ಶೆಡ್ ತೆರವುಗೊಳಿಸುವಂತೆ ಜಿಲ್ಲಾ ಮಂತ್ರಿಗೆ ಮನವಿ ನೀಡಿದ ಗುಂಜಟ್ಕರ

0
107
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: 11ಗ್ರಾಮೀಣ ಶಾಸಕ ಸಂಜಯ ಪಾಟೀಲ ಕುಟುಂಬ ಒಡೆತನದ ಹಿಂದವಾಡಿ ಗೊಮ್ಮಟೇಶ ಎದುರಿನ ಅಕ್ರಮ ಶೆಡ್ ಅನ್ನು ವಾರದಲ್ಲಿ ಕೆಡವಿಸಬೇಕೆಂದು ಮಹಾನಗರಪಾಲಿಕೆ ಪಿಡಬ್ಲ್ಯುಡಿ ಸ್ಥಾಯಿ ಸಮಿತಿ ಅಧ್ಯಕ್ಷ ವಿನಾಯಕ ಗುಂಜೂಟಕರ ಸಚಿವ ರಮೇಶ ಜಾರಕಿಹೊಳಿ ಅವರನ್ನು ಒತ್ತಾಯಿಸಿದ್ದಾರೆ.
ಗುರುವಾರ ಸರ್ಕ್ಯೂಟ್ ಹೌಸ್ ನಲ್ಲಿ ಸಚಿವರನ್ನು ಭೇಟಿಯಾದ ಸ್ಥಾಯಿ ಸಮಿತಿ ಅಧ್ಯಕ್ಷ ವಿನಾಯಕ ಗುಂಜುಟಕರ ಜತೆ ಮತ್ತಿತರರು ಅಕ್ರಮವಾಗಿ ಹಿಂದವಾಡಿಯ ರಸ್ತೆಯ ಮೇಲೆ ಕಟ್ಟಿಸಿರುವ ಶೆಡ್ ನ್ನು ಮುಲಾಜಿಲ್ಲದೇ ಒಂದು ವಾರದ ಕಾಲಮಿತಿಯಲ್ಲಿ ಕೆಡವಿಸಿ ಸಾರ್ವಜನಿಕ ಓಡಾಟಕ್ಕೆ ರಸ್ತೆ ಮುಕ್ತಗೊಳಿಸಬೇಕು. ಈ ಕುರಿತು ಅನೇಕ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅನಿವಾರ್ಯವಾಗಿ ವಾರದ ನಂತರ ಟಿಳಕವಾಡಿ ಆರ್ ಪಿಡಿ ಕ್ರಾಸ್ ನಲ್ಲಿ ಜನತೆಯೊಂದಿಗೆ ಧರಣಿ ಕೂಡುವುದಾಗಿ ಸಚಿವರಿಗೆ ಗುಂಜುಟಕರ ಒತ್ತಾಯಿಸಿ ಎಚ್ಚರಿಸಿದರು.
ಕೂಡಲೇ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಕಮಿಷ್ನರ್ ಅವರಿಗೆ ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು. ನಾನೂ ನಿಮ್ಮೊಂದಿಗೆ ಧರಣಿಗೆ ಬರುತ್ತೇನೆ ಎಂದು ರಮೇಶ ಜಾರಕಿಹೊಳಿ ಗುಂಜೂಟಕರ ಮೈದವಡಿ ಕ್ರಮದ ಭರವಸೆ ನೀಡಿದರು.
ಮಹಾನಗರ ಪಾಲಿಕೆ ಉಪಮೇಯರ್ ನಾಗೇಶ ಮಂಡೋಳಕರ ಮತ್ತಿತರರಿದ್ದರು.

loading...