ವಿವಾದದ ನಡುವೆಯೂ ಘಟಿಕೋತ್ಸವ ನಡೆಸಲು ಮುಂದಾದ ಆರ್‍ಸಿಯು

0
309
loading...


ಕನ್ನಡಮ್ಮ ಸುದ್ದಿ
ಬೆಳಗಾವಿ:6 ಉತ್ತರ ಕರ್ನಾಟಕದ ಪ್ರತಿಷ್ಠೆಯ ವಿಶ್ವವಿದ್ಯಾಲಯದಲ್ಲಿ ಒಂದಾದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಘಟಿಕೋತ್ಸವವನ್ನು ಏಪ್ರೀಲ್ 28ಕ್ಕೆ ನಿಗದಿ ಪಡಿಸಲಾಗಿತ್ತು. ವಿವಿಯಲ್ಲಿ ನಡೆಯುತ್ತಿರುವ ವಿವಾದವನ್ನು ಗಮನಿಸಿದ ಉನ್ನತ ಶಿಕ್ಷಣ ಸಚಿವ, ರಾಜ್ಯಪಾಲರು ಘಟಿಕೋತ್ಸವ ಬರಲು ಒಪ್ಪಿರಲಿಲ್ಲ.
ವಿವಿಯಲ್ಲಿ ನಡೆದ ಅಕ್ರಮ ಪಿಎಚ್‍ಡಿ ಹಗರಣ ಹಾಗೂ ಕೆಲವು ವಿಭಾಗದ ಸಹಾಯಕ ಕುಲಸಚಿವರ ಸ್ಥಾನಕ್ಕೆ ರಾಜೀನಾಮೆ ಪಡೆದಿರುವುದು ಉನ್ನತ ಶಿಕ್ಷಣ ಸಚಿವ, ರಾಜ್ಯ ಪಾಲರಿಗೆ ಮುಜುಗರ ಉಂಟುಮಾಡಿತ್ತು. ಇದಾದ ನಂತರದಲ್ಲಿ ತರಾತುರಿಯಲ್ಲಿ ಶ್ರೀಗಳೊಬ್ಬರಿಗೆ ಡಾಕ್ಟರೇಟ್ ಪದವಿ ನೀಡಲು ರಾಜ್ಯ ಪಾಲರಲ್ಲಿ ಶಿಪಾರಸನ್ನು ಮಾಡಿದ್ದರು. ಆದರೆ ತೆರೆ ಮರೆಯಲ್ಲಿ ಕಾರ್ಯನಿರ್ವಹಿಸುವ ಶ್ರೀಗಳಿಗೆ ವಿವಿ ಡಾಕ್ಟರೇಟ್ ಪದವಿ ಶಿಫಾರಸ್ಸು ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿ ಸ್ಥಾಪನೆಯಾಗಲು ಕನ್ನಡ ಪರ ಹೋರಾಟಗಾರರು, ವಿವಿಧ ಮಠಾಧೀಶರ ಹೋರಾಟದ ಫಲವಾಗಿ ವಿಶ್ವ ವಿದ್ಯಾಲಯ ನಗರದ ಹೊರ ವಲಯದ ಭೂತರಾಮನ ಹಟ್ಟಿಯ ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗಿತ್ತು.
ಆದರೆ ಕಳೆದ ಮೂರನಾಲ್ಕು ವರ್ಷದಿಂದ ಆರ್‍ಸಿಯು ವಿಶ್ವ ವಿದ್ಯಾಲಯದಲ್ಲಿ ಪಿಎಚ್‍ಡಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಸಹಾಯಕ ಕುಲಸಚಿವರ ಹುದ್ದೆಯನ್ನು ನೀಡಿತ್ತು. ಇದರಿಂದ ಇಲ್ಲಿನ ಕೆಲ ಪಿಎಚ್‍ಡಿ ವಿದ್ಯಾರ್ಥಿಗಳು ಗೋಳಾಟ ಅನುಭವಿಸುವಂತಾಗಿತ್ತು. ವರದಿ ಮುಖಾಂತರ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತಂದಾಗ ಸಹಾಯಕ ಕುಲಸಚಿವ ಸ್ಥಾನ ನೀಡಿದ್ದ ಪಿಎಚ್‍ಡಿ ವಿದ್ಯಾರ್ಥಿಗಳಿಂದ ರಾಜೀನಾಮೆ ಪಡೆದುಕೊಂಡಿದ್ದರು.
ಅಲ್ಲದೆ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ರಾಜ್ಯ ಸರಕಾರದ ಎರಡೂ ಬಜೆಟ್‍ನಲ್ಲಿ ಅನುದಾನ ನೀಡದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಪಡೆಯುವಂಥ ಸೌಲಭ್ಯಗಳು ವಿವಿಯಲ್ಲಿ ಇಲ್ಲ. ಸುಸಜ್ಜಿತವಾದ ಗ್ರಂಥಾಲಯವಿಲ್ಲ. ಹಾಸ್ಟೇಲ್ ವ್ಯವಸ್ಥೆ ಹೇಳ ತೀರದು. ಇನ್ನೂ ಇಲ್ಲಿನ ಸಿಬ್ಬಂದಿಗಳ ವೈಮನಸ್ಸಿನಿಂದ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ ಸ್ವಂತ ಸೂರಿಲ್ಲದೆ. ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಘಟಿಕೋತ್ಸವವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಸುವಂತಾಗಿದೆ. ಇದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

loading...