ಹೊಸ ವಾಹನಕ್ಕಾಗಿ ಬೇಡಿಕೆಯಿಟ್ಟ ಜಿಪಂ ಅಧ್ಯಕ್ಷರು

0
127
loading...

ಜನರಿಗೆ ಕುಡಿಯುವ ನೀರಿನ ಚಿಂತೆಯಾದರೆ-ಅಧ್ಯಕ್ಷರಿಗೆ ಹೊಸ ವಾಹನದ ಚಿಂತೆ

> ಭರಮಗೌಡಾ ಪಾಟೀಲ
ಬೆಳಗಾವಿ : ಕಳೆದ ಎರಡು, ಮೂರು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿರುವ ಗ್ರಾಮೀಣ ಜನರಿಗೆ ಕುಡಿಯುವ ಚಿಂತೆಯಾದರೆ. ರಾಜ್ಯದ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿಯ ಜಿಲ್ಲಾ ಪಂಚಾಯತ ಅಧ್ಯಕ್ಷರಿಗೆ ಹೊಸ ವಾಹನದ ಚಿಂತೆಯಾಗಿದೆ.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯತಿಯಲ್ಲಿ ಅನುದಾನವಿಲ್ಲ ಎಂದು ಹೇಳುವ ಜನಪ್ರತಿನಿಧಿಗಳಿಗೆ. ಅದೇ ಜಿಲ್ಲಾ ಪಂಚಾಯತ ಅನುದಾನದಲ್ಲಿ ಹೊಸ ವಾಹನಕ್ಕಾಗಿ ಬೇಡಿಕೆಯಿಟ್ಟಿರುವ ಘಟನೆ ಕಳೆದ ಅನೇಕ ದಿನಗಳಿಂದ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆಶಾ ಐಹೊಳೆ ಅವರು 11-5-2016 ರಂದು ಜಿಪಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಕಳೆದ ಗುರುವಾರಕ್ಕೆ ಒಂದು ವರ್ಷ ಗತಿಸಿದೆ. ಜಿಪಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅವರಿಗೆ ಜಿಪಂನಿಂದ ಒಂದು ಸರಕಾರಿ ವಾಹನವನ್ನು ನೀಡಲಾಗಿದೆ. ಆ ವಾಹನ ಹಳೆಯದಾಗಿದೆ ಪ್ರವಾಸಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹೊಸ ವಾಹನವನ್ನು ನೀಡಬೇಕು ಎಂದು ಜಿಪಂ ಅಧ್ಯಕ್ಷರು ಜಿಲ್ಲಾ ಪಂಚಾಯತಿಗೆ ಬೇಡಿಕೆಯಿಟ್ಟಿದ್ದಾರೆ.
ಅವರು ಜಿಪಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಕಳೆದ ವರ್ಷ ಜಿಲ್ಲೆಯಲ್ಲಿ ಭೀಕರ ಬರಗಾಲದ ಛಾಯೇ ಆವರಿಸಿತ್ತು. ಅವರು ಹೊಸ ವಾಹನಕ್ಕಾಗಿ ಜಿಪಂ ಬೇಡಿಕೆಯಿಟ್ಟ ಈ ಸಮಯದಲ್ಲಿಯೂ ಜಿಲ್ಲೆಯಲ್ಲಿ ಭೀಕರ ಬರಗಾಲದ ಛಾಯೇ ಆವರಿಸಿ ಗ್ರಾಮೀಣ ಭಾಗದಲ್ಲಿ ಜನರು ಕುಡಿಯುವ ನೀರಿಗೆ ತೊಂದರೆ ಪಡುತ್ತಿದ್ದರೆ. ಈಪಂ ಅಧ್ಯಕ್ಷರು ತಮ್ಮಗೆ ಹೊಸ ವಾಹನ ಬೇಕು ಎಂದು ಬೇಡಿಕೆಯಿಟ್ಟಿರುವುದು ಎಷ್ಟು ಸರಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಸದ್ಯ ಗ್ರಾಮೀಣ ಜನ,ಜಾನುವಾರುಗಳು ಬರಗಾಲದಿಂದ ತತ್ತರಿಸಿ ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿರುವ ಈ ಸಂದರ್ಭದಲ್ಲಿ ತಮ್ಮಗೆ ಸದ್ಯಕ್ಕೆ ಹೊಸ ವಾಹನದ ಅವಶ್ಯಕತೆವಿಲ್ಲ. ಅದೇ ಅನುದಾನವನ್ನು ಕುಡಿಯುವ ನೀರಿಗೆ ಅಥವಾ ಜಾನುವಾರುಗಳ ಮೇವಿಗೆ ಅಥವಾ ಇನ್ನುಳಿದ ಯಾವುದೇ ಸಮಸ್ಯೆಗೆ ಬಳಿಸಿಕೊಳ್ಳಿ ಮುಂದೆ ಬರುವ ಅನುದಾನದಲ್ಲಿ ಹೊಸ ವಾಹನ ಖರೀದಿಸಿರೆ ನಡೆಯುತ್ತದೆ ಎಂದು ಹೇಳಿ ಹೊಸ ವಾಹನಕ್ಕಾಗಿ ಬೇಡಿಕೆ ಇಡುವ ಬದಲು ಬರಗಾಲದಿಂದ ತತ್ತರಿಸಿರುವ ಸಾರ್ವಜನಿಕ ಸಮಸ್ಯೆಗಳಿಗೆ ಬಳಕೊಳ್ಳಲು ನೀಡಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
======ಬಾಕ್ಸ=======
ಶುಕ್ರವಾರ ಜಿಪಂನ ಸಭಾ ಭವನದಲ್ಲಿ ಜಿಲ್ಲೆಯ ವಿವಿಧ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜರುಗಿದ
ಕೆಡಿಪಿ ಸಭೆಯಲ್ಲಿ ಕಳೆದ ಅನೇಕ ದಿನಗಳಿಂದ ಹೊಸ ವಾಹನ ನೀಡಬೇಕು ಎಂದು ಜಿಪಂ ಅಧಿಕಾರಿಗಳಿಗೆ ಹೇಳಿದರು ಅನುದಾನವಿಲ್ಲ ಎಂದು ಹೇಳುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ಮೇ 30 ರೊಳಗೆ ತಮ್ಮಗೆ ಹೊಸ ವಾಹನ ನೀಡದಿದ್ದರೆ ತಾವು ಸ್ವಂತ ಖರ್ಚಿನಿಂದ ಆಟೋದಲ್ಲಿ ಜಿಪಂ ಕಚೇರಿಗೆ ಬರುವ ಎಚ್ಚರಿಕೆಯನ್ನು ಜಿಪಂ ಅಧಿಕಾರಿಗಳಿಗೆ ನೀಡಿರುವುದು ಜಿಲ್ಲಾ ಮಟ್ಟದ ಅಧಿಕಾರಿಗಳಲ್ಲಿ ಚರ್ಚೆಗೆ ಗ್ರಾಸವಾಯಿತು.
======ಬಾಕ್ಸ========
ಜಿಪಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷವಾಗಿದೆ. ಹಳೆಯ ವಾಹನ ನೀಡಿರುವುದು ರಾತ್ರಿ ಪ್ರವಾಸ ಸಮಸ್ಯೆಯಾಗುತ್ತಿದೆ. ಗಡಿಭಾಗವಾಗಿದ್ದರಿಂದ ನಿರಂತರ ಪ್ರವಾಸಕ್ಕೆ ತೊಂದರೆಯಾಗುತ್ತಿದೆ. ಯಾವುದೇ ಸಮಸ್ಯೆ ಅಥವಾ ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ತೆರಳಲು ಅನಾನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ ಹಳೆಯ ವಾಹನ ಬದಲಾವಣೆ ಮಾಡಿ ಹೊಸ ವಾಹನ ನೀಡುವುದಕ್ಕೆ ಹೇಳಿದ್ದೆನೆ. ಅಧಿಕಾರಿಗಳ ಮೇಲೆ ವಿಶ್ವಾಸವಿಡುವುದು ಕಷ್ಟ. ಮೇ 30 ರೊಳಗೆ ಅಥವಾ ಜೂನ ಮೊದಲವಾರ ಹೊಸ ವಾಹನ ನೀಡುವುದಾಗಿ ಜಿಪಂ ಸಿಇಓ ಅವರು ತಿಳಿಸಿದ್ದಾರೆ.
ಆಶಾ ಐಹೊಳೆ
ಜಿಲ್ಲಾ ಪಂಚಾಯತ ಅಧ್ಯಕ್ಷರು
========ಬಾಕ್ಸ========
ಅಧ್ಯಕ್ಷರು ಹೊಸ ವಾಹನ ನೀಡುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಕಳೆದ ವರ್ಷ ಸರಕಾರದಿಂದ ಅನುದಾನ ಬಂದಿರಲಿಲ್ಲ. ಈ ವರ್ಷ ಅನುದಾನ ಬಂದಿದೆ. ಕ್ರೀಯಾಯೋಜನೆ ಸಿದ್ದ ಪಡಿಸಿ ಟೆಂಡರ್ ಕರೆಯಲಾಗಿದೆ. ಟೆಂಡರ ಪ್ರಕ್ರೀಯೆ 30 ದಿನಗಳದಾಗಿರುತ್ತದೆ. ಟೆಂಡರ ಪ್ರಕ್ರೀಯೆ ಮುಗಿದ ನಂತರ ಹೊಸ ವಾಹನ ಬರುತ್ತದೆ ವಿತರಿಸಲಾಗುವುದು.
ರಾಮಚಂದ್ರನ್. ಆರ್.
ಸಿಇಓ ಜಿಪಂ ಬೆಳಗಾವಿ

loading...