ಹೆಬ್ಬಾಳ ಬ್ಯಾಂಕ್ ಕಳ್ಳತನ ಪ್ರಕಣದ ಆರೋಪಿಗಳ ಚಿತ್ರ ಪತ್ತೆ

0
293
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಬರುವ ಹೆಬ್ಬಾಳ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಗುರುತಿಸಿರುವ ಪೊಲೀಸ್ ಇವರ ಬಗ್ಗೆ ಗುರುತು ಸಿಕ್ಕ ಕೂಡಲೇ ಪೊಲೀಸ್ ಠಾಣೆಗೆ ತಿಳಿಸುವಂತೆ ತಿಳಿಸಿದ್ದಾರೆ.
ಇತ್ತೀಚೆಗೆ ಬ್ಯಾಂಕಿನ ಕಟ್ಟಡದ ಕಿಡಕಿಯನ್ನು ಕಳ್ಳರು ಮುರಿದು ಬ್ಯಾಂಕಿನ ಲಾಕರನ್ನು ಗ್ಯಾಸ್ ಕಟರದಿಂದ ಕಟ್ ಮಾಡಿ ತೆಗೆದು ಅದರಲ್ಲಿದ್ದ ಒಂದು ಕ್ಯಾಶ್ ಡ್ರಾ, 2-ಸಿಕ್ಕಾಗಳು, ಹಾಗೂ ಬ್ಯಾಂಕಿನಲ್ಲಿ ಅಡವು ಇಟ್ಟ ಬಂಗಾರದ ಆಭರಣಗಳು ಮತ್ತು ನಗದು ಸೇರಿ ಒಟ್ಟು 1,75,90,815 ರೂ. ಕಳ್ಳತನ ಮಾಡಿದ್ದಾರೆ.
ಪೊಲೀಸ್ ತ್ರೀವ ತನಿಖೆ ನಡೆಸಿ ಆರೋಪಿಗಳ ಚಿತ್ರವನ್ನು ಗುರುತಿಸಿದ್ದಾರೆ. ಸಂಕೇಶ್ವರ ಪೊಲೀಸ ಠಾಣೆಗೆ ಆ ವ್ಯಕ್ತಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಅಥವಾ ಮಾಹಿತಿ ಇದ್ದಲ್ಲಿ ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ. ಸಂಕೇಶ್ವರ ಪೊಲೀಸ ಠಾಣೆ 08333-273303, ಪಿ.ಎಸ್.ಐ ಸಂಕೇಶ್ವರ 9480804072, ಸಿ.ಪಿ.ಐ ಹುಕ್ಕೇರಿ 9480804036, ಡಿ.ಎಸ್.ಪಿ ಗೋಕಾಕ 9480804023, ಬೆಳಗಾವಿ ಜಿಲ್ಲಾ ಕಂಟ್ರೋಲ ರೂಮ್ 0831-2405231 ತಿಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...