ರಾಣಿ ಚನ್ನಮ್ಮ ವಿವಿಯ ಐದನೇ ಘಟಿಕೋತ್ಸವಕ್ಕೆ ಅದ್ದೂರಿ ಚಾಲನೆ ಮಕ್ಕಳ ಅವಿಸ್ಮರಣೀಯ ಕ್ಷಣಕ್ಕೆ ಭಾವುಕರಾದ ಪಾಲಕರು

0
127
loading...


ಕನ್ನಡಮ್ಮ ಸುದ್ದಿ
ಬೆಳಗಾವಿ:,8 ರಾಣಿ ಚನ್ನಮ್ಮ ವಿವಿಯ ಐದನೇ ಘಟಿಕೋತ್ಸವಕ್ಕೆ ಸೋಮವಾರ ವಿಟಿಯು ಆವರಣದಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ರ್ಯಾಂಕ್ ವಿಜೇತರು ಹಾಗೂ ಚಿನ್ನದ ಪದಕ ಪಡೆದ ವಿದ್ಯಾಥಿ೯ಗಳು ಮತ್ತು ಅವರ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ತಮ್ಮ ಮಕ್ಕಳ ಸಾಧನೆಯ ಉತ್ತುಂಗದ ಕ್ಷಣಗಳನ್ನು ಸಮೀಪದಿಂದಲೇ ಕಣ್ಣು ತುಂಬಿಸಿಕೊಂಡು ಪುಳಕಗೊಂಡರು.
ಉನ್ನತ ಶಿಕ್ಷಣ‌ಸಚಿವ ಬಸವರಾಜ ರಾಯರೆಡ್ಡಿ‌,‌ ನ್ಯಾಕ್ ನಿದೇ೯ಶಕ‌ ಡಿ.ಪಿ. ಸಿಂಗ್ ಅವರು ವಿದ್ಯಾಥಿ೯ಗಳಿಗೆ ಪದವಿ ಪ್ರಧಾನ ಮಾಡಿದರು.
ಈ ಸಂದಭ೯ದಲ್ಲಿ ರಾಣಿ ಚನ್ನಮ್ಮ ವಿವಿಯ ಕುಲಪತಿ ಶಿವಾನಂದ ಹೊಸಮನಿ, ಕುಲಸಚಿವರಾದ ಸಿದ್ದು ಅಲಗುರ, ತ್ಯಾಗರಾಜ್ ಸೇರಿದಂತೆ ಸಿಡಿಂಕೇಟ ಸದಸ್ಯರು ಹಾಗೂ ವಿವಿಧ ವಿಭಾಗಗಳ‌ ಮುಖ್ಯಸ್ಥರು ಉಪಸ್ಥಿತರಿದ್ದರು.

loading...