ಲಾರಿಯ ಕೆಳಗೆ ಮಲಗಿದ ಮೂವರು ಸ್ಥಳದಲ್ಲೇ ದುರ್ಮರಣ

0
51
loading...

ಕನ್ನಡಮ್ಮ ಸುದ್ದಿ-ಗದಗ : ಲಾರಿಯ ಕೆಳಗೆ ಮಲಗಿಕೊಂಡಿದ್ದ ಮೂವರು ದುರ್ಮರಣ ಹೊಂದಿರುವ ಘಟನೆಯೊಂದು ಬುಧವಾರ ಬೆಳಗಿನ ಜಾವ ಗದಗ ತಾಲೂಕಿನ ಅಡವಿಸೋಮಾಪೂರ ಬಳಿ ನಡೆದಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಭದ್ರಾಪೂರದ ನಿವಾಸಿಗಳೆನ್ನಲಾದ ರಾಜಾಸಾಬ ಹಾಗೂ ಅಮೀನ್‍ಸಾಬ ಅಲ್ಲದೆ ಅಣ್ಣಿಗೇರಿ ಪಟ್ಟಣದ ನಿವಾಸಿ ಎನ್ನಲಾದ ಮಂಜುನಾಥ ಎಂಬುವವರ ಮೃತ ಶವಗಳೆಂದು ಗುರುತಿಸಲಾಗಿದೆ.
ಈ ಮೂವರಲ್ಲಿ ಲಾರಿ ಡ್ರೈವರ್ ಹಾಗೂ ಕ್ಲೀನರ್ ಎಂದು ಕೆಲಸ ಮಾಡುತ್ತಿದ್ದರು ಇನ್ನಲಾಗಿದ್ದು ಲಾರಿಯ ಕೆಳಗಡೆ ಮಲಗಿಕೊಂಡಿರುವ ವಿಷಯ ಗೊತ್ತಿದ್ದರೂ ಯಾಕೆ ಲಾರಿ ಚಲಾಯಿಸಿ ಇವರ ಸಾವಿಗೆ ಕಾರಣವಾಯಿತು ಎಂಬುದರ ಬಗ್ಗೆ ಸಧ್ಯಕ್ಕೆ ಮಾಹಿತಿ ತಿಳಿದು ಬಂದಿಲ್ಲ. ಲಾರಿ ನಂಬರ್ ಹಾಗೂ ಲಾರಿಯ ಮಾಲೀಕನ ಹೆಸರು ಪತ್ತೆಯಾಗಿದ್ದು ಆರೋಪಿಯ ಶೋಧನೆಯ ಕಾರ್ಯ ನಡೆದಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕಾರಿ ಕೆ.ಸಂತೋಷ ಬಾಬು ‘ಕನ್ನಡಮ್ಮ’ ದೊಂದಿಗೆ ಮಾತನಾಡುತ್ತ ತಿಳಿಸಿದರು.
ಘಟನಾ ಸ್ಥಳಕ್ಕೆ ಗದಗ ಎಸ್ಪಿ ಕೆ.ಸಂತೋಷ ಬಾಬು, ಡಿಎಸ್ಪಿ ವಿಜಯಕುಮಾರ, ಗದಗ ಗ್ರಾಮೀಣ ಸಿಪಿಐ ಹಾಗೂ ಪಿಎಸ್‍ಐ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಜರುಗಿಸಿದರು.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...