ಸ್ನೇಹಿತನ ರಕ್ಷಿಸಲು ಹೋದವನೂ‌ ನೀರುಪಾಲಾದ

0
171
loading...


ಕನ್ನಡಮ್ಮ ಸುದ್ದಿ
ಬೆಳಗಾವಿ:19 ಖಾನಾಪುರ ತಾಲೂಕಿನ ಬಿಡಿ ಗ್ರಾಮದಲ್ಲಿ ಈಜಲು ಹೊದ ಇಬ್ಬರು ಯುವಕರು ನೀರುಪಾಲಾದ ಘಟನೆ‌ ಶುಕ್ರವಾರ ನಡೆದಿದೆ.
ಮೃತ ಯುವಕರನ್ನು ಬೀಡಿ ಗ್ರಾಮದ ನಯಾನಗರದ ರಹವಾಸಿ
ಸಮದ ಅಬ್ದುಲ್ ಕಿತ್ತೂರು (೧೭) ಮತ್ತು
ಕಿತ್ತೂರಿನ ರಹವಾಸಿ ಸಾದೀಕ್ ಅಬ್ದುಲ್ ಸಾಬ ಬೇಪಾರಿ(೨೧) ಎಂದು ಗುರುತಿಸಲಾಗಿದೆ.
ಬೆನ್ನಿಗೆ ಡಬ್ಬಿ ಕಟ್ಟಿಕೊಂಡು ಕೆರೆಯಲ್ಲಿ ಈಜಲು ಹೋದ ಗೆಳೆಯ ಸಮದ್ ಕೆರೆಯ ಮದ್ಯ ಭಾಗದಲ್ಲಿ ಡಬ್ಬಿ ಬಿಚ್ಚಿದರಿಂದ ಸ್ನೇಹಿತ ನೀರು ಪಾಲಾಗುತ್ತಿರುವುದನ್ನು ಕಂಡು ಆತನನ್ನು ರಕ್ಷಿಸಲು ಹೋಗಿದ್ದ ಸಾದೀಕ್ ಕೂಡಾ ನೀರುಪಾಲಾಗಿದ್ದಾನೆ. ಸ್ಥಳದಲ್ಲಿದ್ದ ಗ್ರಾಮಸ್ಥರು‌ ಮೃತ ಶವವನ್ನು ಹೊರ ತೆಗೆದಿದ್ದಾರೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...