ಹಿಂದಿನ ಹಗರಣ ಮೆಲಕು ಹಾಕಿದ ಜಿಪಂ ಸಾಮಾನ್ಯ ಸಭೆ

0
53
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:3 ತಾಲೂಕಿನ ಬೈಲಹೊಂಗಲಿನ ಬಿಒ ನಿವೃತ್ತಿಯಾದರೂ ಹಿಂದೆ ಮಾಡಿದ ಹಗರಣ ಮಾಸುವುದಿಲ್ಲ ಎಂದು ಜಿಂ ಸದಸ್ಯ ಶಂಕರ ಮಾಡಲಗಿ‌ ಇಂದಿಲ್ಲಿ ಆರೋಪಿಸಿದರು.
ಅವರು ಬುಧವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತ, ಜಿಲ್ಲೆಯಲ್ಲಿ‌ ಹೆಚ್ಚವರಿ‌ ಶಿಕ್ಷಕರ ವಗಾ೯ವಣೆಯಲ್ಲಿ ಈ‌ ಹಿಂದೆ ಸಾಕಷ್ಟು‌ಹಗರಣ ಮಾಡಿದ್ದಾರೆ. 23 ಅನಧಿಕೃತ ಶಿಕ್ಷಕತ ವಗಾ೯ವಣೆ ಮಾಡಿ ಆದೇಶ ಮಾಡಿರುವುದಕ್ಕೆ ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಪಟ್ಟು ಹಿಡಿದರು.
ಹಗರಣ ಆಗಿದೆ ಎಂದು ಜಿಪಂ ಸಿಇಒ ಸ್ಪಷ್ಟಪಡಿಸಿ, ತನಿಖಾ ತಂಡ ರಚನೆ‌ ಮಾಡಿ ಎಲ್ಲ ವರದಿ ತಂದ ಮೇಲೂ ಅಂಥವರ ಮೇಲೆ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಪಂಚಾಯತಿಯಲ್ಲಿ‌ ಮಾಡಿದ ಗಂಭೀರ ವಿಷಯಗಳ ಕುರಿತು ಬೆಳಕು ಚೆಲ್ಲಿದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡೆಸಿದರು.
ಜಿಪಂ ಸಿಇಒ ರಾಮಚಂದ್ರನ್ ಮಾತನಾಡಿ, ಬರುವ ಹದಿನೈದು ದಿನದಲ್ಲಿ ಸಂಪೂಣ೯ ವರದಿ ತಂದ ನಂತರ ಡಿಡಿಪಿಐ ಕ್ರ‌ಮ ಕೈಗೊಳ್ಳುವ‌ತೆ ಸೂಚಿಸಿದರು.
ಡಿಎಸ್2 ಎಸ್.ಬಿ. ಮಳ್ಳಳಿ ಮಾತನಾಡಿ, ಬೈಲಹೊಂಗಲ ತಾಲೂಕಿನಲ್ಲಿ ನಡೆದ ಶೂ ಹಗರಣದಲ್ಲಿ ಸಂಬಂಧಪಟ್ಟ ಡಿಡಿಪಿಐ ಹಾಗೂ ಬಿಓ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ನಿವೃತ್ತ ಡಿಡಿಪಿಐ ಅವರನ್ನು ಮಂಗಳವಾರದ ವರೆಗೂ ತನಿಖೆ ನಡೆದಿದೆ. ವರದಿ ಬಂದ ನಂತರ ಜಿಪಂ ಸಿಇಒ ಒಪ್ಪಿಸಿದ ನಂತರ ಅವರು ಕ್ರಮಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಪಂ‌ ಅಧ್ಯಕ್ಷೆ ಆಶಾ ಐಹೋಳೆ, ಉಪಾಧ್ಯಕ್ಷ ಅಣು ಕಟಾಂಬಳೆ ಹಾಜರಿದ್ದರು.
ಬಾಕ್ಸ್
ಜಿಲ್ಲೆಯರುವ ರೈತರಿಗೆ ಕಿಸಾನ್ ಕಾಡ೯ ಸಿಕ್ಕಿಲ್ಲ. ಇದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಅಧಿಕಾರಿಗಳು‌ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಪಂ ಅಧ್ಯಕ್ಷರು ಮಾತ್ರ ಅವರ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜಿಪಂ ಸದಸ್ಯರು ಆರೋಪಿಸಿದರು.

loading...