ರಸ್ತೆ ಅಪಘಾತ ಮಹಿಳೆಯ ಸಾವು

0
191
loading...

ಕನ್ನಡಮ್ಮ ಸುದ್ದಿ
ಬೆಳಗಾವಿ :ಜಿಲ್ಲೆಯ ಖಾನಾಪೂರ ತಾಲೂಕಿನ ಬೀಡಿ ಗ್ರಾಮದ ಸಮೀಪದ ಗೋಲಿಹಳ್ಳಿ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಒರ್ವ ಮಹಿಳೆ ಸಾವುನಪ್ಪಿದ ಘಟನೆ ಇಂದು ಜರುಗಿದೆ.
ಪಾದಚಾರಿ ಮಹಿಳೆ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಲಾರಿ ಗುಂದಿದ ಪರಿನಾಮ ಸ್ಥಳದಲ್ಲಿ ಮಹಿಳೆ ಸಾವುನಪ್ಪಿದ್ದಾಳೆ. KA25 8436 ಮದುವೆ ನಿಬ್ಬಣ ತೆಗೆದುಕೊಂಡು ಖಾನಾಪೂರ ಮಾರ್ಗದಿಂದ ಹಳಿಯಾಳ ಕಡೆ ತೇರಳುತ್ತಿದ್ದ ವೇಳೆಯಲ್ಲಿ ಘಟನೆ ಜರುಗಿದೆ. ಸ್ಥಳದಲ್ಲಿದ್ದ ಜನರು ತಕ್ಷಣ ಸುತ್ತ ಮುತ್ತ ಗ್ರಾಮದ ಜನರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದಾಗ ಲಾರಿಯನ್ನು ಕಕ್ಕೇರಿ ಗ್ರಾಮದ ಜನರು ಲಾರಿಯನ್ನು ಅಡ್ಡಗಟ್ಟಿದಾಗ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತ ಮಹಿಳೆ ಶಾಂತವ್ವಾ ಬಸ್ನಪ್ಪ ಕಾಳೆ(೩೫) ಬೈಲಹೊಂಗಲ ತಾಲೂಕಿನ ದೇಗುಲಕಳ್ಳಿ ಗ್ರಾಮದ ಮಹಿಳೆ ಎಂದು ಗುರುತಿಸಲಾಗಿದೆ.

loading...