ಭಾರತವನ್ನು ಹಿಂದು ರಾಷ್ರ್ಟವನ್ನಾಗಿ ಮಾಡಲು ಆದ್ಯತೆ ನೀಡಿ

0
32
loading...

ಹಿಂದು ಜನಜಾಗೃತಿ ಕಾರ್ಯಕ್ರಮದಲ್ಲಿ ರಾಜಾಸಿಂಗ್ ಠಾಕೂರು ಅಭಿಪ್ರಾಯ
ಕನ್ನಡಮ್ಮ ಸುದ್ದಿ-ಬೆಳಗಾವಿ: 2023 ರ ಒಳಗಾಗಿ ರಾಷ್ಟ್ರವನ್ನು ಮುಸ್ಲಿಮ್ ಮುಕ್ತದೇಶವನ್ನಾಗಿ ಮಾಡಬೇಕೆಂದರೆ ಹಿಂದುಗಳು ಒಗ್ಗಟ್ಟಾಗಬೇಕು ಅಂದಾಗ ಮುಕ್ತವಾಗಲು ಸಾಧ್ಯ ಎಂದು ಯುವ ಸೇನಾ ಸಂಸ್ಥಾಪಕ ರಾಜಾಸಿಂಗ್ ಠಾಕೂರು ಹೇಳಿದರು.
ನಗರದ ಸಂಭಾಜಿ ಉದ್ಯಾನವನದಲ್ಲಿ ಹಿಂದು ರಾಷ್ಟ್ರ ಸಮಿತಿಯಿಂದ ಜಯತೊ ಜಯತೊ ಹಿಂದೂರಾಷ್ಟಂ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು.
ವಿಶ್ವದಲ್ಲಿ ಭಾರತವನ್ನು ಹಿಂದು ಮುಕ್ತ ಮಾಡುವ ಹುನ್ನಾರ ನಡೆದಿದ್ದು ಹಿಂದುಗಳು ಎಚ್ಚೆತ್ತುಕೊಂಡು ರಾಷ್ಟ್ರವನ್ನು ಕಟ್ಟಲು ಮುಂದಾಗಬೇಕು. ಇಲ್ಲದಿದ್ದರೆ ಭಾರತದಲ್ಲಿ ಮುಸ್ಲಿಂ, ಕ್ರೈಸ್ತ ಇಂತವರೆ ನೆಲಸುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ . ಹಾಗಾಗಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಆದತ್ಯೆಯ ಜೊತೆಗೆ ಪ್ರತಿಯೊಬ್ಬ ಹಿಂದು ನಾನು ಹಿಂದು ಎಂಬ ಭಾವನೆಯನ್ನು ಹೊಂದಬೇಕು ಅಂದಾಗ ದೇಶವನ್ನು ಹಿಂದುಗಳಿಂದ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
ಹಿಂದುಗಳಿಂದ ಮುಸ್ಲಿಂ ಮುಕ್ತ ಮಾಡಬೇಕಾದರೆ ಪ್ರತಿಯೊಬ್ಬರು ತಳವಾರವನ್ನು ಹಿಡಿಯಬೇಕು ಆಗ ಮುಸ್ಲಿಂ ಸಂಖ್ಯೆ ದೇಶದಲ್ಲಿ ಕಡಿಮೆಯಾಗುತ್ತದೆ ಎಂದರು.
ಅತಿಥಿಯಾಗಿ ಆಗಮಿಸಿದ ಹಿಂದು ಜನಜಾಗೃತಿ ಸಮಿತಿಯ ವಕ್ತಾರ ಅಭಯ ವರ್ತಕ ಮಾತನಾಡಿ, ಪಾಕಿಸ್ಥಾನ, ಬಾಂಗ್ಲಾದಿಂದ ದೇಶದಲ್ಲಿರುವ ಮುಸ್ಲಿಂ ವ್ಯಕ್ತಿಗಳಿಂದ ಸಹಾಯ ಪಡೆದು ಭಾರತಕ್ಕೆ ಆಗಮಿಸಿ ತಮ್ಮ ಜನಸಂಖ್ಯೆಯನ್ನು ಹೆಚ್ಚಿಗೆ ಮಾಡುತ್ತಿದ್ದಾರೆ. ಹೀಗೆ ಬಿಟ್ಟರೆ ಭಾರತ ದೇಶವು ವಿಶ್ವದ ಭೂಪಟದಲ್ಲಿ ಅಳಿಸಿ ಹೋಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಇವರನ್ನು ಓಡಿಸದಿದ್ದರೆ ಹಿಂದುಗಳು ಒಗ್ಗಟ್ಟಾಗಿ ಮುಸ್ಲಿಂರನ್ನು ಓಡಿಸಬೇಕಾಗುತ್ತದೆ. ಯಾರಾದರು ಹಿಂದು ರಾಷ್ಟ್ರವನ್ನು ವಡೆಯಲು ನೋಡಿದರೆ ಅಂತವರನ್ನು ನಾವು ಬಿಡುವುದಿಲ್ಲ. ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ದೇವಾಲಯಗಳು ಸರ್ಕಾರದ ವ್ಯಾಪ್ತಿಯಲ್ಲಿವೆ ಆದರೆ, ಮುಸ್ಲಿಂ, ಕ್ರೈಸ್ತ ಧರ್ಮದ ದೇವಾಲಯಗಳು ಮಾತ್ರ ಸರ್ಕಾರ ವ್ಯಾಪ್ತಿಯಲ್ಲಿ ಇಲ್ಲದಿರುವುದು ವಿಪರ್ಯಾಸ ಎಂದರು.
ಇನ್ನೋರ್ವ ಅತಿಥಿ ಹಿಂದು ಜಾಗೃತಿ ಸಮಿತಿಯ ವಕ್ತಾರ ಮನೋಜ್ ಕಾಡೆ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಗೋಶಾಲೆಗಳಿಗೆ ಮೇವು ಖರೀದಿಸಲು ಅನುದಾನ ನೀಡಿದೆ ಗೋವುಗಳು ಪ್ಲಾಸ್ಟಿಕ್ ತಿಂದು ಬದುಕುತ್ತಿರುವುದು ದುಸ್ಥರ ಸಂಗತಿ. ರಾಜ್ಯದ ದೇವಾಲಯಗಳಲ್ಲಿ ಪೂಜಾ ಮಾಡುವಂತ ಪೂಜಾರಿಗಳು ವಿದೇಶಿಯ ವಸ್ತ್ರವನ್ನು ದರಿಸಿ ಪೂಜೆ ಮಾಡುತ್ತಿದ್ದಾರೆ. ಇನ್ನು ಹಿಂದು ದೇವಾಲಯಗಳಲ್ಲಿ ಸಂಗ್ರಹವಾದ ಹಣವನ್ನು ಮುಸ್ಲಿಂ ಮಸಿದಿ, ಕ್ರೈಸ್ತ ಚರ್ಚುಗಳಿಗೆ ನೀಡುತ್ತಿದ್ದಾರೆ. ಸರ್ಕಾರ ಎಚ್ಚೆತ್ತು ಕೊಂಡು ಇಂತಹ ಕೆಲಸಗಳನ್ನು ನಿಲ್ಲಿಸಬೇಕು ಇಲ್ಲದಿದ್ದರೆ ದೇಶದಲ್ಲಿಯೆ ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡುತ್ತೆವೆ ಎಂದರು.
ಇನ್ನು ಜೆಎನ್‍ಯು ವಿದ್ಯಾರ್ಥಿಗಳು ದೇಶದ ವಿರುದ್ಧ ಘೋಷಣೆ ಮಾಡಿದವರನ್ನು ಜೈಲಿನಲ್ಲಿಟ್ಟು ಪ್ರತಿಯೊಬ್ಬ ವಿದ್ಯಾರ್ಥಿಗೆ ವರ್ಷಕ್ಕೆ 9 ಲಕ್ಷ ಖರ್ಚು ಮಾಡುತ್ತಿದೆ, ಸರ್ಕಾರ ಅಂತವರನ್ನು ದೇಶದಿಂದ ದೂರ ಇಡಬೇಕು. ಎಂದರು.
ಈ ಸಂದರ್ಭದಲ್ಲಿ ನೂರಕ್ಕು ಹೆಚ್ಚು ಜನರು ಇದ್ದರು

loading...