ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

0
31
loading...


ಕನ್ನಡಮ್ಮ ಸುದ್ದಿ-ಬೆಳಗಾವಿ:
ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದಿಂದ ಬಿಸಿ ಊಟ ಅಡುಗೆ ನೌಕಕರರು ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದ್ದರು.
ಅಕ್ಷರ ದಾಸೋಹ ಊಟ ತಯಾರಿಸಲು ರಾಜ್ಯಾದ್ಯಂತ 1 ಲಕ್ಷ 24 ಸಾವಿರ ರೂ. ಬಡವರು, ದಲಿತರು, ವಿಧವೆಯರು ಹಾಗೂ ನಿರ್ಗತಿಕ ಮಹಿಳೆಯರು ಕೆಲಸ ಮಾಡುತ್ತಿದ್ದು, ಅವರಿಗೆ ಗೌವರ ಧನವೆಂದು ಕೆಲವ 2 ಸಾವಿರ ರೂ. ಮಾತ್ರ ನೀಡಲಾಗುತ್ತಿದೆ. ಅವರಿಗೆ ಕನಿಷ್ಠ 4 ಸಾವಿರ ರೂ. ವೇತನವಾದರೂ ನಿಗದಿಪಡಿಸಬೇಕು.
ಅಕ್ಷರ ದಸೋಹ ಯೋಜನೆಗೆ ಅಡುಗೆ ತಯಾರಿಸುವ ಹೊಣೆಯನ್ನು ಸಂಘ ಸಂಸ್ಥೆಗಳಿಗೆ ನೀಡುವುದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಎಲ್ಲ ನೌಕರಿಗೆ ನೀಡುವಂತೆ ಸಾಮಾಜಿಕ ಭದ್ರತೆಗಾಗಿ ಪೆನ್ಸನ್ ನೀಡಬೇಕು. ಬಿಸಿಊಟ ನೌಕರರನ್ನು ಡಿ ದರ್ಜೆಯ ನೌಕರರೆಂದು ಪರಿಗಣಿಸಬೇಕು.
ಕೇಂದ್ರ ಸರ್ಕಾರ ಬಿಸಿಯೂಟಕ್ಕೆ ನೀಡುತ್ತಿದ್ದ ಅನುದಾನವನ್ನು ಹಿಂದಕ್ಕೆ ಪಡದಿದ್ದನ್ನು ಮತ್ತೆ ಅನುದಾನವನ್ನು ನೀಡಬೇಕು. ಬಡತನದಲ್ಲಿರುವ ನಿರ್ಗತಿಕ ಮಹಿಳೆಯರು ಈ ಕೆಲಸ ಮಾಡುತ್ತಿರುವುದರಿಂದ ಸರ್ಕಾರ ಈ ಕೂಡಲೇ ನಮ್ಮ ಸಮಸ್ಯೆಗಳನ್ನು ಪರಿಹಸಿಬೇಕೆಂದು ಆಗ್ರಹಿಸಿ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದ್ದರು.
ಎಲ್.ಎಸ್ ನಾಯಕ, ತುಳಸಮ್ಮ ಮಾಳದಕರ, ಜಿ.ಎಂ ಜೈನೆಖಾನ್, ಸುಮತಿ ಕೊಲ್ಲಾಪೂರೆ, ಶಾಂತಮ್ಮ ಗೊರವನಕೊಳ್ಳ, ವೆಂಕವ್ವ ಕಾನಟ್ಟಿ, ಶಕುಂತಲಾ ಉರಣೆ, ಸುನೀತಾ ಆವಟೆ, ಭಾರತಿ ಜೋಗನ್ನವರ, ಲಕ್ಷ್ಮೀ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

loading...