loading...

ಅಬುಜಾ:-ನೈಜಿರಿಯಾದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಬೊಕೊ ಹರಾಮ ಉಗ್ರರು 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಅಪಹರಣ ಮಾಡಿದ್ದರು.ಉಗ್ರರು ಭಾನುವಾರ 80 ಬಾಲಕಿಯರನ್ನು ಬಿಡುಗಡೆ ಮಾಡಿದ್ದಾರೆ. ಸರ್ಕಾರ ಹಾಗೂ ಉಗ್ರರ ನಡುವೆ ಸಾಕಷ್ಟು ಒಪ್ಪಂದಗಳು ನಡೆದಿದ್ದವು, ಮಾಡಿದ ಒಪ್ಪಂದಗಳು ಉಗ್ರರಿಗೆ ಹಿಡಿಸಿರಲಿಲ್ಲ. ಇತ್ತೀಚೆÀಗಷ್ಟೆ  ಮತ್ತೊಮ್ಮೆ ಮಾತುಕತೆಗೆ ಮುಂದಾದ ಸರಕಾರ ಹಾಗೂ ಉಗ್ರರು ಅಪಹರಣ ಮಾಡಿದ್ದ ಬಾಲಕಿಯರನ್ನು ಬಿಡುಗಡೆ ಮಾಡುವ ಕುರಿತು ಒಪ್ಪಂದ ಮಾಡಿದ್ದರು. ಇದಕ್ಕೆ ಒಪ್ಪಿಕೊಂಡು ಉಗ್ರರು 80 ಬಾಲಕಿಯರನ್ನು ಬಿಡುಗಡೆ ಮಾಡಿದ್ದಾರೆ.

loading...