ಶ್ರಮ ಸಂಸ್ಕøತಿ ಆರ್ಥಿಕ ಸಮೃದ್ಧತೆಗೆ ಸಹಕಾರಿಯಾಗಿದೆ: ತೋಂಟದ ಶ್ರೀಗಳು

0
32
loading...

ಕನ್ನಡಮ್ಮಸುದ್ದಿ-ಗದಗ : ದುಡಿಮೆಗೆ ಪ್ರಾಧಾನ್ಯತೆಯನ್ನು £ೀಡಿ, ಕಾಯಕದಲ್ಲಿನ ಬೇಧಭಾವಗಳನ್ನು ತೊಡೆದು ಸಮಾನ ಸಮಾಜದ £ರ್ಮಾಣಕ್ಕೆ ಶ್ರಮಿಸಿದ ಬಸವಣ್ಣ ಹಾಗೂ ಅವನ ಸಮಕಾಲೀನರು ಮೊದಲ ಸಮಾಜವಾದಿಗಳಾಗಿದ್ದಾರೆ. ಯಾವುದೇ ಕಾಯಕಕ್ಕೆ ಮೇಲು ಮತ್ತು ಕೀಳುಗಳಿಲ್ಲ. ಎಲ್ಲರೂ ಸಮಾನ ಗೌರವಕ್ಕೆ ಅರ್ಹರಾಗಿದ್ದಾರೆ. ಶ್ರಮ ಸಂಸ್ಕøತಿ ಆರ್ಥಿಕ ಸಮೃದ್ಧತೆಗೆ ಸಹಕಾರಿಯಾಗಿದೆ ಎಂಬುದನ್ನು ಕಾಯಕ ಜೀವಿಗಳು ಅರಿತಿದ್ದರು ಎಂದು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಅವರು ಜ. ತೋಂಟದಾರ್ಯಮಠದಲ್ಲಿ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದರು. ಕಾಲಮಾಕ್ರ್ಸನ ಸಿದ್ಧಾಂತ ಕಾರ್ಮಿಕರ ಶ್ರೇಷ್ಠತೆಯನ್ನು ಹೇಳಿದೆ. ಲೆ£ನ್ ಕಾರ್ಮಿಕರ ಪರವಾಗಿ ಹೋರಾಟ ಮಾಡಿ ಸಮಾಜವಾದಿ ರಾಷ್ಟ್ರ £ರ್ಮಾಣಕ್ಕೆ ಶ್ರಮಿಸಿದ್ದಾರೆ. ದುಡಿಮೆಗೆ ತಕ್ಕ ಪ್ರತಿಫಲವನ್ನು £ೀಡಬೇಕಾದ ಜವಾಬ್ದಾರಿ ಮಾಲೀಕರದಾದಾಗ ಉತ್ಸಾಹದಿಂದ ಕಾರ್ಮಿಕ ವರ್ಗ ಕೆಲಸ ಮಾಡಿ ಉತ್ಪಾದನಾ ಹೆಚ್ಚಳಕ್ಕೆ ಕಾರಣರಾಗಲು ಸಾಧ್ಯವಾಗುತ್ತದೆ ಎಂದರು.
ಕಾರ್ಮಿಕರ ದಿನಾಚರಣೆ ಅಂಗವಾಗಿ ‘ಕಾಯಕದ ಮಹತ್ವ’ ಕುರಿತು ಉಪನ್ಯಾಸ £ೀಡಿದ ಅಣ್ಣಿಗೇರಿ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬಿ.ಎನ್.ಮೂಲಿಮ£ ಅವರು, ದೇಶದ ಆರ್ಥಿಕ ವ್ಯವಸ್ಥೆ ಶ್ರಮಿಕ ವರ್ಗದ ಮೇಲೆ £ಂತಿದೆ. ಅಸಂಘಟಿತ ವಲಯದ ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರಕಾರ ಅನೇಕ ಯೋಜನೆಗಳು ಅವರನ್ನು ತಲುಪುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನದ ಬೇಡಿಕೆ ಈಡೇರಬೇಕು. ಸಂಪತ್ತಿನ ವಿಕೇಂದ್ರಿಕರಣದಿಂದ ಮಾತ್ರ ಸಮಾಜವಾದದ ಸಮಾಜ £ರ್ಮಾಣವಾಗಲು ಸಾಧ್ಯ. 12ನೇ ಶತಮಾನದ ಶರಣರು ಕಾಯಕಕ್ಕೆ £ೀಡಿದ ಪ್ರಾಧಾನ್ಯತೆ ಅನುಕರಣೀಯವಾದುದು. ಗುರು ಲಿಂಗ ಜಂಗಮಕ್ಕಿಂತ ಕಾಯಕವೇ ಶ್ರೇಷ್ಠ ಎಂಬುದನ್ನು ಸಾರಿದ ಶರಣರು ಕಾಯಕ ಶ್ರೇಷ್ಠತೆಯನ್ನು ಮರೆದಿದ್ದಾರೆ. 19ನೆಯ ಶತಮಾನದಲ್ಲಿ ಕೈಗಾರಿಕೆಗಳ ಕ್ಷಿಪ್ರ ಬೆಳವಣಿಗೆಯಿಂದ ಕಾರ್ಮಿಕ ಸಂಘಟನೆಗಳು ಮತ್ತು ಚಳುವಳಿಗಳು ಹೊಸ ರೂಪವನ್ನು ಪಡೆದುಕೊಂಡವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಮಾಲಿ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿರುವ ಮಕ್ತುಂಸಾಬ ಕಲೇಬಾಯಿ ಹಾಗೂ ಪೌರಕಾರ್ಮಿಕರಾದ ದ್ಯಾಮಣ್ಣ ರಾಮಗಿರಿ ಅವರನ್ನು ಪೂಜ್ಯರು ಸಂಮಾ£ಸಿದರು. ಸಂಗೀತ ಕಲಾವಿದೆ ರಾಜಶ್ರೀ ಅರುಣ ಕುಲಕರ್ಣಿ ಅವರಿಂದ ವಚನ ಗಾಯನ ಜರುಗಿತು. ಶಿವಲೀಲಾ ಕುರಡಗಿ, ರಾಜು ಕುರಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

loading...