ಸ್ಮಾಟ೯ ಸಿಟಿ ಕಚೇರಿಯಲ್ಲಿ ದೆಹಲಿ ತಂಡದ ಮೊದಲ ಸಭೆ

0
148
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:4 ಕೇಂದ್ರ ಸರಕಾರದ‌ ಮಹತ್ವಾ ಕಾಂಕ್ಷಿ ಸ್ಮಾಟ೯ ಸಿಟಿ‌ ಯೋಜನೆ ಯ ಕಾಮಗಾರಿಗಳ ಕುರಿತಂತೆ ಗುರುವಾರ ದೆಹಲಿ ತಂಡ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳೊಂದಿಗೆ ಟಿಳಕವಾಡಿ ಸ್ಮಾಟ೯ ಸಿಟಿ ಕಚೇರಿಯಲ್ಲಿ ಮೊದಲ ಸಭೆ ನಡೆಸುತ್ತಿದೆ.
ನಗರದಲ್ಲಾಗಬೇಕಾದ ಮಹತ್ವದ ಕಾಮಗಾರಿಗಳ ಬಗ್ಗೆ ಚಚೆ೯ ನಡೆಯುತ್ತಿದೆ. ಮಹಾನಗರ ಪಾಲಿಕೆ ಆಯುಕ್ತ, ಬೆಳಗಾವಿ ಸ್ಮಾಟ೯ ಸಿಟಿ ಎಂ.ಡಿ. ಶಶಿಧರ ಕುರೇರ ಅಧಿಕಾರ ಸ್ವೀಕರಿಸಿದ ಕೆಲವೆ ದಿನಗಳಲ್ಲಿ ನಗರ ಪ್ರದೇಶದಲ್ಲಿ ವೀಕ್ಷಣೆ ಮಾಡಿ ಕಾಮಗಾರಿ ಪ್ರಾರಂಭಿಸುವ ಯೋಜನೆ ರೂಪಿಸಿಕೊಂಡಿದ್ದರು. ಅದರಂತೆ ದೆಹಲಿ ತಂಡ ಆಗಮಿಸಿ‌ ಸಭೆ‌‌ ನಡೆಸುತ್ತಿದೆ.
ಸಭೆಯಲ್ಲಿ ಸಂಸದ ಸುರೇಶ ಅಂಗಡಿ, ಶಾಸಕ ಸಂಭಾಜಿ ಪಾಟೀಲ, ಮೇಯರ್ ಸಂಜೋತ ಬಾಂದೇಕರ, ಪಾಲಿಕೆಯ ಕಾಯ೯ನಿವಾ೯ಹಕ ಅಭಿಯಂತೆ ಲಕ್ಷ್ಮೀ‌ ನಿಪ್ಪಾಣಿಕರ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...