ರಸ್ತೆ ಅಪಘಾತ: ಇಬ್ಬರ ಸಾವು

0
233
loading...

ಕನ್ನಡಮ್ಮ ಸುದ್ದಿ
ಬೆಳಗಾವಿ :12 ಖಾನಾಪೂರ ತಾಲೂಕಿನ ಕಕ್ಕೇರಿ ಮತ್ತು ರಾಮಾಪೂರ ನಡುವೆ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ಕಕ್ಕೇರಿ ಮತ್ತು ರಾಮಾಪೂರ ನಡುವೆ ರಾಜ್ಯ ಹೆದ್ದಾರಿಯಲ್ಲಿ ಜಿಟಿಜಿಟಿ ಮಳೆಯಲ್ಲಿ ನೀಲಗಿರಿ ಕಟ್ಟಿಗೆ ಎಳೆಗಳನ್ನು ಹೊತ್ತು ಕೊಂಡು ಹೊಗುತ್ತಿದ್ದ ಟ್ರ್ಯಾಕ್ಟರ್ ಹಿಂದಿನ ಟ್ರೇಲರ್ ಹುಕ್ಕು ಮುರಿದು ಎಳೆಗಳು ಟ್ರ್ಯಾಕ್ಟರ್ ದಲ್ಲಿ ಕುಳಿತ ವ್ಯಕ್ತಿಗಳ ಮೇಲೆ ಬಿದ್ದು ಗುಂಡೇನಟ್ಟಿ ಗ್ರಾಮದ ಚಂದ್ರಪ್ಪ ಶೆಟ್ಟೆಪ್ಪ ಮಾದರ(೪೫)ಸ್ಥಳದಲಿಯೇ ಸಾವನ್ನಪ್ಪಿದ್ದಾನೆ.ಮತ್ತೊಬ್ಬ ಅದೇ ಗ್ರಾಮದ ಯುವಕ ಅದೃಶ್ಯಪ್ಪ ಪಾಟೀಲ (೨೦)ಗಂಭೀರ ಗಾಯಗೊಂಡಿದ್ದರಿಂದ ಕಕ್ಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ನಂದಗಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತನೂ ಮೃತಪಟ್ಟಿದ್ದಾನೆ. ಈ ಕುರಿತು ನಂದಗಡ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...