loading...

ಕನ್ನಡಮ್ಮ ಸುದ್ದಿ-ರಾಮದುರ್ಗ : ರೆಡ್ಡಿ ಸಮಾಜ ಒಂದಾಗಿ ಸಂಘಟನೆ ಮಾಡಿದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನರೆÀಡ್ಡಿ ಹೇಳಿದರು.
ಪಟ್ಟಣದ ಆಂಜನೇಯ ನಗರದಲ್ಲಿ ಶಿವಶರಣಿ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನದÀ ನೂತನ ಕಟ್ಟಡದ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ರಾಮದುರ್ಗ ತಾಲೂಕಿನಲ್ಲಿ ಹೆಚ್ಚು ರೆಡ್ಡಿ ಸಮುದಾಯವರನ್ನು ಹೊಂದಿದ್ದು. ಉತ್ತಮ ಸಂಘಟನೆ ಇರುವುದರಿಂದ ಇಂತಹ ಒಂದು ಬೃಹತ್ ಆಕಾರದ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿರುವುದು ಸಂತೋಷದ ವಿಷಯ. ಬರುವ ದಿನಗಳಲ್ಲಿ ನಾವು ಕೂಡಾ ಸಹಾಯ ಸಹಕಾರ ನೀಡುತ್ತವೆ ಎಂದು ಹೇಳಿದರು.
ಅನಿವಾಸಿ ಭಾರತೀಯ ಬಿಜೆಪಿ ಮುಖಂಡ ಹಾಗೂ ಉದ್ಯಮಿ ಚಂದ್ರಕಾಂತ ಯತ್ನಟ್ಟಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಹಾದಿಯಲ್ಲಿ ನಾವು ನಡೆದದ್ದೆ ಆದರೆ ದೇಶ ಸುಭದ್ರವಾಗುತ್ತದೆ. ಭಾಜಪ ಅಧಿಕಾರಕ್ಕೆ ಬರಬೇಕಾದರೆ ಯುವಕರ ಪಾತ್ರ ಬಹುಮುಖ್ಯ ಎಂದು ಯುವಕರಿಗೆ ಕರೆ ನೀಡಿದರು.
ರೆಡ್ಡಿ ಸಮಾಜದ ತಾಲೂಕಾಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೊಳ, ವೈ.ಬಿ.ಕಕರೆಡ್ಡಿ,ಅಶೋಕ ಹಕಾಟಿ, ಡಾ. ವೆಂಕಟೇಶ ಹೆಬ್ಬಳ್ಳಿ, ಹನಮಂತ ಒಂಟಗೋಡಿ, ಹನಮಂತಗೌಡ ಭರಮಗೌಡ್ರ, ಎಸ್.ವಿ.ಕುಲಕರ್ಣಿ, ಶಿವರೆಡ್ಡಿ ಜಗಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...