loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ಹು-ಧಾ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಪಾಲಿಕೆಯ ವಾರ್ಡ ನಂ 40 ರಲ್ಲಿ ಎಸ್ ಎಫ್ ಪಿ ಅನುದಾನದಲ್ಲಿ ಮದೀನಾ ಕಾಲನಿ, ಪದ್ಮರಾಜ ನಗರ ಮುಖ್ಯ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಪರಿಶೀಲಿಸಿದರು.
ನಾವಳ್ಳಿ ಪ್ಲಾಟಿನ ಒಳ ರಸ್ತೆಗಳನ್ನು ಬಯಲು ಸೀಮೆ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮತ್ತು ಸರಕಾರದ ವಿಶೇಷ ಅನುದಾನದಲ್ಲಿ ಕಾಮಗಾರಿ ಕೈಗೊಂಡಿರುವ ಎಲ್ಲ ರಸ್ತೆಗಳನ್ನು ಮತ್ತು ಒಳ ರಸ್ತೆಗಳನ್ನು ವೀಕ್ಷಿಸಿದರು. ಬಾಕಿ ಉಳಿದ ರಸ್ತೆಗಳ ಅಭಿವೃದ್ದಿ ಬಗ್ಗೆ ನಾಗರಿಕರು ಮನವಿ ಮಾಡಿದರು. ಬಾಕಿ ಉಳಿದ ಚೇಂಬರ ಕಟ್ಟುವ ಕಾರ್ಯವನ್ನು ಪೂರ್ತಿಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಇದೇ ವೇಳೆಯಲ್ಲಿ ಮೇಯರ್ ಡಿಕೆ ಚವಾಣ, ಲಕ್ಷ್ಮಣ ಬೀಳಗಿ, ಮಹಾನಗರ ಜಿಲ್ಲಾ ಬಿಜೆಪಿ ಅದ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಪಾಲಿಕೆ ಸದಸ್ಯ ರಾಘವೇಂದ್ರ ರಾಮದುರ್ಗ, ಮುಕುಂದ ಗೌಡ, ಗುಗ್ಗರಿ, ಶಿವರುದ್ರಪ್ಪಾ ಬಡಿಗೇರ, ಬಲಭೀಮ ಪೋದ್ದಾರ, ವಿವೇಕ ಹಳ್ಳಿ, ರವಿ ಕಲಾಲ, ಸಿದ್ದನಗೌಡಾ ಪಾಟೀಲ, ಸಂಗೀತಾ ಬದ್ದಿ, ದೀಪಕ ಜೀತೂರಿ, ನಾವಳ್ಳಿ ಪ್ಲಾಟ್ ನಿವಾಸಿಗಳು ಹಿರಿಯರು ಉಪಸ್ಥಿತರಿದ್ದರು.

loading...