್ಷಿಕೆ ಮುಖಾಂತರ ಹೇಳಿ ಕೊಟ್ಟರು. ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯ ತನ್ನ ಆರೋಗ್ಯದ ಬಗ್ಗೆ ಚಿಂತಿಸದೇ ಶಾರೀಕವಾಗಿ ಮತ್ತು ಮಾನಸಿಕ ಕುಗ್ಗುತ್ತ್ದಾನೆ. ಆದ್ದರಿಂದ ಯೋಗ ಮಾಡುವುದರಿಂದ ಬುದ್ಧಿ ಮಟ್ಟ ಚುರುಕಾಗಿ, ಮೆದುಳಿನ ಜ್ಞಾಪಕ ಶಕ್ತಿ ಹೆಚ್ಚಾಗುತ್ತಿದೆ ಎಂದರು.
     ಕಾರ್ಯಕ್ರಮದಲ್ಲಿ ರಾಯಬಾಗದ ಸಂಜಯ ಕುಸ್ತಿಗಾರ, ಬಿ.ಎನ್.ಕೊಳ್ಳೇಕರ, ಯೋಗಗುರುಗಳಾದ ವಿನೋದ ಜಾಧವ, ನಿಜಲಿಂಗ ದಡ್ಡಿಮನಿ, ಬಸವರಾಜ ನಂದಿ, ಅಶೋಕ ಓಸ್ವಾಲ ಸೇರಿದಂತೆ ಇತರರು ಇದ್ದರು. ರಾಮಚಂದ್ರ ಕಾಕಡೆ ನಿರೂಪಿಸಿ, ವಂದಿಸಿದರು.
loading...