ಸಾರಿಗೆ ಇಲಾಖೆಗೆ ಬಗ್ಗದ ಆಟೋ ಚಾಲಕರು !

0
41
loading...

ಕೇವಲ ಹೆಸರಿಗೆ ಮಾತ್ರ ಮೀಟರ ಅಳವಡಿಕೆ | ಯತಾ ಸ್ಥಿತಿಯಲ್ಲಿ ಪ್ರಯಾಣಿಕರ ವಸೂಲಿ
|ಕೆ ಎಮ್ ಪಾಟೀಲ.

ಬೆಳಗಾವಿ: ನಗರದಲ್ಲಿ ಮೀಟರ ಅಳವಡಿಕೆ ಇಲ್ಲದೇ ಆಟೋಗಳು ರಾಜಾರೋಷವಾಗಿ ಓಡಾಡುತ್ತಲೆ ಇವೆ ಇವುಗಳಿಗೆ ಕಡಿವಾಣ ಹಾಕಬೇಕೆಂದು ಸಾರಿಗೆ ಇಲಾಖೆ ಎಷ್ಟೇಲ್ಲ ಪ್ರಯತ್ನ ಮಾಡಿದರು ಆಟೋ ಚಾಲಕರಿಗೆ ಶ್ರೀರಕ್ಷೆಯಾಗಿ ಕೆಲವು ರಾಜಕೀಯ ಕೈಗಳು ಕೆಲಸಮಾಡುತ್ತಿರುವುದರಿಂದ ಇಲಾಖೆಯ ಅಧಿಕಾರಿಗಳ ಕೈ ಕಟ್ಟಿಹಾಕಿದಂತಾಗಿದೆ.
ಜಿಲ್ಲಾ ನ್ಯಾಯಾಧೀಶ ಸತೀಶ ಸಿಂಗ್ ಅವರು ನಗರದಲ್ಲಿ ಮೀಟರ ಅಳವಡಿಕೆ ಇಲ್ಲದೇ ಇರುವ ಆಟೋಗಳಿಗೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಇತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದರು. ಈ ಉದೇಶದಿಂದ ಸಾರಿಗೆ ಇಲಾಖೆಯ ಸಿಬ್ಬಂದಿಗಳು ಆಟೋ ಮೀಟರ ಹೊಂದದೆ ಇರುವಂತ ಆಟೋಗಳನ್ನು ಸೀಸ್‍ಮಾಡುವ ಕಾರ್ಯಾಚರಣೆ ನಡೆಸಿ ಸುಮಾರು 500 ಕ್ಕೂ ಹೆಚ್ಚು ಆಟೋಗಳನ್ನು ಸೀಸ್ ಮಾಡಿದ್ದರು ಇದನ್ನು ಖಂಡಿಸಿ ಕೆಲ ಆಟೋ ಸಂಘದ ಪದಾಧಿಕಾರಿಗಳು ಮತ್ತು ಆಟೋಚಾಲಕರು ಇದರ ವಿರುದ್ಧವಾಗಿ ಪ್ರತಿಭಟನೆ ಮಾಡಿ ತಮ್ಮ ಆಟೋಗಳನ್ನು ಬಿಡುವಂತೆ ರಾಜಕೀಯ ವ್ಯಕ್ತಿಗಳ ಹತ್ತಿರ ಮೊರೆಹೋಗಿ ತಮ್ಮ ಆಟೋಗಳನ್ನು ಬಿಡುಗಡೆಗೊಳಿಸಿಕೊಂಡು. ಪುನಃ ತಮ್ಮ ಇಷ್ಟದಂತೆ ಆಟೋಗಳನ್ನು ಓಡಾಡಿಸುತ್ತಿದ್ದಾರೆ.
ಇಂಥಹ ಬೆಳವಣಿಗೆಯನ್ನು ನೋಡಿದರೆ ನ್ಯಾಯಮೂರ್ತಿಗಳ ಮಾತನ್ನು ಗಾಳಿಗೆ ತೂರಿ ಕೆಲ ರಾಜಕಾರಣಿಗಳು ತಮ್ಮ ಅಧಿಕಾರವನವನ್ನು ದೂರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಎಂದು ಪ್ರಯಾಣಿಕರ ಆರೋಪವಾಗಿದೆ.
ಸಾರಿಗೆ ಇಲಾಖೆಯ ಪ್ರಕಾರ ಇಂಧನ ದರವನ್ನು ತಿಳಿದುಕೊಂಡೆ ಅದರ ಹಾಗೆ ಆಟೋ ಮೀಟರನ್ನು ನಿಗದಿ ಪಡಿಸಲಾಗಿದೆ ಅದರಂತೆ ದರವನ್ನು ಪ್ರಯಾಣಿಕಾರಿಂದ ಪಡೆದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ, ಇಂತವುಗಳನ್ನು ಬಿಟ್ಟು ಪ್ರಯಾಣಿಕರಿಂದ ಅತೀಯಾಗಿ ದುಡ್ಡನ್ನು ತೆಗೆದುಕೊಳ್ಳುತ್ತಿರುವುದರಿಂದ ಪ್ರಯಾಣಿಕರು ದೂರು ನೀಡಿರುವ ಪ್ರಕಾರವಾಗಿ ಮೀಟರ ಅಳವಡಿಕೆ ಮಾಡದೆ ಇರುವಂತ ಆಟೋಗಳ ಮೇಲೆ ಕಟ್ಟನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೆವೆ ಎಂದು ಸಾರಿಗೆ ಇಲಾಖೆಯ ಪೊಲೀಸರು ತಿಳಿಸಿದರು.
