loading...

ಕನ್ನಡಮ್ಮ ಸುದ್ದಿ-ಇಂಡೋನೇಷಿಯಾ: ಇಲ್ಲಿಯ ಮಲುಕು ಪ್ರಾವಿನ್ಸ್‍ನ ಸಮುದ್ರದ ದಡದಲ್ಲಿ ಬೃಹತ್ ಗಾತ್ರದ ಜೀವಿ ಕಾಣಿಸಿಕೊಂಡಿದೆ. ಈ ಬೃಹದ್ದಾಕಾರದ ಕಡಲ ಪ್ರಾಣಿಯನ್ನು ನೋಡಿದ ಜನ ಅಚ್ಛರಿ ಜೊತೆಗೆ ಭಯಬೀತರಾಗಿದ್ದರು.
15 ಮೀಟರ್‍ಉದ್ದ ಇದ್ದು ಅದು ಸಾವನ್ನಪ್ಪಿದ ತಿಮಿಂಗಲ ಎಂಬುವುದನ್ನು ತಿಳಿದ ಬಳಿಕ ಜನ ನಿರಾಳಗೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಈ ಪ್ರಾಣಿ ಕಾಣಿಸಿಕೊಂಡಿತ್ತು.
ಪ್ರತ್ಯಕ್ಷದರ್ಶಿಗಳ ಪ್ರಕಾರ ಈ ಬೃಹದ್ದಾಕಾರದ ಜೀವಿಯನ್ನು ಮಂಗಳವಾರ ರಾತ್ರಿ ಕಣ್ಣಿಗೆ ಬಿದ್ದಿತ್ತು. ಈ ಜೀವಿಯನ್ನು ನೋಡಿದ ತಕ್ಷಣ ನಮಗೆ ನಂಬಲು ಸಾಧ್ಯವಾಗಲಿಲ್ಲ. ಎಂದೂ ಕಂಡರಿಯದ ಈ ವಿಚಿತ್ರ ಪ್ರಾಣಿ ಸಮುದ್ರದಲ್ಲಿ ಇರಬಹುದೆಂಬ ಶಂಕೆ ಇಲ್ಲಿಯ ಜನರಿಗೆ ಮೂಡುತ್ತಿದೆ.
15 ಮೀಟರ್‍ಗೂ ಹೆಚ್ಚು ಉದ್ದವಿದೆ. ಸಾವನ್ನಪ್ಪಿದ ಬಳಿಕ ಇದು ದಡಕ್ಕೆ ಬಂದು ಸೇರಿದೆ. ಇದು ಯಾವ ಜಾತಿಯ ಪ್ರಾಣಿ ಎಂಬುದು ಮೊದಲಿಗೆ ತಿಳಿಯಲಿಲ್ಲ. ನಂತರ ಅದು ತಿಮಿಂಗಲವೆಂದು ತಿಳಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈಗ ಈ ಜೀವಿಯನ್ನು ತೆರವುಗೊಳಿಸುವಂತೆ ಸ್ಥಳೀಯರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

loading...