16.ರಿಂದ ಹಾರ್ಡಬಾಲ್ ಟೆನಿಸ್ ಕ್ರಿಕೆಟ್

0
19
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ನ್ಯಾಶನಲ್ ಟ್ರಾವೆಲ್ಸ ಟಿ 10 ಕಪ್-2017 ಮುಕ್ತ ಹಾರ್ಡ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ಮೇ 16ರಿಂದ 21 ರವರೆಗೆ ನಗರದ ನೆಹರೂ ಸ್ಟೇಡಿಯಂನಲ್ಲಿ ನಡೆಯಲಿದೆ. ಎಂದು ಎಫ್ ಕೆ ನೌಶಾದ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಟಿ-10 ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ವಿನ್ನರ್ ತಂಡಕ್ಕೆ 1.11.111 ರೂ. ಮತ್ತು ಟ್ರಾಫಿ,ರನ್ನರ್ಸ ಅಪ್ ತಂಡಕ್ಕೆ 55.555.00ರೂ ಮತ್ತು ಟ್ರೋಫಿ ಮ್ಯಾನ್ ಆಫ ದಿ ಸೀರೀಜಗೆ ನಗದು ಬಹುಮಾನ ಮತ್ತು ಟ್ರೊಫಿ,ಪ್ರತಿ ಮ್ಯಾನ್ ಆಫ್ ದಿ ಮ್ಯಾಚಗೆ ದುಡ್ಡು ಮತ್ತು ಟ್ರೋಫಿ, ಬೆಸ್ಟ ಬೌಲರ್‍ಗೆ ದುಡ್ಡು ಮತ್ತು ತ್ರೋಫಿ ಬೆಸ್ಟ ಬ್ಯಾಟ್ಸ ಮನ್‍ಗೆ ದುಡ್ಡು ಮತ್ತು ಟ್ರೋಫಿ ನೀಡಲಾಗುವುದು ಎಂದು ಹೇಳಿದರು. ಪೋಲೀಸ್ ಆಯುಕ್ತ ಪಾಂಡುರಂಗ ರಾಣೆ ಉದ್ಘಾಟಿಸಲಿದ್ದು ಫೈನಲ್ ಪಂದ್ಯಕ್ಕೆ ಸಾಸಕ ಜಮೀರ್ ಅಹಮದ್ ಆಗಮಿಸಲಿದ್ದಾರೆ. ಮೊದಲನೆ ಪಂದ್ಯ ಪೋಲಿಸ್ ತಂಡ ಮತ್ತು ಮಾದ್ಯಮಗಳ ತಂಡದಿಂದ ನಡೆಯಲಿದೆ. ಪ್ರತಿದಿನ ನಾಲ್ಕು ತಂಡಗಳು ಆಡಲಿವೆ. ಇದೀಗ ವಿಜಯಪುರ, ಬಸವನಬಾಗೇವಾಡಿ, ಗೋವಾ, ಕೊಲ್ಲಾಪುರ,ಸತಾರಾ,ಬೆಳಗಾವಿ, ನಾಸಿಕ, ಧಾರವಾಡ, ಹುಬ್ಬಳ್ಳಿ, ಬಳ್ಳಾರಿ, ರಾಣೆಬೆನ್ನೂರು, ಹಾವೇರಿ, ಹರಿಹರ ತಂಡಗಳು ಹೆಸರು ನೊಂದಾಯಿಸಿದ್ದು, ನೊಂದಾಯಿಸಲು ಮೇ 11 ಕೊನೆಯ ದಿನವಾಗಿದೆ. ಮಾಹಿತಿಗಾಗಿ ಅಲಿ 9742088264, ತೌಫೀಕ9986141144 ಇವರನ್ನು ಸಂಪರ್ಕಿಸಲು ತಿಳಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ಅಬ್ದುಲ್ ರಶೀದ್,ರಿಯಾಜ್ ಖಾಲೆಖಾನ,ರಶೀದ್ ಶೇಖ್, ಇರ್ಶಾದ್ ಕುಸುಗಲ್ ಮುಂತಾದವರು ಇದ್ದರು.

loading...