ಸಹೋದರನಿಗೆ ಟಾಂಗ್ ಕೊಟ್ಟ ಶಾಸಕ ಸತೀಶ

0
586
loading...

ಕನ್ನಡಮ್ಮ ಸುದ್ದಿ
ಬೆಳಗಾವಿ ;18 ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ಇತಿ ಮಿತಿಯೋಳಗೆ ಇದ್ದರೆ ಸಚಿವ ಸ್ಥಾನಕ್ಕೊಂದು ಗೌರವ. ಅವರು ಬೇರೆಯವರಿಗೆ ಟಿಕೆಟ್ ಇಸಿದುಕೊಂಡುವುದಕ್ಕಿಂತ ಅವರು ಗೋಕಾಕ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯಾಸ ಪಡಬೇಕಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಸಚಿವ ರಮೇಶ ಜಾರಕಿಹೊಳಿ ಅವರಿಗೆ ತಿರಗೇಟು ನೀಡಿದರು.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಾವು ಯಾವುದೇ ಕಾರಣಕ್ಕೂ ಯಮಕನಮರಡಿ ಕ್ಷೇತ್ರವನ್ನು ಬಿಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು ರಾಯಚೂರು ಗ್ರಾಮೀಣ ಒಂದೇ ಕ್ಷೇತ್ರಯಾಕೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬಹುದಲ್ವಾ ಎಂದು ತಿಳಿಸಿದರು.
ಈ ಗೊಂದಲದ ಬಗ್ಗೆ ಸಿಎಂ ಅವರ ಗಮನಕ್ಕೆ ತರಲಾಗಿದೆ. ನಮ್ಮದೆಯಾದ ಸ್ಟೇಟಟ್ಸ್ ಯಮಕನಮರಡಿ ಕ್ಷೇತ್ರದಲ್ಲಿದೆ. ಉಸ್ತುವಾರಿ ಸಚಿವರು ಪದೇ ಪದೇ ಹೇಳಿಕೆ ನೀಡುತ್ತಿರುವುದಕ್ಕೆ ಹೈಕಮಾಂಡ ಉತ್ತರಿಸಬೇಕು ಎಂದರು.
ತಾವು ಹಾಗೂ ಮಾಜಿ ಸಂಸದ ಎಚ್.ವಿಶ್ವನಾಥ ಅವರೊಂದಿಗೆ ಮೈಸೂರಿನಲ್ಲಿ ಭೇಟಿಯಾಗಿರುವುದಕ್ಕೆ ರಾಜಕೀಯ ಕಲ್ಪಿಸಬಾರದು. ಅವರು ಹಿರಿಯರು ಕಳೆದ ೪೦ ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ರಾಜ್ಯ ಪ್ರವಾಸ ಮಾಡುವಂತೆ ಮಾತನಾಡಿದ್ದೇನೆಂದು ಸತೀಶ ಜಾರಕಿಹೊಳಿ ಹೇಳಿದರು.

loading...