ಕನ್ನಡಮ್ಮ ಸುದ್ದಿ-ರಾಮದುರ್ಗಃ ಹೋಬಳಿಮಟ್ಟದಲ್ಲಿ ಸರಕಾರಿ ಭೂಮಿಯನ್ನು ಗುರುತಿಸಿ ಸರಕಾರದಿಂದ ಕೆರೆಗಳನ್ನು ನಿರ್ಮಾಣ ಮಾಡಿ ಅವುಗಳಿಗೆ ನೀರು ತುಂಬಿಸುವ ವ್ಯವಸ್ಥೆ ಮಾಡಿದರೆ ರೈತರಿಗೆ ಸಹಾಯವಾಗುತ್ತದೆ ಎಂದು ಬಿಜೆಪಿ ಮುಖಂಡ ಚಂದ್ರಕಾಂತ ಯತ್ನಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮುದಕವಿ ಗ್ರಾಮದಲ್ಲಿರುವ ಪುರಾತನ ಕಾಲದಲ್ಲಿ ನಿರ್ಮಾಣವಾಗಿರುವ ಕೆರೆಯನ್ನು ವಿಕ್ಷಿಸಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು ಇದಲ್ಲದೇ ಈ ಕೆರೆಯು 10 ರಿಂದ 12 ಎಕರೆ ಜಾಗವನ್ನು ಹೊಂದಿದ್ದು ಇದರಲ್ಲಿ ಹೂಳು ತುಂಬಿಕೊಂಡಿರುತ್ತದೆ, ಇದನ್ನು ಸರಕಾರದಿಂದ ಹೂಳನ್ನು ಎತ್ತಿ ಅದರಲ್ಲಿ ನೀರು ತುಂಬುವ ವ್ಯವಸ್ಥೆ ಮಾಡಬೇಕು. ಮುದಕವಿ, ಇಡಗಲ್ಲ, ಹಲಗತ್ತಿ, ತಿಮ್ಮಾಪೂರ, ಖಾನಾಪೂರ, ಹೊಸಕೇರಿ, ಕರಡಿಗುಡ್ಡ ಹಾಗೂ ಇನ್ನು ಅನೇಕ ಸುತ್ತಮುತ್ತಲಿನ ಗ್ರಾಮಗಳಿಗೆ ಇದು ಒಂದೇ ಕೆರೆ ಕಂಡುಬಂದಿದ್ದು, ಇದರಲ್ಲಿ ಅಲ್ಪ-ಸ್ವಲ್ಪ ನೀರು ಕಂಡು ಬರುತ್ತಿದೆ. ಈ ಕೆರೆಯು ಕುರಿ ಮತ್ತು ದನಕರುಗಳಿಗೆ ನೀರು ಕುಡಿಯಲು ಉಪಯೋಗವಾಗುತ್ತಿದೆ. ಸರಕಾರವು ಈ ಕೆರೆಯ ಕಡೆಗೆ ಗಮನಹರಿಸಿ ನೀರು ತುಂಬಿಸು ವ್ಯವಸ್ಥೆ ಮಾಡಿದರೇ ಸುತ್ತ ಮುತ್ತಲಿನ ರೈತರ ಬೋರವೆಲಗಳ ಅಂತರ್ಜಲ ಹೆಚ್ಚುತ್ತದೆ ಎಂದು ಹೇಳಿದರು.  ಸತತ ನಾಲ್ಕೈದು ವರ್ಷಗಳಿಂದ ಮಳೆ ಇಲ್ಲದೇ ನೀರಿಗಾಗಿ ರೈತರು ಪರದಾಡುವ ಪರಿಸ್ಥಿತಿ ಬಂದೊದಗಿದೆ, ಈ ವರ್ಷವು ಮಳೆ ಬಾರದಿದ್ದರೆ ರೈತರು ಸಾಲಕ್ಕೆ ಸಿಲುಕಿ ಆತ್ಮಹತ್ತೆ ಮಾಡಿಕೊಳ್ಳುವ ಪರಿಸ್ಥಿ ಬರತ್ತದೆ, ಆದ್ದರಿಂದ ಸರಕಾರವು ರೈತರ ಕಡೆಗೆ ಗಮನ ಹರಿಸಬೇಕುಂದು ರೈತರಾದ ವಾಹಿದ ಖಾಜಿ ತಮ್ಮ ಅಳಲನ್ನು ತೊಡಿಕೊಂಡರು.  30 ಆರ್‍ಎಂಡಿ3 : ಪೋಟೋ ಶಿರ್ಷಿಕೆ   ರಾಮದುರ್ಗ : ತಾಲೂಕಿನ ಮುದಕವಿ ಗ್ರಾಮದಲ್ಲಿರುವ ಕೆರೆಯನ್ನು ಬಿಜೆಪಿ ಮುಖಂಡರಾದ ಚಂದ್ರಕಾಂತ ಯತ್ನಟ್ಟಿ ಪರಿಶೀಲಿಸುತ್ತಿರುವದು.
