ಸ್ಮಾಟ್೯ ಬೆಳಗಾವಿಗೆ ಬಂದಿದೆ 400 ಕೋಟಿ: ಕುರೇರ್

0
327
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: 10ಸ್ಮಾಟ೯ಸಿಟಿ ಯೋಜನೆ ಬೆಳಗಾವಿಯಲ್ಲಿ ಅನುಷ್ಠಾನದ ಹಂತದಲ್ಲಿದ್ದು ಒಟ್ಟಾರೆ ಸಂಗ್ರಹಿಸಿದ ಅಭಿಪ್ರಾಯ ಆದರಿಸಿ ನಗರವನ್ನು ಸ್ಮಾಟ೯ ಸಿಟಿಯನ್ನಾಗಿಸಲಾಗುವುದು ಎಂದು ಪಾಲಿಕೆಯ ಆಯುಕ್ತ, ಸ್ಮಾಟ೯ ಸಿಟಿ ಪ್ರಬಾರ ಸಿಇಒ ಶಶಿಧರ ಕುರೇರ ಇಂದಿಲ್ಲಿ ಹೇಳಿದರು.
ಅವರು ಬುಧವಾರ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಸ್ಮಾಟ೯ ಸಿಟಿ‌ ಯೋಜನೆಯ ಪ್ರಾತ್ಯಕ್ಷಿಕೆಯ ಸಭೆಯಲ್ಲಿ ಮಾತನಾಡಿದರು.
ಸ್ಮಾಟ೯ ಸಿಟಿ ಯೋಜನೆ ಒಂದು ಸಾವಿರ ಕೋಟಿ ಮೊತ್ತದಾಗಿದೆ. ಪ್ರತಿವಷ೯ ಕೇಂದ್ರ ನೂರು ಕೋಟಿ ರಾಜ್ಯ ಸರಕಾರ ನೂರು ಕೋಟಿ ಅನುದಾನ ನೀಡಲಿದೆ. ಬೆಳಗಾವಿ ಈಗಾಗಲೇ ನಾಲ್ಕನೂರು ಕೋಟಿ ಬಿಡುಗಡೆಯಾಗಿದ್ದು ಮುಂದಿನ‌ ಮೂರು‌ವಷ೯ಗಳಲ್ಲಿ ಉಳಿದ ಆರು ನೂರು ಕೋಟಿ ಬರಲಿದೆ ಎಂದರು.
ಬೆಳಗಾವಿ ಪಾಲಿಕೆ ಸಿದ್ದ ಪಡೆಸಿದ ಯೋಜಿತ ಯೋಜನೆಯಿಂದಾಗಿ ನಗರ ಮೊದಲ ಹಂತದಲ್ಲಿಯೇ ದೇಶದ 20 ನಗರಗಳಲ್ಲಿ ಸ್ಮಾಟ೯ ಸಿಟಿಗೆ ಆಯ್ಕೆಗೊಂಡಿದೆ. 1.75 ಲಕ್ಷ ಜನ ವಿವಿಧ ಸಾಮಾಜಿಕ ಜಾಲತಾಣಗಳು, ಲಿಖಿತ ಸೇರಿದಂತೆ ವಿವಿಧ ಅಜಿ೯ಗಳ ಮೂಲಕ ಪಾಲಿಕೆಗೆ ಸಲ್ಲಿಸಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸ್ಪಂಧಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸ್ಮಾಟ೯ ಸಿಟಿ‌ ಯೋಜನೆಗೆ ಸಂಬಂಧಿಸಿ ಅಧಿಕಾರಿಗಳು ವಿಸ್ತೃತ ವಾಗಿ‌ಯೋಜನೆಯ ರೂಪರೇಷೆಯನ್ನು ಬಿಚ್ಚಿಟ್ಟರು. ನಗರ ಸೇವಕರು ಯೋಜನೆ ಕುರಿತ ತಮ್ಮ ಅಭಿಪ್ರಾಯ ಹಾಗೂ ಸಂದೇಹಗಳನ್ನು‌ ಹಂಚಿಕೊಂಡರು.
ಸಭೆಯಲ್ಲಿ ಮೇಯರ್ ಸಂಜೋತ ಬಾಂದೇಕರ, ಉಪಮೇಯರ್ ನಾಗೇಶ ಮಂಡೋಳ್ಕರ, ಸ್ಮಾಟ೯ ಸಿಟಿ ಹಾಗೂ ಪಾಲಿಕೆಯ ಸಿಬ್ಬಂದಿಗಳು ಹಾಜರಿದ್ದರು.

loading...