ಸೈನ್ಯದಲ್ಲಿ ನೌಕರಿ ಕೊಡಿಸುವದಾಗಿ ಮೋಸ ಮಾಡಿದ ವ್ಯಕ್ತಿ ಅಂದರ್ 

0
50
ಕನ್ನಡಮ್ಮ ಸುದ್ದಿ-ಬೆಳಗಾವಿ: 
ಸೈನ್ಯಕ್ಕೆ ಸೇರಿಸುವ ಆಸೆ ತೋರಿಸಿ ಹಣ ಪಡೆದುಕೊಂಡು ಸುಮಾರು ಹತ್ತಾರು ಜನರಿಗೆ ಮೋಸ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಶಾನೂಲ ಹತ್ತಿವಾಲೆ (23) ಎಂಬ ವ್ಯಕ್ತಿ ಹಲವು ದಿನಗಳಿಂದ ಸೈನ್ಯಕ್ಕೆ ಸೇರುವ ಯುವಕರಿಗೆ ನೌಕರಿ ಕೂಡಿಸುವದಾಗಿ ಸುಳ್ಳು ಹೇಳಿ ನಕಲಿ ಆರ್ಡರ್ ಪತ್ರವನ್ನು ನೀಡುತ್ತಿದ್ದ, ಇತನ್ನು  ಹೀಗೆ ಸದಾಶಿವ ಕಾಶಪ್ಪಾ ಮಾದರ ಯುವಕನಿಗೆ ಕೊಟ್ಟ ಪತ್ರವನ್ನು ಯುವಕನ್ನು ಸಂಶಯಗೊಂಡು ಬೆಳಗಾವಿಯ ಕ್ಲೀಲಾದಲ್ಲಿರುವ ಮಿಲಿಟರಿ ಆಪೀಸ್ ವಿಚಾರಿಸಲು ಬಂದಾಗ ಆತನನ್ನು ಮಿಲಟರಿ ಅಧಿಕಾರಿಗಳು ಮಾರ್ಕೆಟ್ ಪೊಲೀಸ್ ಹಿಡಿದುಕೊಟ್ಟಿದ್ದಾರೆ.
ಆತನನ್ನು ಪೊಲೀಸ್‍ರು ವಿಚಾರಿಸಿದ್ದಾಗ ಶಾನೂಲ ಹತ್ತಿವಾಲೆ ಹೆಸರು ತಿಳಿಸಿದ್ದಾನೆ. ಆತನನ್ನು ಬಂಧಿಸಿ ಈ ವರೆಗೆ ಎಷ್ಟು ಜನರಿಗೆ ಮೋಸ ಮಾಡಿರುವ ಕುರಿತು ವಿಚಾರಣೆ ಮಾಡುತ್ತಿದ್ದಾರೆ. ಈ ಕುರಿತು ಐಪಿಸಿ 420, 465, 463, 468 ಅಡಿ ಪ್ರಕರಣ ದಾಖಲಾಗಿದೆ.
loading...