ಕನ್ನಡಮ್ಮ ಸುದ್ದಿ-ಗೋಕಾಕ: ನಗರದ ಅಂಬಿಗೇರ ಗಲ್ಲಿಯಲ್ಲಿರುವ ಶ್ರೀ ಶಾಮಾನಂದ ಆಶ್ರಮದ ಉತ್ತರಾಧಿಕಾರಿಗಳಾಗಿ ಶ್ರೀ ಚಿದ್ಘಾನಾನಂದ ಭಾರತಿ ಮಹಾಸ್ವಾಮಿಗಳ ಆಯ್ಕೆ ಮಾಡಲಾಯಿತು.
     ರಾಣೆಬೆನ್ನೂರ ತಾಲೂಕಿನ ಐರಣಿಯ ಮುಪ್ಪಿನಾರ್ಯ ಮಹಾತ್ಮಜಿ ಮಠದಲ್ಲಿ ಸಿದ್ಧಾರೂಢ ಸಂಪ್ರದಾಯದ ಜಗದ್ಗುರು ಶ್ರೀ ಬಸವರಾಜ ದೇಶೀಕೇಂದ್ರ ಮಹಾಸ್ವಾಮಿಗಳು, ಚಿಕ್ಕನಂದಿಯ ಸಿದ್ಧಾರೂಢ ದರ್ಶನ ಪೀಠದ ಪೀಠಾಧ್ಯಕ್ಷರಾದ ಸಹಜಾನಂದ ಮಹಾಸ್ವಾಮಿಗಳು, ಕಾಡರಕೊಪ್ಪದ ನ್ಯಾಯವೇದಾಂತಾಚಾರ್ಯ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ಶಾಮಾನಂದ ಆಶ್ರಮದ ಅತ್ಯಾನಂದ ಮಹಾಸ್ವಾಮಿಗಳು, ರಾಜವಿದ್ಯಾಶ್ರಮದ ಷಡಕ್ಷರಿ ಮಹಾಸ್ವಾಮಿಗಳು, ಯೋಗಿರಾಜ ಸದಾಶಿವ ಗುರುಜಿ ಅವರ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಹಾಗೂ ಬಸವರಾಜ ಕಲ್ಯಾಣಶೆಟ್ಟರ ಹಾಗೂ ಶಾಮಾನಂದ ಆಶ್ರಮದ ಸಾವಿರಾರು ಸದ್ಭಕ್ತರು ಉಪಸ್ಥಿತರಿದ್ದರು
     ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಅವರು ಮಾತನಾಡಿ, ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಭೋದಿಸಿ ಅದರಂತೆ ನಡೆದು, ವಿಶ್ವಯೋಗಿ ಜಾತ್ಯಾತೀತ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಅಗ್ರ ಗಣ್ಯ ಶಿಷ್ಯರಾದ ಗೋಕಾಕದ ಸದ್ಗುರು ಶ್ರೀ ಶಾಮಾನಂದ ಮಹಾಸ್ವಾಮಿಜಿಯವರು ಶ್ರೀ ಸಿದ್ಧಾರೂಢರ ಆದೇಶದಂತೆ ಗೋಕಾಕ ನಗರಕ್ಕೆ ಆಗಮಿಸಿ ಅಂಬಿಗೇರ ಗಲ್ಲಿಯಲ್ಲಿ ಆಶ್ರಮವನ್ನು ಸ್ಥಾಪನೆ ಮಾಡಿದ್ದಾರೆ ಅಲ್ಲದೇ ಶ್ರೀಮನ್ನಿಜಗುಣರ ವೇದಾಂತ ಗ್ರಂಥಾವಳಿ ಗ್ರಂಥಗಳನ್ನು ಹಾಗೂ ಇನ್ನೂ ಅನೇಕ ಅದ್ವೈತ ವೇದಾಂತ ಗ್ರಂಥಗಳನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳೆಲ್ಲಾ ಸಂಚರಿಸಿ ಭಕ್ತರಿಗೆ ಬೋಧಿಸಿ ಅನೇಕ ಜನರನ್ನು ಶ್ರೀ ಸಿದ್ಧಾರೂಢರ ಕಡೆಗೆ ಬರುವಂತೆ ಮಾರ್ಗದರ್ಶನ ಮಾಡಿದ್ದರು ಎಂದು ಹೇಳಿದರಲ್ಲದೇ ಶತಾಯುಶಿಗಳಾದ ಶ್ರೀಗಳು 1995 ರಲ್ಲಿ ಬ್ರಹ್ಮಲೀನರಾದರು. ಅವರ ಇರುವಾಗಲೇ ನೇಮಿಸಿದ ಶ್ರೀ ಅತ್ಯಾನಂದ ಮಹಾಸ್ವಾಮಿಗಳು ಇಲ್ಲಿಯ ಪರಿಯಂತರವಾಗಿ ಶ್ರೀಮಠದ ಸಂಪ್ರದಾಯವನ್ನು ಮುನ್ನೇಡೆಸಿಕೊಂಡು ಬಂದರು. ಅವರ ನಂತರದ ಉತ್ತರಾಧಿಕಾರಿಗಳಾಗಿ ಐರಣಿಯ ಜಗದ್ಗುರು ಶ್ರೀ ಬಸವರಾಜ ದೇಶೀಕೇಂದ್ರ ಮಹಾಸ್ವಾಮಿಗಳವರ ಶಿಷ್ಯಂದಿರಾದ ಶ್ರೀ ಚಿದ್ಘಾನಾನಂದ ಭಾರತಿ ಮಹಾಸ್ವಾಮಿಗಳವರನ್ನು ಜರುಗಿದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
loading...