2019ರ ಚುನಾಚಣೆಯಲ್ಲಿ ಬಿಜೆಪಿ ಬಾರದಂತೆ ನೋಡಿಕೊಳ್ಳಬೇಕು

0
38
loading...

ದೇಶ ಬಚಾವೋ, ಸಂವಿಧಾನ ಬಚಾವೋದ ಸಮಾವೇಶದಲ್ಲಿ ಪ್ರಕಾಶ ವೈ ಅಂಬೇಡ್ಕರ ಅಭಿಮತ
ಕನ್ನಡಮ್ಮ ಸುದ್ದಿ ಬೆಳಗಾವಿ: 2019 ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಾರದಂತೆ ನೋಡಿಕೊಳ್ಳ ಬೇಕು ಇಲ್ಲದಿದ್ದರೆ ಸಂವಿಧಾನವನ್ನು ಉಳಿಸಲು ಸಾಧ್ಯವಿಲ್ಲ ಹಾಗಾಗಿ ದಲಿತರು ಇದಿನಿಂದ ಸಂವಿಧಾನದ ಉಳುವಿಗೆ ಹೋರಾಡಬೇಕು ಎಂದು ಡಾ. ಅಂಬೇಡ್ಕರ ಮೊಮ್ಮಗ ಪ್ರಕಾಶ ವೈ ಅಂಬೇಡ್ಕರ ಹೇಳಿದರು.
ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ-ಕರ್ನಾಟಕ ರಾಜ್ಯ ಸಮಿತಿ ಇವರ ಆಶ್ರಯದಲ್ಲಿ ದೇಶ ಬಚಾವೋ ಸಂವಿಧಾನ ಬಚಾವೋದ ವಿಭಾಗ ಮಟ್ಟದ 2ನೇಯ, ಬೃಹತ್ ಜನಜಾಗೃತಿ ಸಮಾವೇಶ-ಬೆಳಗಾವಿ ಚಲೋ ಕಾರ್ಯಕ್ರಮ ಮಂಗಳವಾರ ನಗರದ ಗಾಂಧಿಭವನದಲ್ಲಿ ಬೃಹತ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು.
ಬಿಜೆಪಿ ಪಕ್ಷವನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಕೆಳವರ್ಗದವರಿಗೆ ಯಾವುದೇ ರೀತಿಯಾಗಿ ಸೌಲಭ್ಯಗಳು ಸಿಗದೆ ಮಿಸಲಾತಿ ವಂಚಿತರಾಗುತ್ತಾರೆ. ಅಲ್ಲದೇ ರಾಷ್ಟ್ರದಲ್ಲಿ ಆರ್‍ಎಸ್‍ಎಸ್ ಆಳ್ವಿಕೆ ತಾಂಡವ ವಾಡುತ್ತಿದೆ. ರಾಷ್ಟ್ರದಲ್ಲಿ ಕಾಂಗ್ರೆಸ ಪಕ್ಷವಿದ್ದಾಗ 60 ಸಾವಿರ ಕೋಟಿ ವೆಚ್ಚದಲ್ಲಿ ಬಡತನ ರೇಖೆಯಲ್ಲಿರುವ ವರ್ಗಗಳಿಗೆ ಉದ್ಯೋಗವನ್ನು ನೀಡಲು ನರೆಗಾದಡಿ ಹಣವನ್ನು ಬಿಡುಗಡೆ ಗೊಳಿಸಿದ್ದರು ಆದರೆ, ಮೋದಿ ಸರ್ಕಾರ ಅದನ್ನು ಅರ್ದಕ್ಕೆ ಇಳಿಸಿ, ಅರದಲ್ಲಿಯು ಕೇವಲ 25 ಸಾವಿರ ಅನುದಾನ ಮಾತ್ರ ನೀಡಿದ್ದಾರೆ. ಇದರಿಂದ ಮೋದಿ ಅವರಿಗೆ ಬಡವರ ಮೇಲೆ ಇರುವ ಕಾಳಜಿ ಎಷ್ಟು ಎಂದು ತಿಳಿಯುತ್ತದೆ.
ದೇಶದಲ್ಲಿ ಹಲವಾರು ಸಂತರು ದೇಶವನ್ನು ಆಳಿಹೋಗಿದ್ದಾರೆ. ಆದರೆ, ಪ್ರದಾನಿ ಮೋದಿ ಅವರು ದೇಶದ ಸಂವಿಧಾನದಲ್ಲಿರುವ ಸೌಲಭ್ಯಗಳನ್ನು ನೀಡದೇ ರಾಷ್ಟ್ರದಲ್ಲಿ ಆಳ್ವಿಕೆ ಮಾಡಲು ಹೊರಟಿರುವ ಪ್ರಧಾನಿ ತಾನೊಬ್ಬ ಒಬಿಸಿ ಕುಟುಂಬಕ್ಕೆ ಸೇರಿದರವರು ಎಂದು ಭಾಷನದಲ್ಲಿ ಮಾತನಾಡುತ್ತಾರೆ ಹೊರತು ಒಬಿಸಿ, ಎಸ್ಸಿ, ಎಸ್ಟಿ ವರ್ಗದ ಜನಕ್ಕೆ ಯಾವುದೇ ಸೌಲಭ್ಯಗಳನ್ನು ನೀಡದೇ ಮಾತನಾಡುತ್ತಿದ್ದಾರೆ. ಯಾವಾಗ ಅವರು ಸೌಲಭ್ಯಗಳನ್ನು ನೀಡುತ್ತಾರೆ ಅವಾಗ ಅವರನ್ನು ಒಬಿಸಿ ವ್ಯಕ್ತಿ ಎಂದು ಕರೆಯಲಾಗುತ್ತದೆ.