ಶಿಕ್ಷಕರ ಕೊರತೆಯ ಕಾರಣ:ಗ್ರಾಮಸ್ಥರು ಶಾಲೆಗೆ ಮುತ್ತಿಗೆ
ಕನ್ನಡಮ್ಮ ಸುದ್ದಿ-ರಾಮದುರ್ಗ: ಶಿಕ್ಷಕರ ಕೊರತೆಯ ಕಾರಣದಿಂದಾಗಿ ಶೈಕ್ಷಣಿಕ ವರ್ಷದ ಪ್ರಾರಂಭದ ದಿನವೇ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಮುಖ್ಯ ಶಿಕ್ಷಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ತಾಲೂಕಿನ ಕೆ.ಚಂದರಗಿ ವಿ.ಡಿ.ಎಸ್ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಕಠಿಣ ವಿಷಯಗಳಾದ ವಿಜ್ಞಾನ, ಗಣಿತ ಹಾಗೂ ಇಂಗ್ಲೀಷ್ ವಿಷಯದ ಶಿಕ್ಷಕರು ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಈ ಕುರಿತು ಹಲವಾರು ಭಾರಿ ಮನವಿ ಮಾಡಿಕೊಂಡರು ಇಲ್ಲಿಯವರೆಗೂ ಶಿಕ್ಷಕರನ್ನು ನಿಯೋಜನೆ ಮಾಡಿಲ್ಲ. ಮುಖ್ಯ ವಿಷಯಗಳಿಗೆ ಶಿಕ್ಷಕರು ಇರದಿದ್ದರೆ ನಮ್ಮ ಮಕ್ಕಳ ಪಾಡೇನು ಎಂದು ವಿದ್ಯಾರ್ಥಿಗಳ ಪಾಲಕರು ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಶಿಕ್ಷಕರ ಕೊರತೆಯ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಶೀಘ್ರದಲ್ಲಿ ಶಿಕ್ಷಕರನ್ನು ನಿಯೋಜನೆ ಮಾಡುವದಾಗಿ ಭರವಸೆ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಶಿಕ್ಷಕರು ಹಾಜರಾಗಲಿದ್ದಾರೆಂದು ಮುಖ್ಯ ಶಿಕ್ಷಕ ಎಚ್.ಎಲ್.ಅಲಿಖಾನ ಪಾಲಕರಿಗೆ ಮನವರಿಕೆ ಮಾಡಿದರು.
ಆದರೂ ತೃಪ್ತಗೊಳ್ಳದ ಪಾಲಕರು 7 ದಿನಗಳೊಳಗಾಗಿ ಶಿಕ್ಷಕರನ್ನು ನೇಮಿಸದಿದ್ದರೆ ಶಾಲೆಗೆ ಬೀಗ ಹಾಕಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೆ ಮನವಿ ಕೂಡಾ ಸಲ್ಲಿಸಿದರು.
ಗ್ರಾಮದ ಮುಖಂಡರಾದ ಪ್ರಭು ಸವನೂರ, ಮಹಾಂತೇಶ ದ್ಯಾಮಣ್ಣಿ, ಕಲ್ಲಪ್ಪ ಕೋರಕೊಪ್ಪ, ಬಾಳನಗೌಡ ಪಾಟೀಲ, ಭೀಮಶಿ ಅಡಗಿಮನಿ, ಈಶ್ವರ ಮೆಳ್ಳಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಾಕ್ಸ್:
     ಕೆ.ಚಂದರಗಿ ಸರಕಾರಿ ಪ್ರೌಢ ಶಾಲೆಗೆ ಶಿಕ್ಷಕರ ಕೊರತೆ ನೀಗಿಸಲು ತುರ್ತಾಗಿ  ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದೇನೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ವರೆಗೆ ಗಣಿತ ಮತ್ತು ವಿಜ್ಞಾನ ವಿಷಯದ ಇಬ್ಬರು ಶಿಕ್ಷಕರಿಗೆ ನಿಯೋಜನೆಯ ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವರ್ಗಾವಣೆಯಲ್ಲಿ ಪೂರ್ಣ ಕಾಲಿಕ ಶಿಕ್ಷಕರು ಹಾಜರಾಗಲಿದ್ದಾರೆ. ಅದಕ್ಕೆ ಪಾಲಕರು ಸಹ ಸ್ವಲ್ಪ ಸಹರಿಸಬೇಕು.
    ಶ್ರೀ ಆರ್.ಟಿ.ಬಳಿಗಾರ
ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾಮದುರ್ಗ
loading...