ವಿಧ್ಯಾರ್ಥಿಗಳು ಸೌಲಭ್ಯಗಳ ಸದುಪಯೋಗ ಪಡೆದು ಕಿರ್ತಿಯನ್ನು ತರಲಿ: ಹಿರೇಮಠ

0
67
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ಇಂದಿನ ವಿಧ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತಿದ್ದು ಸರಕಾರದ ಸೌಲಭ್ಯಗಳನ್ನು ಸದ್ಭಳೀಕೆ ಮಡಿಕೊಂಡು ಹೆಚ್ಚಿನ ಅಂಕ ಪಡೆದು ನಿಮ್ಮ ಶಾಲೆಗೆ ಮತ್ತು ನಿಮ್ಮ ತಂದೆ ತಾಯಿಗಳಿಗೆ ಕಿರ್ತಿ ತರಬೇಕು ಎಂದು ಸಜ್ಜಲ ಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಎಂ. ಹಿರೇಮಠ ಹೇಳಿದರು. ಪಟ್ಟಣ ಸಜ್ಜಲ ಶ್ರೀ ಖಾಸಗಿ ಕೈಗಾರಿಕ ತರಬೆತಿ ಕೇಂದ್ರದಲ್ಲಿ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ತರಬೇತಿ ಕಿಟ್ ವಿತರಿಸಿ ಮಾತನಾಡುತ್ತ ಇಂದಿನ ವಿಧ್ಯಾರ್ಥಿಗಳಿಗೆ ಸರಕಾರ ಹಲವಾರು ಯೋಜನೆಗಳನ್ನು ನೀಡುತ್ತದೆ. ವಿಶೆಷವಾಗಿ ಹಿಂದುಳಿದ ವರ್ಗದ ವಿಧ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ದೊರುಕುತ್ತದೆ. ಇಂತಹ ಯೋಜನೆಗಳನ್ನು ಉಪಯೋಗ ಮಾಡಿಕೊಂಡು ಹೆಚ್ಚಿನ ಅಂಕ ಪಡೆದು ನಿಮ್ಮ ಭವಿಷ್ಯವನ್ನು ರುಪಿಸಿಕೊಳ್ಳಬೇಕು. ವಿದೈರ್ಥಿಗಳು ಕೆಟ್ಟ ಚಟಗಳಿಂದ ದೂರವಿದ್ದು ಶಿಕ್ಷಣಕ್ಕೆ ಒತ್ತ ನೀಡುವದರಿಂದ ನೀವು ಕಲಿಯವ ಶಾಲಾ ಕಲೇಜಿಗೂ ಮತ್ತು ನಿಮ್ಮ ಪಾಲಕರಿಗೆ ಕೀತಿ ಸೇರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಜೀವ ಕುಮಾರ ದಿವಾನಜಿ, ಮಲ್ಲಣ್ಣ ಸಜ್ಜನ, ಶ್ರೀನಿವಾಸ ಪುರೋಹಿತ್ ಮತ್ತು ಕಾಲೇಜಿ ಪ್ರಾಚಾರ್ಯ ಶ್ರೀಕಾಂತ ಸರಗಣಾಚಾರ ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

loading...