ಹೂಗಾರ ಸಮಾಜದ ಮುಖ್ಯ ವಾಹಿನಿಗೆ ಅಗತ್ಯ ಹೋರಾಟ

0
62
loading...

ಕನ್ನಡಮ್ಮ ಸುದ್ದಿ-ಹಾರೂಗೇರಿ : ಗುರವ ಹೂಗಾರ ಜೀರ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು ಹಾಗೂ ಅಲ್ಪಸಂಖ್ಯಾತ ಪ್ರವರ್ಗಕ್ಕೆ ಸೇರಿಸಲು ಹೋರಾಟ ಚುರುಕುಗೊಳಿಸುವ ಅಗತ್ಯವಿದೆ ಎಂದು ಅಖಿಲ ಕರ್ನಾಟಕ ಹೂಗಾರ ಮಹಾಸಬಾ ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾದ ಸಂಜಯ ಗುರವ ಅವರು ಹೇಳಿದರು.
ಹಾರೂಗೇರಿಯ ಹನುಮಾನ ಮಂದಿರದಲ್ಲಿ ಮಾತನಾಡಿದ ಅವರು ಗುರವ ಹೂಗಾರ ಜೀರ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅತೀ ಹಿಂದುಳಿದಿದೆ. ಯಾವುದೇ ರಂಗದಲ್ಲೂ ಮುಂದುವರೆಯದೇ ಇರುವುದು ವಿಪರ್ಯಾಸ ಸಂಗತಿಯಾಗಿದೆ, ನಮ್ಮ ಸಮಾಜದ ಜನರು ಕೇವಲ ಅರ್ಚಕ ವೃತ್ತಿ, ಹೂಗಾರಿಕೆ ಹಾಗೂ ಮಂಗಳವಾದ್ಯವನ್ನು ನುಡಿಸಿ ಜೀವನ ಸಾಗಿಸುತ್ತಿದ್ದಾರೆ.
ರಾಜ್ಯದಲ್ಲಿ ನಮ್ಮ ಸಮಾಜದ ಜನರು ಪ್ರತಿ ಗ್ರಾಮಗಳಲ್ಲಿ ಕೇವಲ ಬೆರೆಳೆನಿಕೆಯಷ್ಟು ಮನೆಗಳಿವೆ. ನಮ್ಮ ಸಮಾಜದ ಜನರಿಗೆ ಸರ್ಕಾರವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಲು ಅಲ್ಪಸಂಖ್ಯಾತರೆಂದು ಘೋಷಿಸಬೇಕು. ಹಾಗೂ ಸರ್ಕಾರದ ಸೌಲತ್ತುಗಳನ್ನು ನೀಡಬೇಕು. ನಮ್ಮ ಸಮಾಜವು ಏಳ್ಗೆ ಹೊಂದಬೇಕಾದರೆ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಂದುವರೆದಾಗ ಮಾತ್ರಸಾಧ್ಯ. ಆದಕಾರಣ ನಮ್ಮ ಗುರವ ಹೂಗಾರ ಜೀರ ಸಮಾಜಕ್ಕೆ ಸರ್ಕಾರವು 2018ರ ಚುನಾವಣೆಯಲ್ಲಿ ಹೆಚ್ಚಿನ ಆಧ್ಯತೆಗಾಗಿ ಗುರವ ಹೂಗಾರ ಜೀರ ಸಮಾಜದ ಎಲ್ಲ ಜಿಲ್ಲೆಗಳ ಮತ್ತು ತಾಲೂಕುಗಳ ಮುಖಂಡರು ಸಂಘಟಿತ ಹೋರಾಟ ಮಾಡುವ ಮೂಲಕ ನಮ್ಮ ಹಕ್ಕು ಪಡೆದುಕೊಳ್ಳಲು ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿದೆ ಎಂದು ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾದ ಸಂಜಯ ಗುರವ ಕರೆ ನೀಡಿದರು.

loading...