loading...

ವಾರ್ಷಿಕ ಪಾರಿತೋಷಕ ವಿತರಣಾ ಸಮಾರಂಭ ಅಲಕಾ ಮತಗೇಕರ ಅಭಿಮತ
ಕನ್ನಡಮ್ಮ ಸುದ್ದಿ-ಬೆಳಗಾವಿ: ವಿದ್ಯಾರ್ಥಿಗಳು ಭಾರತೀಯ ಸಂಸ್ಕ್ರುತಿ ಕಲೆ ಹಾಗೂ ಮೌಲ್ಯಗಳನ್ನು ರೊಢಿಸಿಕೊಂಡು ಪಠ್ಯಗಳ ಜೊತೆಗೆ ಪಠ್ಯೆತರ ಚಟುವಟಿಕೆಗಳಲ್ಲಿ ಭಾಗಿಯಾಗಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ವಿದ್ಯಾಥಿಗಳಿಗೆ ಮರಾಠಾ ಮಂಡಳ ಮಹಾವಿದ್ಯಾಲಯದ ಪ್ರೋ. ಅಲಕಾ ಮುತಗೇಕರ ಸಲಹೇ ನೀಡಿದರು.
ಖಾನಾಪೂರ ಪಟ್ಟಣದ ಮರಾಠಾ ಮಂಡಳ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಡಳಿತ ಮಂಡಳಿಯ ಸದಸ್ಯ ಪರಶುರಾಮಣ್ಣ ಗುರವ ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಕ್ರೀಡಾ ಹಾಗೂ ಸಾಂಸ್ಕ್ರುತಿಕ ಸಂಘದವತಿಯಿಂದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಮೊದಲು ತಾವು ಇರು ಸ್ಥಳದಲ್ಲಿ ನಮ್ಮ ಸಂಸ್ಕøತಿ ಬಿಂಬಿಸುವ ವಸ್ತುಗಳ ಬಗ್ಗೆ ಅರಿವಿರಬೇಕು ಎಂದು ಹೇಳಿದರು.
ಮರಾಠಾ ಮಂಡಳದ ಆಡಳಿತ ಮಂಡಳಿಯ ಸದಸ್ಯ ಶಿವಾಜಿರಾವ ಪಾಟೀಲ ವಿಶೇಷ ಆಮಂತ್ರಿತರಾಗಿ ಆಗಮಿಸಿ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್. ಜಿ. ಸೊನ್ನದ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತ ಕೋರಿದರು. ಡಾ. ಡಿ. ಎಂ. ಮುಲ್ಲಾ ಗಣ್ಯರನ್ನು ಪರಿಚಯಿಸಿದರು ಡಾ. ಜೆ. ಕೆ. ಬಾಗೇವಾಡಿ ಕಾಲೇಜಿನ ವಾರ್ಷಿಕ ವರದಿಯನ್ನು ಓದಿದರು.
ಇದೆ ಸಂದರ್ಭದಲ್ಲಿ ಗಜಾನನ ಜಾಧವಕಾಲೇಜಿನ ಅತ್ಯುತ್ತಮ ಕ್ರೀಡಾ ಪಟು ಎಂದು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯ ರಲ್ಲಿ ಅತ್ಯುತ್ತಮ ಆಟಗಾರ್ತಿಯಾಗಿ ಸೋನಾಲಿ ಯಳ್ಳುರಕರ ಸನ್ಮಾನಿಸಲಾಯಿತು ಪ್ರೊ. ಆಯ್. ಎಂ. ಗುರವ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಕಾರ್ಯದರ್ಶಿ ತುಕಾರಾಮ ಸನದಿ ವಂದಿಸಿದರು.

loading...