loading...

ಕನ್ನಡಮ್ಮ ಸುದ್ದಿ-ಖಾನಾಪುರ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಗುರುವಾರ ಮಧ್ಯಾಹ್ನ ಅರ್ಧಗಂಟೆಗೂ ಹೆಚ್ಚಿನ ಕಾಲ ಆಲೀಕಲ್ಲುಸಹಿತ ಮಳೆ ಸುರಿಯಿತು. ಗುಡುಗು ಸಹಿತ ಸುರಿದ ಮಳೆ ಬಿಸಿಲಿನ ಝಳದಿಂದ ಬಸವಳಿದಿದ್ದ ಇಳೆಯನ್ನು ತಂಪಾಗಿಸಿತು.
ತಾಲೂಕಿನ ಬಾಳಗುಂದ ಗ್ರಾಮದ ಬಳಿಯ ಗೌಳಿವಾಡಾದಲ್ಲಿ ಗುರುವಾರ ಮಧ್ಯಾಹ್ನ ಆಕಸ್ಮಿಕವಾಗಿ ಸಿಡಿಲು ಬಡಿದ ಪರಿಣಾಮ ಗೌಳಿವಾಡಾ ನಿವಾಸಿ ಸಾಖರೂ ಗುರಖೇ ಅವರಿಗೆ ಸೇರಿದ್ದ ಒಂದು ಆಕಳು, 7 ಕುರಿ ಮತ್ತು 1 ನಾಯಿ ಸ್ಥಳದಲ್ಲೇ ಸಾವನ್ನಪ್ಪಿವೆ. ಎಂದಿನಂತೆ ಗುರುವಾರವೂ ಗ್ರಾಮದ ಸಮೀಪದ ಬಯಲುಪ್ರದೇಶದಲ್ಲಿ ಸಾಖರೂ ತನ್ನ ಜಾನುವಾರುಗಳನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಕುರಿಗಳ ಹಿಂಡಿನಲ್ಲಿದ್ದ 4 ಕುರಿಗಳು ಶಾಶ್ವತ ಅಂಗವಿಕಲತೆಗೀಡಾಗಿವೆ.
ಘಟನಾ ಸ್ಥಳಕ್ಕೆ ತಾ.ಪಂ ಸದಸ್ಯ ಇಮ್ರಾನ್ ತಾಳಿಕೋಟಿ, ಗೋಧೋಳಿ ಗ್ರಾಪಂ ಪಿಡಿಒ ಧರಣೇಂದ್ರಕುಮಾರ, ನಂದಗಡ ಪೊಲೀಸ್ ಠಾಣೆ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದು, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುರುರಾಜ ಮನಗೂಳಿ ಮೃತ ಜಾನುವಾರುಗಳ ಮರಣೋತ್ತರ ಪರೀಕ್ಷೆ ಕೈಗೊಂಡಿದ್ದಾರೆ. ಈ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...