60.ವರ್ಷ ಅಧಿಕಾರ ನಡೆಸಿದ ಕಾಂಗ್ರೇಸ್ ಅಲ್ಪಸಂಖ್ಯಾತರಿಗೆ ಕೊಟ್ಟಿದ್ದೇನು?

0
43
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ಬಿಜೆಪಿ ಪಕ್ಷವನ್ನು ಟೀಕೆ ಮಾಡುವದರಲ್ಲಿ ಕಾಲ ಹರಣ ಮಾಡುತ್ತಿರುವ ಕಾಂಗ್ರೇಸ್ ಪಕ್ಷ ಅರವತ್ತು ವರ್ಷ ಆಡಳಿತ ನಡೆಸಿದರು ಅಲ್ಪ ಸಂಖ್ಯಾತರಿಗೆ ಯಾವುದೆ ಪ್ರಯೋಜನವಾಗಿಲ್ಲ ಎಂದು ಬಿಜೆಪಿ ಅಲ್ಪ ಸಂಖ್ಯಾತರ ರಾಜ್ಯ ಉಪಾಧ್ಯಕ್ಷ ಸಯ್ಯದ್ ಅಲಿ ಹೇಳಿದರು.
ಪಟ್ಟಣದ ಶಾದಿಮಹಲ್‍ನಲ್ಲಿ ಅಲ್ಪ ಸಂಖ್ಯಾತರ ಕಾರ್ಯಕಾರಣಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ ಬಿಜೆಪಿ ಕೋಮವಾದಿ ಪಕ್ಷವಲ್ಲ ಇದು ವಿರೋಧ ಪಕ್ಷದವರು ಮತಬ್ಯಾಂಕ್ ಸಲುವಾಗಿ ಬಿಂಬಿಸುತ್ತಿರುವದು. ರಾಷ್ಟ್ರ ಮತ್ತು ರಾಜ್ಯದ ಬಿಜೆಪಿ ಪಕ್ಷದಲ್ಲಿ ಹಲವಾರು ಅಲ್ಪ ಸಂಖ್ಯಾತ ಸಮುದಾಯದ ನಾಯಕರುಗಳು ಬಿಜೆಪಿ ಪಕ್ಷದಲ್ಲಿ ಜವಬ್ದಾರಿಯುತ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸುತ್ತಿದ್ದಾರೆ. ಅಟಲ ಬಿಹಾರಿ ವಾಜಪೆ ಅವರ ಆಡಳಿತದಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯತೆ ನೀಡಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪ್ರಧಾನ ಮಂತ್ರಿ ಮೋದಿಯವರು ಅಭಿವೃದ್ಧಿ ಮಾಡುತ್ತಿವದರಿಂದಲೆ ಉತ್ತರ ಪ್ರದೇಶ ಮತ್ತು ಹಲವು ರಾಜ್ಯದಲ್ಲಿ ಅಲ್ಪ ಸಂಖ್ಯಾತರು ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಲ್ಲರೂ ಒಂದೆ ಎಂದು ಸಾಬಿತು ಪಡಿಸಿದೆದಾರೆ. ಕನಾಟಕದಲ್ಲಿ 2008 ರಲ್ಲಿ ಮುಖ್ಯ ಮಂತ್ರಿಯಾಗಿದ್ದ ಯಡಿಯುರಪ್ಪನವರು ವಿಶೇಷ ಅನುದಾನ ನೀಡಿ ಅಲ್ಪ ಸಂಖ್ಯಾತರ ಪರವಾಗಿ ನಾವುಇದ್ದೆವೆ ಎಂದು ತೋರಿಸಿಕೊಟ್ಟಿದ್ದಾರೆ. ಕಾಂಗ್ರೇಶ್ ಪಕ್ಷದವರು ಮತ ಬ್ಯಾಂಕ್ ಸಲುವಾಗಿ ವಡೆದು ಆಳುವ ನೀತಿ ಅನುಸರಿಸುತ್ತಾರೆ. ಪ್ರತಿಯೋಬ್ಬ ಪ್ರಜೆಯು ಪ್ರಭುದ್ದರಾಗಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ನಮ್ಮ ಮಕ್ಕಳನ್ನು ಬುದ್ದಿವಂತರನ್ನಾಗಿ ಮಾಡಿ ಈ ದೇಶದ ಸಲುವಾಗಿ ದುಡಿಯೋಣ ಎಂದು ತಿಳಿಸಿದರು. ಈದೆ ಸಂದರ್ಭದಲ್ಲಿ ಖಾರ್ಯಕ್ರಮ ಉದ್ಘಟಿಸಿದ ಮಾಜಿ ಶಾಸಕ ಕೆ. ಶರಣಪ್ಪ ಮಾತನಾಡಿ ಮಆತನಾಡಿ ಅಲ್ಪ ಸಂಖ್ಯಾತರನ್ನು ಒಂದೆ ಪಕ್ಷಕ್ಕೆ ಬ್ರಾಂಡ್ ಮಾಡಿ ಅವರನ್ನು ಅಸ್ಪøಶರಂತೆ ಕಾಣುತ್ತಿರುವ ಕಾಂಗ್ರೇಸ್ ಪಕ್ಷಕ್ಕೆ ಈಗ ಎನು ಎನ್ನುವದು ಸಂಪೂರ್ಣ ಅರ್ಥವಾಗಿದೆ. ಕಾಂಗ್ರೇಸಿನವರು ಎಷ್ಟೆಲ್ಲಾ ಸರ್ಕಸ್ ಮಾಡಿದರು ಅವರ ಆಟ ನಡೆಯುವುದಿಲ್ಲಿ. ಇದಕ್ಕೆ ಮೊನ್ನೆ ನಡೆದ ಐದು ರಾಜ್ಯಗಳ ಪಲಿತಾಂಶವೆ ಸಾಕ್ಷಿ ಎಂದು ತೀಳೀಸಿದರು ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಕೆಲೋಜಿ, ಶಶಿಧರ ಕವಲಿ, ನರಸಿಂಗ್‍ರಾವ್ ಕುಲಕರ್ಣಿ, ತಾಲುಕಾ ಅದ್ಯಕ್ಷ ತಮ್ಮಣ್ಣಾಚಾರ ದಿಗ್ಗಾವಿ, ಡಾ|| ಬಾಬು, ಜಿಲಾನಿ ಮುಲ್ಲಾ, ಮೈನುದ್ಧಿನ್ ಖಾಜಿ, ಫೀರ ಹುಸೇನ್, ಅಮುನುದ್ಧಿನ್ ಮುಲ್ಲಾ, ಮುಂತಾದವರು ಭಾಗವಿಸಿದ್ದರು.

loading...