ವಿವಿಧ ಪ್ರಕರಣದಲ್ಲಿ 28 ಜನರ ಬಂಧನ

0
39
loading...

ಕನ್ನಡಮ್ಮ ಸುದ್ದಿ-ಬೆಳಗಾವಿ:
ಜಿಲ್ಲೆಯಾದ್ಯಂತ ಪೊಲೀಸ್ ಅಧಿಕಾರಿಗಳು ದಾಳಿಮಾಡಿ ವಿವಿಧ ಪ್ರಕರಣಗಳಲ್ಲಿ 28 ಜನರನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಅಕ್ರಮ ಮರಳು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ ಒಂದು ವಾಹನ 3,000 ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮೂರರನ್ನು ಬಂಧಿಸಿ 6,650 ರೂ. ಮೌಲ್ಯದ ಮದ್ಯ ಬಾಟಲಿಗಳು ಹಾಗೂ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ.
ಕ್ರಿಕೇಟ್ ಬೆಟ್ಟಿಂಗ್‍ನ ಹತ್ತು ಪ್ರಕರಣದಲ್ಲಿ ಐದು ಜನರನ್ನು ವಶಪಡಿಸಿಕೊಂಡು, 12 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ಮಟಕಾದಲ್ಲಿ ತೊಡಗಿದ್ದ ಓರ್ವನನ್ನು ಬಂಧಿಸಿ 3,060 ರೂ ಹಾಗೂ ಜೂಜಾಟದಲ್ಲಿ ತೊಡಿಗಿದ್ದ 17 ಜನರನ್ನು ಬಂಧಿಸಿ 7,760 ರೂ ವಶಪಡಿಸಿಕೊಂಡು 3 ಪ್ರಕರಣ ದಾಖಲಿಸಿಕೊಂಡಿದ್ದಾರೆ.

loading...