ರಾಷ್ಟ್ರದ ಲಕ್ಷನೂಗಟ್ಟಲೆ ದಲಿತರು ಸೇರಿ ಸಂವಿಧಾನದ ಉಳುವಿಗೆ ಹೋರಾಡದಿದ್ದರೆ ಮುಂದೊಂದು ದಿನ ಸಂವಿಧಾನವೇ ನೋಡಲು ಸಿಗುವುದಿಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ಕೆಲ ದಲಿತ ಸಂಘಟನೆಗಳು ದಲಿತರ ಧ್ವನಿಯಾಗಿರದೆ ಕೇವಲ ತಮ್ಮ ತಮ್ಮ ಹಿತಾಶಕ್ತಿಗೋಸ್ಕರ ಸಂಘಟನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಬುದ್ದ ಬಸವರ ಹೆಸರುಗಳನ್ನು ಬಳಸಿಕೊಂಡು ರಾಜಕೀಯ ಕ್ಷೇತ್ರವನ್ನು ಹಾಳು ಮಾಡುತಿದ್ದಾರೆ. ಹೊರತು ದಲಿತರಿಗೆ ಯಾವುದೇ ರೀತಿಯಾಗಿ ಸಹಾಯವಾಗುತ್ತಿಲ್ಲ. ಹಾಗಾಗಿ ಇಂತಹಗಳನ್ನು ಮೆಟ್ಟಿನಿಂತು ದಲಿತರು ತಮ್ಮ ಸೌಲಭ್ಯಗೋಸ್ಕರ ಹೋರಾಡಬೇಕು ಅಂದಾಗ ಸಂವಿಧಾನದಲ್ಲಿರು ಆಶೆಯಕ್ಕೆ ಬೆಲೆ ಬಂದಂತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ದಲಿತರು ಒಗ್ಗೂಡಬೇಕು ಅಂದಾಗ ಸಂವಿಧಾನವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ದಲಿತ ಸಂಘರ್ಷ ಸಮಿತಿ ರಾಜ್ಯಧ್ಯಕ್ಷ ಆರ್. ಮೋಹನ್‍ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, 40 ವರ್ಷಗಳಿಂದ ನಿರಂತರವಾಗಿ ಕೆಲವು ಕೈಗಳು ಬಾಬಾಸಾಹೇಬರ ಬರೆದಿರುವ ಸಂವಿಧಾನವನ್ನು ತೆಗೆಯುವಂತ ಕೆಲಸ ಮಾಡುತ್ತಿವೆ. ಆದರೆ, ದೇಶ ಉಳಿಯಬೇಕೆಂದರೆ ಸಂವಿಧಾನವು ಉಳಿಯಬೇಕು. ಆರ್ಥಿಕವಾಗಿ ಸಮಾನತೆ ಹೊಂದಲು ಸಂವಿಧಾನ ಅವಶ್ಯಕವಾಗಿದೆ. ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ದಲಿತ ಮುಖಂಡರು ಪಣ ತೊಡಬೇಕು ಎಂದರು.
ಈ ಸಂದರ್ಭದಲ್ಲಿ ವಿಪ ಸದಸ್ಯ ವಿವೇಕರಾವ್ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ, ಪ್ರೋ. ಮೈತ್ರಿ, ಜಯಶ್ರೀ ಮಾಳಗಿ, ಸೇರಿದಂತೆ ದಲಿತ ಮುಖಂಡರು ಇದ್ದರು.

loading...