ಏಪ್ರೀಲ್ ತಿಂಗಳಲ್ಲಿ 325 ವಾಹನಗಳ ಪರೀಶಿಲನೆ: ನಗರದಲ್ಲಿ ಏಪ್ರೀಲ್ ತಿಂಗಳಲ್ಲಿ ಮೀಟರ ಅಳವಡಿಕೆ ಇಲ್ಲದ ಆಟೋಗಳು, ಅತೀಯಾಗಿ ಪ್ರಯಾಣೀಕರನ್ನು ತುಂಬಿಕೊಂಡು ಹೊಗುವಂತ 325 ವಾಹನಗಳನ್ನು ಪರಿಶೀಲನೆ ನಡೆಸಿ ಅದರಲ್ಲಿ 110 ವಾಹನಗಳಿಗೆ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ. ಆಟೋಗಳು-79 ದಂಡ- 18,200, ಮ್ಯಾಕ್ಸಿಕ್ಯಾಬ್ 10 ದಂಡ 28,100, ಗೂಡ್ಸ ವಾಹನಗಳು-21 ದಂಡ 83,500, ಒಟ್ಟು 2 ಲಕ್ಷ 800 ದಂಡವನ್ನು ವಸೂಲಿಮಾಡಿದ್ದಾರೆ.
ಆಟೋ ಚಾಲಕರು ಹೇಳುವ ಪ್ರಕಾರ: ಆಟೋ ಚಾಲಕರು ಹೇಳುವ ಪ್ರಕಾರ ನಾವು ಆಟೋಗಳನ್ನು ಸಾರಿಗೆ ಇಲಾಖೆಯ ನಿಯಮದಂತೆ ಓಡಿಸುತ್ತಿದ್ದೇವೆ ಆದರೆ, ನಮ್ಮಲ್ಲಿಯ ಕೆಲವು ಆಟೋ ಚಾಲಕರು ಮಾಡುವ ತಪ್ಪಿನಿಂದ ಕಾನೂನು ಪ್ರಕಾರವಾಗಿ ಆಟೋ ಓಡಿಸುವಂತ ಚಾಲಕರಿಗೆ ಸಾರಿಗೆ ಇಲಾಖೆಯ ಸಿಬ್ಬಂದಿಗಳು ಒಂದಿಲ್ಲ ಒಂದು ರೀತಿಯಲ್ಲಿ ತೊಂದರೆಯನ್ನು ನೀಡುತ್ತಿದ್ದಾರೆ. ಆಟೋಗೆ ಸಂಬಂಧಪಟ್ಟಂತೆ ಎಲ್ಲ ದಾಖಾಲಾತಿಗಳು ಇದ್ದರು ಇಲ್ಲದ ಸಲ್ಲದ ದಾಖಲಾತಿಗಳನ್ನು ಕೇಳಿ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಒಟ್ಟಾರೆಯಾಗಿ ಒಂದು ಕಡೆಯಿಂದ ರಾಜಕೀಯ ವ್ಯಕ್ತಿಗಳು ತಮ್ಮ ಮತ ಬ್ಯಾಂಕಿಗಾಗಿ ಆಟೋ ಚಾಲಕರಿಗೆ ಶ್ರೀರಕ್ಷೇ ನೀಡಿ ಪ್ರಯಾಣಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರು ತಮಗೆ ಯಾವುದಾರು ಮಹತ್ವದ ಕೆಲಸ ಇದ್ದಾಗ ಆಟೋ ಚಾಲಕರು ಕೇಳಿದಷ್ಟು ಹಣವನ್ನು ನೀಡಿ ತೆರಳಬೇಕಾದ ಸಂದರ್ಭ ಬಂದಿದೆ.
ಬಾಕ್ಸ್
ಮೀಟರ ಅಳವಡಿಕೆ ಮಾಡದ ಆಟೋಗಳನ್ನು ಪರಿಶೀಲನೆ ಮಾಡಿ ಮೀಟರ ಅಳವಡಿಸದಿದ್ದ ಆಟೋಗಳಿಗೆ ದಂಡ ವಿಧಿಸಲಾಗುತ್ತಿದೆ.
-ಲಕ್ಷ್ಮೀಕಾಂತ ಎಲ್ ನಾಲವಾರ ಆರ್‍ಟಿಒ

loading...